Site icon Vistara News

Mobile Addiction : ಪೋಷಕರೇ ಹಾಕಿಕೊಳ್ಳಿ ಈ ಆ್ಯಪ್, ಮಕ್ಕಳು ಮುಟ್ಟಿದ ತಕ್ಷಣ ಮೊಬೈಲ್ ಆಫ್!

Children Mobile addicted App

ಬೆಂಗಳೂರು: ಒಂದು ಕಾಲದಲ್ಲಿ ಮಕ್ಕಳು ಅತ್ತರೆ, ಹಠ ಮಾಡಿದರೆ ಅಪ್ಪ-ಅಮ್ಮಂದಿರು ಚಾಕೋಲೆಟ್‌ ಕೊಟ್ಟೋ ಅಥವಾ ಬೇರೆ ಏನಾದರೂ ಆಸೆ ತೋರಿಸಿ ಸಮಾಧಾನ ಪಡಿಸುತ್ತಿದ್ದರು. ಈಗ ಕಾಲ ಬದಲಾಯಿತೋ ಇಲ್ವೋ, ಆದರೆ ಜನರಂತೂ ಬದಲಾಗಿದ್ದಾರೆ. ಮಕ್ಕಳು ಅತ್ತರೆ ಸಾಕು ಕೈಗೆ ತಮ್ಮ ಮೊಬೈಲ್‌ ಫೋನ್‌ (Mobile Addiction) ಕೊಟ್ಟು ಸಮಾಧಾನ ಪಡಿಸಲು (phone addiction child) ಮುಂದಾಗುತ್ತಿದ್ದಾರೆ.

ಕೋವಿಡ್‌ (After Covid) ಬಳಿಕ ಮಕ್ಕಳು ಓದಿನ ನೆಪವೊಡ್ಡಿ ತಮಗಾಗಿಯೇ ಒಂದು ಫೋನ್‌ ಖರೀದಿಗೂ ಮುಂದಾಗಿದ್ದಾರೆ. ಇತ್ತೀಚೆಗೆ ಮಕ್ಕಳು ಮೊಬೈಲ್‌ ಫೋನ್‌ ವ್ಯಸನಿಗಳಾಗಿದ್ದಾರೆ. ಭಾಗಶಃ ಮಕ್ಕಳು ಹಾಗೂ ಮಕ್ಕಳ ಪೋಷಕರು ಹೊರಾಂಗಣ ಆಟಕ್ಕೆ ಬ್ರೇಕ್‌ ಹಾಕಿದ್ದು, ಮೊಬೈಲ್‌ನಲ್ಲಿ ಆಟ ಆಡಲು ಬಯಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಸದ್ಯ ಮಕ್ಕಳ ಮೊಬೈಲ್‌ ವ್ಯಾಮೋಹಕ್ಕೆ ಕಡಿವಾಣ ಹಾಕಲು ರಾಜ್ಯ ಮಕ್ಕಳ ಆಯೋಗವು ಮುಂದಾಗಿದೆ. ಮಕ್ಕಳು ಕೇವಲ ಶೈಕ್ಷಣಿಕ ಬಳಕೆಗಷ್ಟೇ ಫೋನ್‌ ಬಳಸುವಂತೆ ಹಾಗೂ ಅವರಿಗೆ ಅಗತ್ಯವಲ್ಲದ ಆ್ಯಪ್‌ ತೆರಯಲು ಸಾಧ್ಯವಾಗದಂತೆ ಮಾಡಲು ಮುಂದಾಗಿದೆ. ಮಕ್ಕಳು ಮೊಬೈಲ್‌ ಬಳಸುವಾಗ ಅವರ ಬೆರಳ ಸ್ಪರ್ಶದಿಂದ ಕೆಲವೊಂದು ಆ್ಯಪ್‌ಗಳು ಓಪನ್‌ ಆಗದಂತೆ ಮಾಡಲು ಆಯೋಗ ತಯಾರಿ ನಡೆಸಿದೆ.

ಇದನ್ನೂ ಓದಿ: Heart Attack : 19ರ ಹರೆಯದ ನರ್ಸಿಂಗ್‌ ವಿದ್ಯಾರ್ಥಿನಿಯನ್ನು ಬಲಿ ಪಡೆದ ಹೃದಯಾಘಾತ

