ದಾವಣಗೆರೆ: ಜರ್ಮನಿಯಲ್ಲಿ ಮೊಬೈಲ್ ಬ್ಲಾಸ್ಟ್ (Mobile Blast) ಹಾಗೂ ಶಾರ್ಟ್ ಸರ್ಕ್ಯೂಟ್ ಆಗಿ ದಾವಣಗೆರೆ ಮೂಲದ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದಾರೆ. ದಾವಣಗೆರೆಯ ಸರಸ್ವತಿ ನಗರದ ನಿವಾಸಿ ಸಂತೋಷ್ (30) ಮೃತ ದುರ್ದೈವಿ. ಇವರು ಮೃತಪಟ್ಟು ೧೬ ದಿನಗಳ ನಂತರ ಸ್ವಗ್ರಾಮಕ್ಕೆ ಮೃತದೇಹ ರವಾನೆಯಾಗಿದೆ.
ಶಿಕ್ಷಕ ದಂಪತಿ ರೇವಣಸಿದ್ದಪ್ಪ, ಇಂದ್ರಮ್ಮ ಅವರ ಪುತ್ರ ಸಂತೋಷ್, ಜರ್ಮನಿಯ ಕೇಮ್ನೀಟ್ಜ್ (CHIMNITZ) ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಕೇಮ್ನಿಟ್ಜ್ (CHIMNITZ) ಟೆಕ್ನಾಲಜೀಸ್‌ನಲ್ಲಿ ಎಂಟೆಕ್ ಓದಲು 2017ರಲ್ಲಿ ಜರ್ಮನ್‌ಗೆ ತೆರಳಿದ್ದರು.
ಕೇಮ್ನಿಟ್ಜ್ ಸಿಟಿಯಲ್ಲಿ ವಾಸವಿದ್ದ ಸಂತೋಷ್, ನವೆಂಬರ್ 30 ರಂದು ರೂಂನಲ್ಲಿ ಶಾರ್ಟ್ ಸರ್ಕ್ಯೂಟ್ ಜತೆ ಮೊಬೈಲ್ ಬ್ಲಾಸ್ಟ್ ಆಗಿ ಮೃತಪಟ್ಟಿದ್ದರು. ಮೃತಪಟ್ಟ 16ನೇ ದಿನಕ್ಕೆ ತವರಿಗೆ ಸಂತೋಷ್ ಮೃತದೇಹ ರವಾನೆ ಆಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶುಕ್ರವಾರ ಸ್ವಗ್ರಾಮ ಪುಣಬಘಟ್ಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ರೇವಣ್ಣಸಿದ್ದಪ್ಪ ದಂಪತಿ ಐದು ವರ್ಷದ ಹಿಂದಷ್ಟೇ ಒಬ್ಬ ಮಗನನ್ನು ಅಪಘಾತದಲ್ಲಿ ಕಳೆದುಕೊಂಡಿದ್ದರು. ಈಗ ಮತ್ತೊಂದು ಅವಘಡದಲ್ಲಿ ಇನ್ನೊಬ್ಬ ಮಗನನ್ನು ಪೋಷಕರು ಕಳೆದುಕೊಂಡಿದ್ದಾರೆ. ಇಬ್ಬರು ಮಕ್ಕಳನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
ಇದನ್ನೂ ಓದಿ | Car Accident | ಹಂಚಿನಾಳ ಬಳಿ ಕಾರಿಗೆ ಅಪರಿಚಿತ ವಾಹನ ಡಿಕ್ಕಿ; ಸ್ಥಳದಲ್ಲಿಯೇ ಇಬ್ಬರು ಸಾವು