ಕೋಲಾರ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಯಲ್ಲಿ ಮಾಂಡೌಸ್ ಚಂಡಮಾರುತ (Monsoon News) ಭಾರಿ ಪರಿಣಾಮ ಬೀರಿದ್ದು, ಭಾರಿ ಗಾಳಿ ಸಮೇತ ಭಾರಿ ಮಳೆಯಾಗುತ್ತಿದೆ.
ಬಿರುಗಾಳಿ ಮಳೆಗೆ ಹಲವು ಕಡೆ ಮರಗಳು ಧರಗೆ ಉರುಳಿದಿದೆ. ಕೆಲವು ಕಡೆ ಕಾರುಗಳ ಮೇಲೆ ಮರಗಳು ಉರುಳಿದ ಘಟನೆಯೂ ನಡೆದಿದೆ.
ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದು, ಹಲವು ಬಡಾವಣೆಗಳು ಜಲಾವೃತಗೊಂಡಿದ್ದು, ನಿವಾಸಿಗಳು ನೀರು ಹೊರಹಾಕಲು ಪರದಾಡಬೇಕಾಯಿತು.
ಅತಿವೃಷ್ಟಿಯಿಂದ ಲಕ್ಷ್ಮೀಪುರಂ, ರಾಮಾನುಜ ವೃತ್ತ, ಜೈಭೀಮ್ ನಗರ ಕಾಲೋನಿ ಜಲಾವೃತಗೊಂಡಿದೆ. ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಭೂಮನ ಕರುಣಾಕರ ರೆಡ್ಡಿ ಭೇಟಿ ನೀಡಿದ್ದಾರೆ.
ಇನ್ನು ಮೂರು ದಿನಗಳು ಮಳೆಯ ಅಬ್ಬರ ಹೀಗೆ ಇರಲಿದ್ದು, ಜನರು ಮುಂಜಾಗ್ರತೆಯಾಗಿ ಇರುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ | Cyclone mandous | ಬೆಂಗಳೂರಿನಲ್ಲಿ ತುಂತುರು ಮಳೆ, ಇನ್ನೂ ಮೂರು ದಿನ ರಾಜಧಾನಿ ಕೂಲ್