Site icon Vistara News

Midday Meal: ಸರ್ಕಾರಿ ಶಾಲೆಯಲ್ಲಿ ಟೀಚರ್ ಮಾಡಿದ್ದೇ ಪಾಠ, ಮಕ್ಕಳು ಆಡಿದ್ದೇ ಆಟ; ಪಾಠವೂ ಇಲ್ಲ ಬಿಸಿಯೂಟವೂ ಇಲ್ಲ

ಚಿಕ್ಕಮಗಳೂರು: ಮಕ್ಕಳಿಗೆ ವರದಾನವಾಗಬೇಕಿದ್ದ ಸರ್ಕಾರಿ ಶಾಲೆಗಳು ದುಸ್ಥಿತಿಯತ್ತ ತಲುಪುತ್ತಿವೆ. ಮಲೆನಾಡಿನ ಸರ್ಕಾರಿ ಶಾಲೆ ಮಕ್ಕಳಿಗೆ ಸರಿಯಾದ ಪಾಠವೂ ಇಲ್ಲ, ಬಿಸಿಯೂಟವೂ (Midday Meal) ಇಲ್ಲದಂತಾಗಿದೆ. ಇಲ್ಲಿನ ಎನ್.ಆರ್.ಪುರ ತಾಲೂಕಿನ ಬಿ.ಕಣಬೂರು ಸರ್ಕಾರಿ ಶಾಲೆಯ (Government School) ಶಿಕ್ಷಕರು ಮೊಬೈಲ್‌ನಲ್ಲಿ (mobile) ಮುಳುಗಿದ್ದರೆ, ಮಕ್ಕಳು ಗಲಾಟೆಯಲ್ಲಿ ಮಗ್ನರಾಗಿದ್ದಾರೆ.

ಕಣಬೂರು ಸರ್ಕಾರಿ ಶಾಲೆಯಲ್ಲಿ ಟೀಚರ್ ಮಾಡಿದ್ದೇ ಪಾಠ, ಮಕ್ಕಳು ಆಡಿದ್ದೇ ಆಟ ಎನ್ನುವಂತಾಗಿದೆ. 1 ರಿಂದ 7ನೇ ತರಗತಿಯಲ್ಲಿ ಒಟ್ಟು 117 ಮಕ್ಕಳಿದ್ದು ಹೇಳೋರಿಲ್ಲ-ಕೇಳೋರಿಲ್ಲ ಎಂಬಂತಾಗಿದೆ. ಹೀಗಾಗಿ ಶನಿವಾರ ಪೋಷಕರೆಲ್ಲ ಶಾಲೆಗೆ ಮುಗಿಬಿದ್ದು ತರಾಟೆಗೆ ತೆಗೆದುಕೊಂಡಿದ್ದಾರೆ.

Midday Meal

ಬಿಸಿಯೂಟದಲ್ಲಿ ಹುಳಗಳು ಪತ್ತೆ
ಮಕ್ಕಳಿಗೆ ನೀಡುವ ಬಿಸಿಯೂಟದಲ್ಲಿ ಏನೇನೂ ಇರುವುದಿಲ್ಲ ಜತೆಗೆ ಹುಳುಗಳೇ ಇರುತ್ತವೆ. ಇಂತಹ ಆಹಾರವನ್ನು ಮಕ್ಕಳಿಗೆ ನೀಡುತ್ತಿರುವುದರ ಬಗ್ಗೆ ಪೋಷಕರು ಕಿಡಿಕಾರಿದರು. ಏನನ್ನೂ ತಂದು ಕೊಡದೇ ಇದ್ದಾಗ ಹೇಗೆ ಅಡುಗೆ ಮಾಡುವುದು? ಮನೆಯಿಂದ ತಂದು ಮಾಡಬೇಕಾ? ನಮಗೆ ಸಿಗುವುದೇ ಮೂರು ಕಾಸು ಸಂಬಳ ಎಂದು ಅಡುಗೆ ಸಹಾಯಕಿಯರು ಅಸಹಾಯಕತೆ ತೋಡಿಕೊಂಡಿದ್ದಾರೆ.

ಇದನ್ನೂ ಓದಿ | Metro pillar collapse: ಮೆಟ್ರೋ ಪಿಲ್ಲರ್‌ ಕುಸಿತ: ಐಐಎಸ್‌ಸಿ ತಜ್ಞರ ತಂಡದ ವರದಿ ರೆಡಿ, ದುರಂತಕ್ಕೆ ಎಂಜಿನಿಯರ್‌ ಹೊಣೆ?

Exit mobile version