Site icon Vistara News

Minchu Srinivasa Award: ಪತ್ರಕರ್ತರು ಜನಜಾಗೃತಿ ಮೂಡಿಸಬೇಕು, ಜನಪ್ರತಿನಿಧಿಗಳ ಕಣ್ತೆರೆಸಬೇಕು: ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ

Minchu Srinivasa Award journalist Nagesh Hegde shivamogga

#image_title

ಶಿವಮೊಗ್ಗ: ʻʻಪತ್ರಕರ್ತರು ಪತ್ರಿಕೆಯಲ್ಲಿ ಬರೆಯುವ ಕೆಲಸವನ್ನು ಮಾತ್ರ ಮಾಡುತ್ತಿರುವುದಲ್ಲ. ಜನಜಾಗೃತಿ ಮೂಡಿಸಬೇಕು, ಹೋರಾಟ ಮಾಡಬೇಕು. ಆಳುವ ವರ್ಗ, ಸರ್ಕಾರ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕಣ್ತೆರೆಸಬೇಕುʼʼ ಎಂದು ಪರಿಸರವಾದಿ ಮತ್ತು ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ (Minchu Srinivasa Award) ಹೇಳಿದರು.

ಇಲ್ಲಿನ ಸುವರ್ಣ ಸಂಸ್ಕೃತಿ ಭವನದಲ್ಲಿ ಭಾನುವಾರ (ಫೆ.೧೨) ನಡೆದ ಕಾರ್ಯಕ್ರಮದಲ್ಲಿ ಧಾರವಾಡದ ಸಾಕಾರ ಸಂಸ್ಥೆ ಮತ್ತು ಮಿಂಚು ಶ್ರೀನಿವಾಸ ಕುಟುಂಬ ವರ್ಗ ಕೊಡ ಮಾಡುವ ಮಿಂಚು ಶ್ರೀನಿವಾಸ ವಾರ್ಷಿಕ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ʻʻಅಭಿವೃದ್ಧಿ ಬಗ್ಗೆ ಜನರಲ್ಲಿ ಮೊದಲು ಅರಿವು ಮೂಡಿಸಬೇಕು. ಅಭಿವೃದ್ಧಿ ಎಂದರೆ ಈಗ ಎತ್ತರದ ಕಟ್ಟಡ ಕಟ್ಟುವುದು, ಫ್ಲೈ ಓವರ್ ನಿರ್ಮಿಸುವುದೇ ಆಗಿದೆ. ತಳಮಟ್ಟದಲ್ಲಿ ಜನರಿಗೆ ಬೇಕಾದ ಕೆಲಸವಾಗುತ್ತಿಲ್ಲʼʼ ಎಂದು ವಿಷಾದಿಸಿದರು.

ʻಭಾರತದ ಪತ್ರಿಕೋದ್ಯಮವು ವಿಶ್ವದಲ್ಲಿ ಅತ್ಯಂತ ಕೆಳ ಸ್ಥಾನದಲ್ಲಿದೆ. ಪರಿಸರ, ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ೧೮೦ನೇ ಮತ್ತು ೧೩೨ನೇ ಸ್ಥಾನದಲ್ಲಿದೆ. ಪತ್ರಿಕೋದ್ಯಮ ಮತ್ತು ಪತ್ರಕರ್ತರು ಕಾರ್ಪೊರೇಟ್ ವಲಯದ ಸುಳಿಗೆ ಸಿಲುಕಿರುವುದು ಇದಕ್ಕೆ ಕಾರಣʼ ಎಂದು ಹೇಳಿದರು.

ಇದನ್ನೂ ಓದಿ: ವಿಸ್ತಾರ Explainer : Pakistan economy : ಐಎಂಎಫ್‌ನಿಂದ ಕನಿಷ್ಠ 10,000 ಕೋಟಿ ರೂ. ಸಾಲಕ್ಕೂ ಪಾಕ್ ಪರದಾಟ, ಮತ್ತೆ ಮಾತುಕತೆ

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕ, ಚಿಂತಕ ವೈ ಎಸ್ ವಿ ದತ್ತ ಮಾತನಾಡಿ, ʻʻಈಗ ಪತ್ರಕರ್ತರಾಗುವವರಿಗೆ ಜ್ಞಾನ ಬೇಕಿಲ್ಲ, ವಿಷಯದ ಮಾಹಿತಿ ಬೇಕಿಲ್ಲ. ಜಾಹೀರಾತು ಕೊಡಿಸುವ ಶಕ್ತಿ ಇದ್ದರೆ ಸಾಕು ಎನ್ನುವ ಸ್ಥಿತಿ ಬಂದಿದೆ. ಪತ್ರಿಕಾರಂಗ ಉದ್ಯಮ ಕ್ಷೇತ್ರವಾಗುತ್ತಿರುವುದರಿಂದ ಪತ್ರಕರ್ತರು ಸಹ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದಾರೆ. ಪತ್ರಿಕಾರಂಗವೂ ರಾಜಕೀಯದಂತೆ ದಾರಿ ತಪ್ಪಿದೆʼʼ ಎಂದು ಅಭ್ರಿಪಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: Vistara Kathaspardhe: ಇದು ಪ್ಯಾನ್‌ ಇಂಡಿಯಾ ಸ್ಪರ್ಧೆಯಾಗಲಿ: ವಿಸ್ತಾರ ನ್ಯೂಸ್‌ ಕಥಾಸ್ಪರ್ಧೆಗೆ ಸಾಹಿತ್ಯಲೋಕ ಮೆಚ್ಚುಗೆ

