Site icon Vistara News

Lalbagh Flower Show | ಆ.5ರಿಂದ 15ರವರೆಗೆ ಫಲ-ಪುಷ್ಪ ಪ್ರದರ್ಶನ: ಸಚಿವ ಮುನಿರತ್ನ

ಲಾಲ್‌ಬಾಗ್

ಬೆಂಗಳೂರು: ನಗರದ ಲಾಲ್‌ಬಾಗ್‌ನಲ್ಲಿ ಆಗಸ್ಟ್‌ 5ರಿಂದ 15ರವರೆಗೆ ಫಲ ಪುಷ್ಪ ಪ್ರದರ್ಶನ (Lalbagh Flower Show) ಹಮ್ಮಿಕೊಳ್ಳಲಾಗಿದೆ. ಈ ಬಾರಿಯ ಕಾರ್ಯಕ್ರಮವನ್ನು ಖ್ಯಾತ ನಟರಾದ ಡಾ.ರಾಜಕುಮಾರ್ ಹಾಗೂ ಪುನೀತ್‌ ರಾಜಕುಮಾರ್‌ ಅವರಿಗೆ ಅರ್ಪಿಸಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಕೋವಿಡ್‌ ಹಿನ್ನೆಲೆಯಲ್ಲಿ ಫಲ ಪುಷ್ಪ ಪ್ರದರ್ಶನ ಹಮ್ಮಿಕೊಂಡಿರಲಿಲ್ಲ,‌ ಈ ಬಾರಿಯ 212ನೇ ಲಾಲ್‌ಬಾಗ್ ಫಲ ಪುಷ್ಪ ಪ್ರದರ್ಶನ ಆಗಸ್ಟ್‌ 5ರಿಂದ 15ರವರೆಗೆ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಫ್ಲವರ್ ಷೋ ನಡೆಯಲಿದ್ದು, ಸುಮಾರು 15 ಲಕ್ಷ ಜನ ಆಗಮಿಸುವ ಸಾಧ್ಯತೆ ಇದೆ. ಪುನೀತ್ ರಾಜಕುಮಾರ್‌ ಅವರ ಪತ್ನಿ ಅಶ್ವಿನಿ, ರಾಘವೇಂದ್ರ ರಾಜಕುಮಾರ್ ಸೇರಿ ಕುಟುಂಬಸ್ಥರು, ಶಕ್ತಿಧಾಮ ಮಕ್ಕಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಈ ಬಾರಿ 75 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದ್ದು, 10ನೇ ತರಗತಿವರೆಗಿನ ಮಕ್ಕಳಿಗೆ ಉಚಿತ ಪ್ರವೇಶವಿರಲಿದೆ. ಪುನೀತ್ ರಾಜಕುಮಾರ್ ಅವರ 35 ಅಡಿ ಎತ್ತರದ ಚಿನ್ನದ ಲೇಪನ ಪ್ರತಿಮೆಯನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದ್ದು, ಅದೇ ರೀತಿ ಡಾಕ್ಟರ್ ರಾಜಕುಮಾರ್ ವಾಸ ಮಾಡಿದ ಮನೆಯನ್ನು ಹೂವಿನ ಅಲಂಕಾರದಲ್ಲಿ ನಿರ್ಮಿಸಲಾಗಿದೆ. ದೇಶ ಹಾಗೂ ವಿದೇಶಗಳಿಂದ ವಿವಿಧ ಬಗೆಯ ಹೂವಿನ ಸಸಿಗಳನ್ನು ಪ್ರದರ್ಶನಕ್ಕೆ ತರಲಾಗಿದೆ ಎಂದರು.

ಇದನ್ನೂ ಓದಿ | Lalbagh | ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ನಟ ಶಿವರಾಜ್‌ಕುಮಾರ್‌ ಜತೆ ಶಕ್ತಿಧಾಮ ಮಕ್ಕಳ ಭೇಟಿ

Exit mobile version