ರೋಣ: ಗದಗ ಜಿಲ್ಲೆಯ ರೋಣ ತಾಲೂಕಿನ ಹಾಲಕೆರೆ ಮಠದ ಬೆಳ್ಳಿ ರಥೋತ್ಸವಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar), ಸೋಮವಾರ ಚಾಲನೆ ನೀಡಿದರು.
ಹಾಲಕೆರೆ ಮಠದ ಜಗದ್ಗುರು ಮುಪ್ಪಿನ ಬಸವಲಿಂಗ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಳಬಳ್ಳಾರಿ ಸುವರ್ಣಗಿರಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ, ಸಂತೆಕಲ್ಲೂರಿನ ಘನಮಠೇಶ್ವರ ಮಠದ ಗುರುಬಸವ ಸ್ವಾಮೀಜಿ, ನೀಲಗುಂದದ ಪ್ರಭುಲಿಂಗ ಸ್ವಾಮೀಜಿ, ಕರೇಗುಡ್ಡ ಮಹಾಂತೇಶ್ವರ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ವಳಬಳ್ಳಾರಿ ಸುವರ್ಣಗಿರಿ ವಿರಕ್ತ ಮಠದ ಬಸವಲಿಂಗ ಸ್ವಾಮೀಜಿ, ಖೇಳಗಿ ಶ್ರೀ ಶಿವಲಿಂಗೇಶ್ವರಮಠದ ಶಿವಲಿಂಗ ಸ್ವಾಮೀಜಿ, ಸೋಮಸಮುದ್ರದ ಸಿದ್ದಲಿಂಗ ದೇಶಿಕರು, ಶ್ರೀಧರಗಡ್ಡೆಯ ಮರಿಕೊಟ್ಟೂರು ದೇಶಿಕರು, ರೋಣ ಅಕ್ಕನಬಳಗದ ಅಧ್ಯಕ್ಷೆ ಅನ್ನಪೂರ್ಣ ಜಿ. ಪಾಟೀಲ, ಹಾಲಕೆರೆ ಕೆ.ವಿ.ಜಿ ಬ್ಯಾಂಕಿನ ಮ್ಯಾನೇಜರ್ ಕದಿರಿ ಶ್ರೀರಿತಾ, ವೀಣಾ ಪಾಟೀಲ್, ಅನ್ನಪೂರ್ಣ ಪಾಟೀಲ, ಕಮಲಾ ಹುನಗುಂದ, ಹಾಲಕೆರೆ ಮಠದ ಭಕ್ತರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಇದನ್ನೂ ಓದಿ: NIRF 2024 Rank: ದೇಶದಲ್ಲೇ ಮದ್ರಾಸ್ ಐಐಟಿ ಬೆಸ್ಟ್; ಬೆಂಗಳೂರಿನ ಐಐಎಸ್‌ಸಿ ನೆಕ್ಸ್ಟ್; ಇಲ್ಲಿದೆ ಪೂರ್ಣ ಪಟ್ಟಿ
ಇದೇ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಅಕ್ಕಮಹಾದೇವಿ ಮಾತೃ ಬಳಗಕ್ಕೆ ಸಹ ಚಾಲನೆ ನೀಡಿದರು.