ʼಮೊದಲೆಲ್ಲ ಸಂಪಾದಕೀಯ ಬರೆದರೆ ರಾಜಕೀಯ ಪಲ್ಲಟವಾಗುತ್ತಿತ್ತು. ಅದರ ಬಗ್ಗೆ ಚರ್ಚೆ, ಸಂವಾದ ನಡೆಯುತ್ತಿತ್ತು. ಈಗ ಸಂಪಾದಕೀಯ ಇರಲಿ, ವಾಚಕರ ವಾಣಿಯನ್ನೂ ಓದುವವರಿಲ್ಲ, ಅದಕ್ಕೆ ಬೆಲೆ ಇಲ್ಲದಂತಾಗಿದೆ. ಪ್ರಾಮಾಣಿಕತೆ ಯಾವತ್ತೂ ಪತ್ರಕರ್ತರಿಂದ ಹೊರಟು ಹೋಯಿತೋ ಆವತ್ತಿನಿಂದ ಇವೆಲ್ಲವೂ ಬೆಲೆ ಕಳೆದುಕೊಂಡಿವೆ. ಪತ್ರಕರ್ತರು ಇಂದು ಬಗ್ಗು ಎಂದರೆ ತೆವಳುತ್ತೇನೆ ಎನ್ನುವ ಸ್ಥಿತಿಗೆ ಇಳಿದಿದ್ದಾರೆ. ದಿಟ್ಟತನ, ನೇರ, ನಿಷ್ಠುರತೆ ಮಾಯವಾಗಿದೆʼ ಎಂದರು.

ಇದನ್ನೂ ಓದಿ: Dhruva Sarja: ಮೊದಲ ಬಾರಿ ಮಗಳ ಫೋಟೊ ಹಂಚಿಕೊಂಡ ಧ್ರುವ ಸರ್ಜಾ ಪತ್ನಿ ಪ್ರೇರಣಾ

ಮಿಂಚು ಶ್ರೀನಿವಾಸ ಪ್ರಶಸ್ತಿ ೧೦ನೆಯ ವರ್ಷಕ್ಕೆ ಕಾಲಿಟ್ಟಿರುವುದರಿಂದ ಈ ನಿಮಿತ್ತ ಹೊರತರಲಾದ ಸ್ಮರಣ ಸಂಚಿಕೆಯನ್ನು ಸಾಹಿತಿ ನಾ. ಡಿಸೋಜ ಬಿಡುಗಡೆಗೊಳಿಸಿದರು. ಸಮಾಜವಾದಿ, ಮಾಜಿ ಶಾಸಕ ಕೋಣಂದೂರು ಅಧ್ಯಕ್ಷತೆ ಲಿಂಗಪ್ಪ ವಹಿಸಿದ್ದರು. ರವಿಕುಮಾರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕುವೆಂಪು ವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಎನ್. ಆರ್. ಉಮೇಶ್ ಅವರಿಗೆ ದತ್ತಾತ್ರೇಯ ಕುಲಕರ್ಣಿ ಶಿಕ್ಷಣ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೇದಿಕೆಯಲ್ಲಿ ಸಾಕಾರದ ಗೌರವಾಧ್ಯಕ್ಷೆ ನಾಗರತ್ನ ಹಡಗಲಿ, ಕಾರ್ಯದರ್ಶಿ ಡಾ. ಶುಭದಾ ಹಾಜರಿದ್ದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ ಪ್ರಾಸ್ತಾವಿಕ ಮಾತನಾಡಿದರು. ಜ್ಯೋತಿ ರವಿಕುಮಾರ್ ಪ್ರಾರ್ಥಿಸಿದರು. ಸುಪ್ರದಾ ರವಿಕುಮಾರ್ ಸ್ವಾಗತಿಸಿದರು. ರಾಮಚಂದ್ರ ಗುಣಾರಿ ನಾಗೇಶ್ ಹೆಗಡೆ ಅವರ ಪರಿಚಯ ಮಾಡಿಕೊಟ್ಟರು. ವೈದ್ಯ ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿ: Indian Military: ಭಾರತೀಯ ಸೇನೆಗೆ ಕೃತಕ ಬುದ್ಧಿಮತ್ತೆ ನೆರವು, ಎಲ್ಲೆಲ್ಲಿ ಬಳಕೆ?

Exit mobile version