Site icon Vistara News

Earthquake: ಹೊಸಪೇಟೆ ಸಮೀಪ ಲಘು ಭೂಕಂಪನ; ಆತಂಕಗೊಂಡ ಸ್ಥಳೀಯರು

Mild earthquake hits village near Hospet

ವಿಜಯನಗರ: ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಯ್ಯನಹಳ್ಳಿಯಲ್ಲಿ ಮಂಗಳವಾರ ಲಘು ಭೂಕಂಪನ (Earthquake) ಸಂಭವಿಸಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಗ್ರಾಮದ ಸುತ್ತಮುತ್ತ 15 ರಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ.

ಭೂಕಂಪನದ ಮಾಹಿತಿ ಪಡೆದು ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರಿಕ್ಟರ್‌ ಮಾಪನದಲ್ಲಿ 2.9 ರಷ್ಟು ತೀವ್ರತೆ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಭೂಕಂಪನ ತೀವ್ರತೆ ಕಡಿಮೆ ಇದ್ದು, ಸ್ಥಳೀಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಿಲ್ಲ. ಭೂಮಿ ಸಣ್ಣ ಪ್ರಮಾಣದಲ್ಲಿ ಕಂಪಿಸಿದಂತೆ ಅನುಭವವಾಗಿದೆ. ಜನರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಸವಾರ ಸಾವು, ಮತ್ತೊಬ್ಬರಿಗೆ ಗಾಯ

ಕೊಪ್ಪಳ: ತಾಲೂಕಿನ ಹೊಸನಿಂಗಾಪುರ ಬಳಿ ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಸವಾರರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಕೆರೆಹಳ್ಳಿಯ ದೇವರಾಜ (24) ಮೃತ ಯುವಕ. ಐಆರ್‌ಬಿ ಪೊಲೀಸ್ ಶಂಕರಪ್ಪ ಗಾಯಾಳುವಾಗಿದ್ದಾರೆ. ಶಂಕರಪ್ಪ ಪರೇಡ್ ಮುಗಿಸಿಕೊಂಡು ಹೋಗುವಾಗ ಎದುರಿಗೆ ಬೈಕ್‌ನಲ್ಲಿ ಬಂದು ಡಿಕ್ಕಿ ಹೊಡೆದ ದೇವರಾಜ ದೇವರಾಜ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಲಹೊಂಗಲದ ಇಂಚಲ ಗ್ರಾಮದಲ್ಲಿ ಅಗ್ನಿದುರಂತ: 20ಕ್ಕೂ ಅಧಿಕ ರೈತರ ಬಣವೆ ಭಸ್ಮ, ಟ್ರ್ಯಾಕ್ಟರ್‌, ಕೃಷಿ ಸಲಕರಣೆ ಕರಕಲು

ಬೈಲಹೊಂಗಲ (ಬೆಳಗಾವಿ) : ತಾಲೂಕಿನ ಇಂಚಲ ಗ್ರಾಮದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ (Fire tragedy) ರೈತರ ಇಪ್ಪತ್ತಕ್ಕೂ ಹೆಚ್ಚು ಬಣವೆಗಳು ಸುಟ್ಟು ಬೂದಿಯಾಗಿವೆ. ಒಂದು ಟ್ಯಾಕ್ಟರ್ ಹಾಗೂ ಕೃಷಿ ಸಲಕರಣೆಗಳು ಸುಟ್ಟು ಕರಕಲಾಗಿವೆ. ಸೋಮವಾರ ರಾತ್ರಿ ಈ ದುರಂತ ಸಂಭವಿಸಿದೆ.

ರೈತರು ಬೆಳೆಗಳ ರಾಶಿ ಮುಗಿಸಿ ಗ್ರಾಮದ ಹೊರವಲಯದಲ್ಲಿ ಬಣವೆಗಳ ಮೂಲಕ ದನ ಕರುಗಳ ಮೇವು ಸಂಗ್ರಹಣೆ ಮಾಡಿದ್ದರು. ಬಿರು ಬಿಸಿಲಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಬಣವೆಗಳು, ಕೃಷಿ ಸಲಕರಣೆ ಬೆಂಕಿಗೆ ಆಹುತಿಯಾಗಿವೆ.

ವಿಷಯ ತಿಳಿದು ಅಗ್ನಿಶಾಮಕ ದಳದ ಎರಡು ವಾಹನ, ಪಕ್ಕದ ಜಮೀನಿನ ರೈತರು ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸಲು ಶ್ರಮಿಸಿದರೂ ನಿಯಂತ್ರಣಕ್ಕೆ ಬರಲಿಲ್ಲ. ಬೆಳಗಾವಿ, ಗೋಕಾಕ, ಸವದತ್ತಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ನೆರವಾದರು.

ಇದನ್ನೂ ಓದಿ | Attack on women : ಕುರಿಗಾಹಿ ಮಹಿಳೆಯರ ಮೇಲೆ ನಾಲ್ವರು ಪುಂಡರಿಂದ ಆಕ್ರಮಣ, ಜಾತಿ ನಿಂದನೆ ಆರೋಪ

ರೈತರು ತಮ್ಮ ಬೋರ್‌ ವೆಲ್ ಮೂಲಕ ನೀರು ತಂದು ಬೆಂಕಿ ನಂದಿಸಲು ಶ್ರಮಿಸಿದರು. ಬಣವೆ ಸುತ್ತಮುತ್ತ ಮನೆಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ. ಗೋವಿನ ಜೋಳದ ಬೆಳೆ, ಜೋಳ ಹಾನಿಯಾಗಿದೆ. ಬಿಸಿಎಂ ಹಾಸ್ಟೆಲ ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಅರಿತು ಕಣದಲ್ಲಿರುವ ಎತ್ತುಗಳ ಕಣಿ ಬಿಚ್ಚಿದ ಪರಿಣಾಮ ಎತ್ತಗಳು ಸುರಕ್ಷಿತವಾಗಿ ಉಳಿದವು.

ಸತತ 6 ಗಂಟೆಗಳ ಕಾಲ ನಿರಂತರವಾಗಿ ಆಗ್ನಿಶಾಮಕದಳದ ಸಿಬ್ಬಂದಿ, ರೈತರು, ನೂರಾರು ನಾಗರೀಕರು ಬೆಂಕಿ ನಂದಿಸಲು ನೆರವಾದರು. ದನಕರುಗಳಿಗೆ ಸಂಗ್ರಹಿಸಿಟ್ಟದ್ದ ಬಣವೆಗಳಿಗೆ ಏಕಾಎಕಿ ಬೆಂಕಿ ತಗುಲಿ ಅಪಾರ ನಷ್ಟವಾಗಿದ್ದು ಸರ್ಕಾರ ಕೂಡಲೇ ಪರಿಹಾರ ಕಲ್ಪಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

Exit mobile version