Site icon Vistara News

ಹಾಸನಕ್ಕೆ ಹೊರಟಿದ್ದ ಸಚಿವರಿಗೆ ಕುಣಿಗಲ್​​ನಲ್ಲಿ ಕಣ್ಣಿಗೆ ಗಾಯ; ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

Minister KN Rajanna

#image_title

ಕುಣಿಗಲ್​: ಸಹಕಾರಿ ಸಚಿವ ಮತ್ತು ಹಾಸನ ಉಸ್ತುವಾರಿ ಸಚಿವರಾಗಿರುವ ಕೆ.ಎನ್​.ರಾಜಣ್ಣ (K N Rajanna) ಅವರ ಕಣ್ಣಿಗೆ ಗಾಯವಾಗಿ, ತುಮಕೂರಿನ ಕುಣಿಗಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕೆ.ಎನ್​.ರಾಜಣ್ಣವನರ ಆಗಮನದ ಖುಷಿಗಾಗಿ ಅವರ ಅಭಿಮಾನಿಗಳು, ಕಾರ್ಯಕರ್ತರು ಸೇರಿ ಪಟಾಕಿ ಹಚ್ಚಿ ಸಂಭ್ರಮಿಸಿದ್ದರು. ಆದರೆ ಸಿಡಿದ ಪಟಾಕಿ ರಾಜಣ್ಣನವರ ಕಣ್ಣಿಗೆ ತಗುಲಿ ಅವಾಂತರವಾಗಿದೆ.

ಹಾಸನ ಉಸ್ತುವಾರಿ ಸಚಿವರಾಗಿರುವ ಕೆ.ಎನ್​.ರಾಜಣ್ಣನವರು ಇಂದು ಅಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡುವ ಸಲುವಾಗಿ ಕುಣಿಗಲ್ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿದ್ದರು. ರಾಜಣ್ಣ ಆಗಮನದ ಸುದ್ದಿ ಕೇಳುತ್ತಿದ್ದಂತೆ ಕುಣಿಗಲ್ ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದ ಬಳಿ, ಅವರ ಅಭಿಮಾನಿಗಳು, ಕಾರ್ಯಕರ್ತರು ಜಮಾಯಿಸಿದ್ದರು. ಹಾಗೇ, ಸಚಿವರ ಕಾರನ್ನು ತಡೆದು ಅವರಿಗೆ ಹೂಮಾಲೆ ಹಾಕಿ ಅಭಿನಂದಿಸಿದರು. ಇದೇ ವೇಳೆ ಕೆಲವರು ಸಮೀಪದಲ್ಲೇ ಪಟಾಕಿ ಹಚ್ಚಿದ್ದರು. ಅದು ಸಿಡಿದು ರಾಜಣ್ಣನವರ ಕಣ್ಣಿಗೇ ಬಂದು ಬಡಿದಿದೆ. ಅಂಥ ಗಂಭೀರ ಸ್ವರೂಪದ ಗಾಯವಾಗಿಲ್ಲ. ಆದರೆ ಕೆ.ಎನ್​.ರಾಜಣ್ಣನವರು ಕೂಡಲೇ ಕುಣಿಗಲ್​ನ ಎಂ.ಎಂ ಖಾಸಗಿ ಆಸ್ಪತ್ರೆಎ ತೆರಳಿ ನೇತ್ರತಜ್ಞ ಡಾ. ರವಿಕುಮಾರ್ ಅವರಿಂದ ಚಿಕಿತ್ಸೆ ಪಡೆದು, ಹಾಸನಕ್ಕೆ ತೆರಳಿದ್ದಾರೆ.

ಇದನ್ನೂ ಓದಿ:G S Basavaraj | ಕಾಂಗ್ರೆಸ್‌ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಪರ ಮತಯಾಚಿಸಿದ ಬಿಜೆಪಿ ಸಂಸದ ಜಿ.ಎಸ್.ಬಸವರಾಜು!

Exit mobile version