ಇನ್ಫೋಸಿಸ್‌ನಿಂದ ಆ್ಯಪ್‌ ಸಿದ್ಧತೆ

ಮಕ್ಕಳ ಮೊಬೈಲ್‌ ಗೀಳು ತಪ್ಪಿಸಲು ಸಾಧ್ಯವಾಗದೆ ಇದ್ದರೂ, ಅವರಿಗೆ ಅಗತ್ಯವಲ್ಲದ ವೆಬ್‌ಸೈಟ್‌ಗಳು ತೆರೆಯದಂತೆ ಮಾಡುವುದು ಮೂಲ ಉದ್ದೇಶವಾಗಿದೆ. ಮಕ್ಕಳ ಶೈಕ್ಷಣಿಕ ಬೆಳವಣಿಗಾಗಿ ಮಾತ್ರ ಮೊಬೈಲ್‌ ಬಳಕೆ ಆಗುವಂತೆ ಆ್ಯಪ್‌ ಸಿದ್ಧಪಡಿಸಲಾಗುತ್ತಿದೆ. ರಾಜ್ಯ ಮಕ್ಕಳ ಆಯೋಗವು ಇದಕ್ಕಾಗಿ ಆ್ಯಪ್‌ವೊಂದನ್ನು ಸಿದ್ಧಪಡಿಸಲು ಯೋಜನೆ ರೂಪಿಸಿದೆ. ಇದರ ಸಂಬಂಧ ಇನ್ಫೋಸಿಸ್‌ ಜತೆಗೂ ಮಾತುಕತೆ ನಡೆಸುತ್ತಿದೆ. ಆ್ಯಪ್‌ ಯಾವ ರೀತಿ ಇರಬೇಕು, ಅದನ್ನೂ ಯಾವ ರೀತಿ ಬಳಕೆ ಮಾಡಬಹುದು ಎಂಬಿತ್ಯಾದಿಯಲ್ಲಿ ಚರ್ಚೆ ನಡೆಯುತ್ತಿದೆ ಎಂದು ವಿಸ್ತಾರ ನ್ಯೂಸ್‌ಗೆ ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷ ನಾಗಣ್ಣಗೌಡ ತಿಳಿಸಿದ್ದಾರೆ.

ಮಕ್ಕಳನ್ನೊಳಗೊಂಡ 10 ಜನರ ತಂಡ ರಚನೆ

ರಾಜ್ಯ ಮಕ್ಕಳ ಆಯೋಗವು ಮಕ್ಕಳನ್ನೊಳಗೊಂಡ ಹತ್ತು ಜನರ ತಂಡವನ್ನು ರಚಿಸಿ ಸಮೀಕ್ಷೆ ನಡೆಸುತ್ತಿದೆ. ಮಕ್ಕಳ ಮೊಬೈಲ್‌ ಚಟ ತಪ್ಪಿಸಲು ಮಕ್ಕಳನ್ನೇ ಈ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಜತೆಗೆ ಮಕ್ಕಳ ಪೋಷಕರು, ಮಾಧ್ಯಮದವರು, ಮಾನಸಿಕ ತಜ್ಞರು, ಮಕ್ಕಳ ತಜ್ಞರು ಸೇರಿದಂತೆ ಸೈಬರ್‌ ಕ್ರೈ ತಜ್ಞರನ್ನು ಒಳಗೊಂಡಿದೆ. ಈಗಾಗಲೇ ಈ ತಂಡವು ಎಲ್ಲ ಆಯಾಮದಲ್ಲೂ ಚರ್ಚಿಸಿ, ಮಕ್ಕಳು ಮೊಬೈಲ್‌ ಬಳಕೆ ಮಾಡುವಾಗ ಏನೆಲ್ಲ ಇರಬೇಕು, ಇರಬಾರದು ಎಂಬುದನ್ನು ಪಟ್ಟಿ ಮಾಡಲಾಗುತ್ತಿದೆ. ಇದಾದ ಬಳಿಕ ಸಾರ್ವಜಿನಿಕರ ಅಭಿಪ್ರಾಯವನ್ನು ಆಯೋಗ ಪಡೆದುಕೊಳ್ಳುತ್ತಿದೆ. ಸಮಗ್ರವಾಗಿ ಅಧ್ಯಯನ ಮಾಡಿ ಬಳಿಕ ಆ್ಯಪ್‌ ತರಲು ಸಿದ್ಧತೆ ನಡೆಸುತ್ತಿದೆ.

ಸೈಬರ್‌ ಕ್ರೈಂ ಹೆಚ್ಚಳ

ಮಕ್ಕಳು ಮೊಬೈಲ್‌ ಬಳಕೆ ಮಾಡುತ್ತಿರುವುದರಿಂದ ಬಾಲ್ಯ ವಿವಾಹ ಸೇರಿದಂತೆ ಸೈಬರ್‌ ಕ್ರೈಂ ಪ್ರಕರಣಗಳು ಹೆಚ್ಚಳಗೊಳ್ಳುತ್ತಿದೆ ಎಂದು ಮಕ್ಕಳ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಇದೆಲ್ಲವನ್ನೂ ನಿಯಂತ್ರಿಸಬೇಕಾದರೆ ಮಕ್ಕಳಿಗೆ ಬೇಕಿದಷ್ಟೇ ಮಾಹಿತಿ ಮೊಬೈಲ್‌ನಲ್ಲಿ ಇರಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಸದ್ಯ ಮೂರು ತಿಂಗಳ ನಂತರ ಮಕ್ಕಳಿಗಾಗಿ ಆ್ಯಪ್‌ ಬರಲಿದ್ದು, ಎಷ್ಟರ ಮಟ್ಟಿಗೆ ಪ್ರಯೋಜನಕಾರಿ ಆಗಲಿದೆ ಎಂಬುದು ಕಾದುನೋಡಬೇಕಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version