Site icon Vistara News

Modi In karnataka: ಬೆಂಗಳೂರಿಗೆ ಬರ್ತಿದಾರೆ ಮೋದಿ; ಇಂದು ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು? ಇಲ್ಲಿದೆ ಡಿಟೈಲ್ಸ್‌

Narendra Modi To Meet NDA Leaders

ನರೇಂದ್ರ ಮೋದಿ

ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆ ಮತ ಬೇಟೆಗಾಗಿ ಕೇಂದ್ರ ನಾಯಕರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಇಂದು ಶನಿವಾರ (ಏ.29) ಪ್ರಧಾನಿ ನರೇಂದ್ರ ಮೋದಿ (PM Narendra Modi visit) ಸೇರಿದಂತೆ ಪ್ರಮುಖ ನಾಯಕರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರಿಗೆ ವಾಹನ ಸಂಚಾರದಲ್ಲಿ ಅಡಚಣೆ ಉಂಟಾಗದಂತೆ ಕ್ರಮ ವಹಿಸಲು ಮಾರ್ಗ ಬದಲಾವಣೆ (Route Change) ಮಾಡಲಾಗುತ್ತಿದೆ.

ವಾಹನಗಳ ಸುಗಮ ಸಂಚಾರಕ್ಕಾಗಿ ಬೆಂಗಳೂರು ಸಂಚಾರಿ ಪೊಲೀಸರಿಂದ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ಹಾಗೂ ಶನಿವಾರ ರಾತ್ರಿ ಬೆಂಗಳೂರಲ್ಲಿ ವಾಸ್ತವ್ಯ ಇರಲಿದ್ದಾರೆ. ಹೀಗಾಗಿ ಏ. 29ರಂದು ಮಧ್ಯಾಹ್ನ 02 ಗಂಟೆಯಿಂದ ರಾತ್ರಿ 07.30 ಗಂಟೆವರೆಗೆ ಕೆಲವು ರಸ್ತೆಗಳಲ್ಲಿ ಸಾರ್ವಜನಿಕರ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಜತೆಗೆ ಪರ್ಯಾಯ ಮಾರ್ಗ ಬಳಕೆಗೆ ಮನವಿ ಮಾಡಲಾಗಿದೆ.

ಈ ರಸ್ತೆಗಳ ಮಾರ್ಗಕ್ಕೆ ವಾಹನ ಸಂಚಾರ ನಿರ್ಬಂಧ


• ಹಳೆ ವಿಮಾನ ನಿಲ್ದಾಣ ರಸ್ತೆ
• ಕಬ್ಬನ್ ರಸ್ತೆ, ಅಂಬೇಡ್ಕರ್ ರಸ್ತೆ
• ನೃಪತುಂಗ ರಸ್ತೆ
• ಕೃಂಬಿಗಲ್ ರಸ್ತೆ
• ದೇವಾಂಗ ರಸ್ತೆ
• ಕೇಂಬ್ರಿಡ್ಜ್ ಲೇಔಟ್ ರಸ್ತೆ
• ಡಿಕನ್‌ಸನ್‌ ರಸ್ತೆ
• ಲಾಲ್‌ಬಾಗ್ ವೆಸ್ಟ್ ಗೇಟ್ ರಸ್ತೆ
• ಕೆ.ಆರ್ ಸರ್ಕಲ್‌
• ಆರ್.ವಿ ಕಾಲೇಜ್ ರಸ್ತೆ
• ಲಾಲ್ ಬಾಗ್ ಮುಖ್ಯ ರಸ್ತೆ
• ಬಸವನಗುಡಿ

ಈ ರಸ್ತೆಗಳಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕ ಪ್ರವೇಶವನ್ನು ಬಂದ್‌ ಮಾಡಲಾಗಿದೆ. ಮೇಲಿನ ಮಾರ್ಗಗಳಲ್ಲಿ ನಿರ್ಬಂಧ ಇರುವುದರಿಂದ ಸವಾರರು ಮಾರ್ಗ ಬದಲಾವಣೆ ಮಾಡಿಕೊಳ್ಳಬಹುದು.

ಹಾಗಿದ್ದರೆ ಯಾವ ಮಾರ್ಗದಲ್ಲಿ ಸಂಚರಿಸಬಹುದು?

-ಮಾಗಡಿ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಬರುವ ವಾಹನಗಳು ತಾವರೆಕೆರೆ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಕೊಮ್ಮಘಟ್ಟ, ಕೆಂಗೇರಿ ಮೂಲಕ ಮೈಸೂರು ರಸ್ತೆಗೆ ಸಂಚರಿಸಬಹುದಾಗಿದೆ.

-ಮಾಗಡಿ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳು ತಾವರೆಕೆರೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಸಂಚರಿಸಬಹುದಾಗಿರುತ್ತದೆ. ಸೊಂಡೇಕೊಪ್ಪ ನೆಲಮಂಗಲ ಮೂಲಕ ಬರಬಹುದು.

