Site icon Vistara News

Midday Meal | ಮೈ ಮೇಲೆ ಬಿಸಿ ಸಾಂಬಾರ್‌ ಬಿದ್ದು ಶಾಲಾ ಮಕ್ಕಳಿಗೆ ಸುಟ್ಟ ಗಾಯ

ಯಾದಗಿರಿ: ಇಲ್ಲಿನ ಸುರಪುರ ತಾಲೂಕಿನ ಎಮ್.ಬೊಮ್ಮನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಮೇಲೆ ಬಿಸಿ ಸಾಂಬಾರ್‌ (Midday Meal) ಬಿದ್ದಿದೆ. ಮಕ್ಕಳಿಗೆ ಸುಟ್ಟ ಗಾಯಗಳಾಗಿವೆ.

ಬಿಸಿ ಸಾಂಬಾರ್‌ ಮೈಮೇಲೆ ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿಗಳಿಗೆ ಸುಟ್ಟ ಗಾಯಗಳಾಗಿವೆ. ಮಕ್ಕಳನ್ನು ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳು ಅಪಾಯದಿಂದ ಪಾರಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಶಾಲಾ ಸಿಬ್ಬಂದಿ ನಿರ್ಲಕ್ಷ್ಯತನಕ್ಕೆ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಅಡುಗೆ ಸಿಬ್ಬಂದಿ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Coronavirus | ಬೆಂಗಳೂರಿನಲ್ಲಿ ಶುರುವಾದ ಕೊರೊನಾ‌ ಆತಂಕ‌, ಲಸಿಕೆಗೆ ಹೆಚ್ಚಿದ ಬೇಡಿಕೆ

Exit mobile version