ಚಿತ್ರದುರ್ಗ: ಇತ್ತೀಚೆಗೆ ರಾಜ್ಯದ ಹಲವು ಕಡೆ ಕಾಡು ಪ್ರಾಣಿಗಳ ಹಾವಳಿ (Attack of wild animals) ವಿಪರೀತವಾಗಿದೆ. ಸಾವು-ನೋವುಗಳು ಸಂಭವಿಸುತ್ತಲೇ ಇವೆ. ಈ ನಡುವೆ ಚಳ್ಳಕೆರೆ ತಾಲೂಕಿನ ತೋರೇಕೋಲಮ್ಮನ ಹಳ್ಳಿಯಲ್ಲಿ ಮಂಗನ ದಾಳಿ ಶುರುವಾಗಿದೆ. ಆಗಾಗ ನಾಗರಿಕರ ಮೇಲೆ ದಾಳಿ ಮಾಡುತ್ತಲೇ ಇದೆ. ಭಾನುವಾರ (ಜುಲೈ 16) 9 ದಿನದ ಹಸುಳೆಯ (Newborn baby) ಮೇಲೆ ಮಂಗವೊಂದು ದಾಳಿ (Monkey attack) ಮಾಡಿದ್ದು, ಅದರ ಹಣೆಯನ್ನು ಕಚ್ಚಿ ಗಾಯಗೊಳಿಸಿದೆ.
ಮಗುವಿನ ಹಣೆಯ ಮೇಲೆ ವಿಪರೀತ ಗಾಯವಾಗಿದ್ದು, ನೋವಿನಿಂದ ಕಿರುಚಾಡಿದೆ. ಮಗು ಕಿರುಚಾಟ ಕೇಳಿ ಬಂದಾಗ ಮಂಗ ದಾಳಿ ಮಾಡುತ್ತಿರುವುದು ಗೊತ್ತಾಗಿದೆ. ಕೂಡಲೇ ಕೋತಿಯನ್ನು ಓಡಿಸಿ ಮಗುವನ್ನು ರಕ್ಷಿಸಲಾಗಿದೆ. ಚಳ್ಳಕೆರೆ ತಾಲೂಕಿನ ತೋರೇಕೋಲಮ್ಮನ ಹಳ್ಳಿಯ ಮಂಜುಳಾ ಹಾಗೂ ಸಿದ್ದೇಶ್ ಎಂಬುವವರ ಮಗುವು ದಾಳಿಗೆ ಒಳಗಾಗಿರುವುದು.
ಇದನ್ನೂ ಓದಿ: Electricity load shedding : ಈ ಮಳೆಗಾಲ ಮುಗಿಯುವುದರೊಳಗೇ ಲೋಡ್ ಶೆಡ್ಡಿಂಗ್?
ಮನೆಯಲ್ಲಿ ಮಲಗಿಸಿದ್ದ ವೇಳೆ ಮಂಗ ದಾಳಿ ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ 9 ದಿನದ ಹಸುಳೆಯನ್ನು ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ (Private Hospital in Chitradurga) ದಾಖಲಿಸಲಾಗಿದೆ. ಅಲ್ಲಿ ಮಗುವಿಗೆ ಚಿಕಿತ್ಸೆ ಮುಂದುವರಿದಿದ್ದು, ಚೇತರಿಸಿಕೊಂಡಿದೆ ಎನ್ನಲಾಗಿದೆ.
ಇದನ್ನೂ ಓದಿ: Doodh Sagar Ban : ಅರೆ ಇಸ್ಕಿ, ದೂಧ್ ಸಾಗರ್ ಹೋದೋರಿಗೆ ಹೊಡೆಸಿದರು ಬಸ್ಕಿ!
ಮಂಗನ ಸೆರೆಗೆ ಆಗ್ರಹ
ಈ ಕೋತಿಯು ಕೆಲವು ದಿನಗಳಿಂದ ಗ್ರಾಮದ ಹಲವರ ಮೇಲೆ ದಾಳಿ ಮಾಡುತ್ತಾ ಬಂದಿದೆ. ಈ ಬಗ್ಗೆ ಸ್ಥಳೀಯ ಅರಣ್ಯ ಅಧಿಕಾರಿಗಳಿಗೆ (Forest Officers) ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಹಸುಳೆ ಮೇಲೆ ದಾಳಿ ನಡೆದಿದೆ. ಮುಂದಿನ ದಿನದಲ್ಲಿ ಮತ್ತೆ ಯಾರ ಮೇಲೋ ದಾಳಿ ಆಗುವ ಮೊದಲು ಆ ಮಂಗನನ್ನು ಸೆರೆ ಹಿಡಿಯಬೇಕು ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.