ಇನ್ನು ತುಮಕೂರು ಕಡೆಯಿಂದ ಬಂದು ನೈಸ್ ರಸ್ತೆಯಲ್ಲಿ ಸಂಚರಿಸುವ ಸರಕು ವಾಹನಗಳು ನೆಲಮಂಗಲ ಸೊಂಡೇಕೊಪ್ಪ ಬೈಪಾಸ್‌ನಲ್ಲಿ ಬಲತಿರುವು ಪಡೆದು ಸೊಂಡೇಕೊಪ್ಪ – ತಾವರೆಕೆರೆ – ಹೆಮ್ಮಿಗೆಪುರ – ಕೊಮ್ಮಘಟ್ಟ ಕೆಂಗೇರಿ ಮೂಲಕ ಮೈಸೂರು ರಸ್ತೆಗೆ ಸಂಚರಿಸಬಹುದಾಗಿದೆ.

ನಗರದ ಒಳಭಾಗದಿಂದ ಮಾಗಡಿ ಕಡೆಗೆ ಸಂಚರಿಸುವ ವಾಹನಗಳು ಎಂ.ಸಿ ಸರ್ಕಲ್‌ನಲ್ಲಿ ಎಡತಿರುವು ಪಡೆದು ಮೈಸೂರು ರಸ್ತೆ, ಕೆಂಗೇರಿ, ಕೊಮ್ಮಘಟ್ಟ, ಹೆಮ್ಮಿಗೆಮರದಿಂದ ಬಂದು ತಾವರೆಕೆರೆ ಮೂಲಕ ಸಂಚರಿಸಬಹುದಾಗಿದೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ಇರುವ ಕಾರಣದಿಂದಾಗಿ ನಾಯಂಡಹಳ್ಳಿ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಬರುವ ವಾಹನಗಳು ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಮೈಸೂರು ರಸ್ತೆಗೆ ಚಲಿಸಿ ಕೆಂಗೇರಿ, ಆರ್.ಆರ್ ಕಾಲೇಜು ಮೂಲಕ ರಾಮೋಹಳ್ಳಿ, ಚಂದ್ರಪ್ಪ ಸರ್ಕಲ್ ತಾವರೆಕೆರೆ ಮೂಲಕ ಮಾಗಡಿ ರಸ್ತೆ ಮತ್ತು ತುಮಕೂರು ರಸ್ತೆಗೆ ಸಂಚರಿಸಬಹುದಾಗಿದೆ.

ಸಿ.ಎಂ.ಟಿ.ಐ ಜಂಕ್ಷನ್‌ನಿಂದ ನಾಯಂಡಹಳ್ಳಿ ಮೈಸೂರು ರಸ್ತೆ ಕಡೆಗೆ ಹೋಗುವ ವಾಹನಗಳು ಗೊರಗುಂಟೆಪಾಳ್ಯ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಎಂ.ಸಿ ಸರ್ಕಲ್‌ನಿಂದ ಮೈಸೂರು ರಸ್ತೆಗೆ ಸಂಚರಿಸಬಹುದಾಗಿದೆ. ವಿಜಯನಗರ ಮೂಲಕ ಹಳೇ ರಿಂಗ್ ರಸ್ತೆಯಲ್ಲಿ ಕೆಂಗೇರಿ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಬರುವ ವಾಹನಗಳು ಉಲ್ಲಾಳ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಉಲ್ಲಾಳ ವಿಲೇಜ್, ರಾಮಸಂದ್ರ ಬಿಡ್‌ ಹೆಮ್ಮಿಗೆಪುರದಿಂದ ತಾವರೆಕೆರೆ ಮೂಲಕ ತುಮಕೂರು ರಸ್ತೆಗೆ ಸಂಚರಿಸಬಹುದಾಗಿದೆ.

ಇದನ್ನೂ ಓದಿ: Modi in Karnataka: ನಾಳೆ ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ; ಪ್ರತಿ 5 ಮೀಟರ್‌ಗೆ ಒಬ್ಬ ಪೊಲೀಸ್‌ ಕಣ್ಗಾವಲು

2 ಗಂಟೆ ಮೊದಲೇ ರಸ್ತೆ ಬದಿ ಅಂಗಡಿಗಳು ಬಂದ್‌

ಶನಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಗೊಲ್ಲರಹಟ್ಟಿ ಜಂಕ್ಷನ್‌ನಿಂದ ಸುಮನಹಳ್ಳಿ ಜಂಕ್ಷನ್‌ವರೆಗೂ ಶುಕ್ರವಾರವೇ ಬಿಗಿ ಭದ್ರತೆ ವಹಿಸಲಾಗಿದೆ. ಈಗಾಗಲೇ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕಾಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸುಮಾರು 53 ಸೆಕ್ಟರ್‌ಗಳನ್ನಾಗಿ ಮಾಡಿ ಡಿಸಿಪಿಗಳಿಗೆ ಹಂಚಿಕೆ ಮಾಡಲಾಗಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ನರೇಂದ್ರ ಮೋದಿ ಆಗಮಿಸುವ 2 ಗಂಟೆ ಮೊದಲೇ ರಸ್ತೆ ಬದಿಯ ಎಲ್ಲ ಅಂಗಡಿಗಳನ್ನು ಮುಚ್ಚುವಂತೆ ಸೂಚನೆ ನೀಡಲಾಗುತ್ತಿದೆ.

Exit mobile version