ಬೆಂಗಳೂರು: ಮೆಟ್ರೋ ಕಾಮಗಾರಿ (Metro Work) ನಡೆಯುವಲ್ಲಿ ಎಚ್ಚರದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಯಾಕೆಂದರೆ ಮೆಟ್ರೋ ಸುರಂಗ ಮಾರ್ಗ ಕಾಮಗಾರಿ ವೇಳೆ ರಸ್ತೆ ಕುಸಿದಿದ್ದು, ಮಸೀದಿಯೊಂದು ಬಿರುಕು ಬಿಟ್ಟಿರುವ ಘಟನೆ ಚಿನ್ನಯ್ಯನಪಾಳ್ಯದಲ್ಲಿ ನಡೆದಿದೆ.
ಕೆಲ ದಿನಗಳ ಹಿಂದೆ ನಾಗವಾರ ಸಮೀಪ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಮೃತಪಟ್ಟಿದ್ದರು. ಈ ದುರಂತದಿಂದ ಕಂಗೆಟ್ಟಿರುವ ಜನರಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಕಾಳೇನಾ ಅಗ್ರಹಾರದಿಂದ ನಾಗವಾರದವರೆಗೆ ಸುರಂಗ ಕೊರೆಯುತ್ತಿರುವ ಜಾಗದಲ್ಲಿ ಈಗ ರಸ್ತೆ ಕುಸಿದಿದೆ.
ಕಾಳೇನಾ ಅಗ್ರಹಾರದಿಂದ ನಾಗವಾರದವರೆಗೆ ಒಟ್ಟು 21 ಕಿ.ಮೀ ಉದ್ದದ ಮೆಟ್ರೋ ಸುರಂಗದ ಕಾಮಗಾರಿ ನಡೆಯುತ್ತಿದೆ. ಇದೇ ಮಾರ್ಗದಲ್ಲಿ ಬುಧವಾರ ಸಂಜೆ 6.30ರ ಸುಮಾರಿಗೆ ಸುರಂಗ ಮಾರ್ಗ ಕೊರೆಯುವಾಗ ಇದ್ದಕ್ಕಿದ್ದಂತೆ ರಸ್ತೆ ಕುಸಿದಿದೆ. ಪರಿಣಾಮ ಪಕ್ಕದಲ್ಲಿದ್ದ ಮಸೀದಿ ಗೋಡೆಯು ಬಿರುಕು ಬಿಟ್ಟಿದೆ. ಅದೃಷ್ಟವಶಾತ್ ಈ ಭಾಗದಲ್ಲಿ ಸಂಚಾರ ಕಡಿಮೆ ಇತ್ತು. ಜತಗೆ ಮಸೀದಿಯಲ್ಲಿದ್ದವರನ್ನು ಹೊರಗೆ ಕಳಿಸಿದ್ದರಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಕಬ್ಬಿಣದ ರಾಡ್‌ಗಳನ್ನು ಮಸೀದಿ ಗೋಡೆಗೆ ಒರಗಿಸಲಾಗಿದ್ದು, ಗೋಡೆ ಬೀಳದಂತೆ ನಿಲ್ಲಿಸಲಾಗಿದೆ. ಮಾತ್ರವಲ್ಲದೆ ಈ ಭಾಗದ ರಸ್ತೆಯನ್ನೂ ಬಂದ್ ಮಾಡಲಾಗಿದ್ದು, ಜನರ ಓಡಾಟ ನಿಷೇಧ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಆರ್‌ಸಿಎಲ್‌ನ ಸಿಪಿಆರ್‌ಓ ಯಶವಂತ್ ಚಾವ್ಹಣ್, ಈ ದುರಂತದಲ್ಲಿ ಯಾವ ಅಧಿಕಾರಿ ಹಾಗೂ ಸಿಬ್ಬಂದಿ ಬೇಜವಾಬ್ದಾರಿ ಇಲ್ಲ. ಮಣ್ಣು ಗಟ್ಟಿ ಇಲ್ಲದ ಕಾರಣ ಹೀಗಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Chikkamagaluru News: 30 ಅಡಿ ಆಳದ ತೆರೆದ ಬಾವಿಗೆ ಬಿದ್ದ ಬೆಕ್ಕಿನ ಮರಿ; ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗಿಳಿದು ರಕ್ಷಣೆ
ಘಟನೆ ಬಳಿಕ ಎಚ್ಚೆತ್ತಿರುವ ಬಿಎಂಆರ್‌ಸಿಎಲ್ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕಾಗಮಿಸಿ ಗುಂಡಿ ಬಿದ್ದ ರಸ್ತೆಗೆ ಸಿಮೆಂಟ್ ಹಾಕಿ ಸರಿ ಮಾಡಿದ್ದಾರೆ. ಇನ್ನು ಮಸೀದಿ ಸೇರಿದಂತೆ ಆ ಭಾಗದ ಸುತ್ತಮುತ್ತ ರಸ್ತೆಯ ಓಡಾಟವನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ.
ಬೆಂಗಳೂರಿನ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