ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಳ್ಳಿ ಬೈಲು ಗ್ರಾಮದಲ್ಲಿ ಮಂಗನ ಕಾಯಿಲೆ (Monkey fever) ಪ್ರಕರಣ ಪತ್ತೆಯಾಗಿದೆ. 54 ವರ್ಷದ ವ್ಯಕ್ತಿಗೆ ಕೆಎಫ್‌ಡಿ ಪಾಸಿಟಿವ್ ದೃಢಪಟ್ಟಿದೆ. ನಾಲ್ಕೈದು ದಿನದಿಂದ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಕೆಎಫ್‌ಡಿ ಇರುವುದು ಪತ್ತೆಯಾಗಿದೆ. ಇದರಿಂದ ವ್ಯಕ್ತಿ ಇದ್ದ ಸ್ಥಳ ಹಾಗೂ ಸುತ್ತಮುತ್ತಲಿನ ಜನರ ಮೇಲೆ ಆರೋಗ್ಯ ಇಲಾಖೆ ಬಗ್ಗೆ ನಿಗಾ ಇಟ್ಟಿದೆ.
ಮಲೆನಾಡಿನಲ್ಲಿ ಈ ವರ್ಷದ ಮೊದಲ ಮೊದಲ ಮಂಗನಕಾಯಿಲೆ (Kyasanur Forest Disease-KFD) ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಮೂಲದ ವ್ಯಕ್ತಿಯಲ್ಲಿ ಜನವರಿ ತಿಂಗಳಲ್ಲಿ ಪತ್ತೆಯಾಗಿತ್ತು. ಕೊಪ್ಪದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಪರೀಕ್ಷೆ ನಡೆಸಿದಾಗ ಫಲಿತಾಂಶ ಪಾಸಿಟಿವ್ ಬಂದಿತ್ತು. ಹೀಗಾಗಿ ಮಲೆನಾಡಿನಲ್ಲಿ ಮತ್ತೆ ಮಂಗನ ಕಾಯಿಲೆ ಭೀತಿ ಆರಂಭವಾಗಿತ್ತು.
ಇದನ್ನೂ ಓದಿ | KS Eshwarappa : ಅಲ್ಲಾನಿಗೆ ಕಿವಿ ಕೇಳಿಸೋಲ್ವಾ?: ಈಶ್ವರಪ್ಪ ಹೇಳಿಕೆ ವಿರುದ್ಧ ಮುಸ್ಲಿಂ ಸಂಘಟನೆಯಿಂದ ರಾಷ್ಟ್ರಪತಿಗೆ ದೂರು
ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಆತಂಕವಿದ್ದು, ಪ್ರತಿವರ್ಷ ಹಲವಾರು ಮಂದಿಯನ್ನು ಬಾಧಿಸುತ್ತದೆ. ಮಂಗನ ಮೈಯ ಮೇಲಿರುವ ಉಣ್ಣೆಗಳಿಂದ ಮನುಷ್ಯರಿಗೆ ಹರಡುವ ಈ ಕಾಯಿಲೆಯ ವೈರಸ್, ತೀವ್ರ ಜ್ವರ ಹಾಗೂ ಮೈಕೈ ನೋವಿನಿಂದ ವ್ಯಕ್ತಿಯನ್ನು ಬಳಲಿಸುತ್ತದೆ. ಸೋಂಕು ರೋಗವಾಗಿರುವ ಇದರಿಂದ ಕೆಲಮಂದಿ ಮೃತಪಟ್ಟಿದ್ದು ಇದೆ.