ಭಟ್ಕಳ: ನನಗೆ ಇಂತಹದ್ದೇ ಹುದ್ದೆ ಬೇಕು ಎಂಬ ಭ್ರಮೆಯಿಂದ ಹೊರಬಂದು ದೊರೆತ ಅವಕಾಶಗಳನ್ನು (Opportunities) ಬಳಸಿಕೊಂಡು ಜೀವನದಲ್ಲಿ ಯಶಸ್ಸಿನ (Success) ಹಾದಿಯನ್ನು ಕಾಣಬೇಕು ಎಂದು ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ಎಸ್.ವೈದ್ಯ ಯುವಕರಿಗೆ ಕಿವಿ ಮಾತು ಹೇಳಿದರು.
ಅಸೋಸಿಯೇಶನ್ ಆಫ್ ಮುಸ್ಲಿಂ ಪ್ರೊಫೆಶನಲ್ಸ್ ಸಹಯೋಗದೊಂದಿಗೆ ಇಂಡಿಯನ್ ನವಾಯತ್ ಫೋರಂ ವತಿಯಿಂದ ಶನಿವಾರ ಆಮ್ನಾ ಪ್ಯಾಲೇಸ್‌ನಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ಉದ್ಯೋಗ ಮೇಳದಲ್ಲಿ 100 ಕ್ಕೂ ಹೆಚ್ಚು ಕಂಪನಿಗಳ ಉದ್ಯೋಗದಾತರು ಆಗಮಿಸಿದ್ದು ಉದ್ಯೋಗವನ್ನು ಅರಸಿ ಬಂದ ಯುವ ಜನತೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ: Kichcha Sudeep: ತಿಮ್ಮಪ್ಪನ ದರ್ಶನ ಪಡೆದ ಕಿಚ್ಚ ಸುದೀಪ್!
ಯಶಸ್ಸು ಎನ್ನುವುದು ಸುಮ್ಮನೆ ಕೈಕಟ್ಟಿ ಕುಳಿತುಕೊಂಡರೆ ಸಿಗದು. ಅದಕ್ಕಾಗಿ ಕಷ್ಟಪಡಬೇಕು. ಓದಿಗೆ ತಕ್ಕಂತೆ ಉದ್ಯೋಗ ಸಿಗದೇ ಇದ್ದಲ್ಲಿ, ನಿರಾಶರಾಗದೆ ಸಿಕ್ಕ ಉದ್ಯೋಗದಲ್ಲಿ ತೃಪ್ತಿಯೊಂದಿಗೆ ಕೆಲಸ ಮಾಡಿದರೆ ಮುಂದೊಂದು ದಿನ ಯಶಸ್ವಿನ ಶಿಖರವೇರಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಎನ್‌ಎಫ್ ಅಧ್ಯಕ್ಷ ಅರ್ಷದ್ ಮೊಹತೆಶಮ್ ಮಾತನಾಡಿ, ಐಎನ್‌ಎಫ್ ಸಂಸ್ಥೆಯು ಯುವಕರನ್ನು ಸಬಲೀಕರಣಗೊಳಿಸುವಲ್ಲಿ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಇತ್ತೀಚೆಗೆ ನಡೆದ ಟ್ರೇಡ್ ಎಕ್ಸ್ಪೋ ಅತ್ಯಂತ ಯಶಸ್ವಿಯಾಗಿದ್ದು ಇಂದು ನಡೆಯುತ್ತಿರುವ ಈ ಮೇಗಾ ಉದ್ಯೋಗ ಮೇಳದಲ್ಲಿ ದೇಶ ಮತ್ತು ವಿದೇಶದ 40ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿವೆ. ಇದರಿಂದಾಗಿ ಉ.ಕ. ಜಿಲ್ಲೆಯ 3000 ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ಲಭಿಸುವ ವಿಶ್ವಾಸವಿದೆ ಎಂದರು.
ಇದನ್ನೂ ಓದಿ: Road Accident: ಬೈಕ್ಗೆ ಅಪರಿಚಿತ ವಾಹನ ಗುದ್ದಿದ ರಭಸಕ್ಕೆ ಸವಾರನ ಕಣ್ಣುಗುಡ್ಡೆಯೇ ಹೊರಕ್ಕೆ!
ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಡಾ.ನಯನಾ, ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಜಿ ಮೌಲಾನ ಅಬ್ದುಲ್ ರಬ್ ನದ್ವಿ, ಖಲಿಫಾ ಜಮಾಅತ್ ಪ್ರಧಾನ ಖಾಜಿ ಮೌಲಾನ ಕ್ವಾಜಾ ಅಕ್ರಮಿ ಮದನಿ ನದ್ವಿ, ಎಎಂಪಿ ಕರ್ನಾಟದ ಪ್ರತಿನಿಧಿ ನಝೀರ್ ಆಹ್ಮದ್ ಮಾತನಾಡಿದರು.
ಈ ಸಂದರ್ಭದಲ್ಲಿ ರಾಬಿತಾ ಸೊಸೈಟಿಯ ಅಧ್ಯಕ್ಷ ಉಮರ್ ಫಾರೂಖ್ ಮುಸ್ಬಾ, ಪ್ರಧಾನ ಕಾರ್ಯದರ್ಶಿ ಡಾ.ಅತೀಕುರ‍್ರಹ್ಮಾನ್ ಮುನಿರಿ, ಉದ್ಯಮಿ ಮುಹಮ್ಮದ್ ಯುನೂಸ್ ಖಾಝಿಯಾ, ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ., ಅಂಜುಮನ್ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯಿಲ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ: Weather Report : ಬೆಂಗಳೂರು ಸೇರಿ ಕರಾವಳಿ, ಮಲೆನಾಡಲ್ಲಿ ನಾಳೆ ಚಿಟಪಟ ಮಳೆ
ಐಎನ್‌ಎಫ್ ಪ್ರಧಾನ ಕಾರ್ಯದರ್ಶಿ ನೋಮಾನ್ ಪಟೇಲ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಉದ್ಯೋಗ ಮೇಳದ ಸಂಚಾಲಕ ಸೈಯ್ಯದ್ ಫೈಝಾನ್ ಬರ್ಮಾವರ್ ಕಾರ್ಯಕ್ರಮ ನಿರೂಪಿಸಿದರು.