ಮಂಗಳೂರು: ಧರ್ಮಸ್ಥಳಕ್ಕೆ ಬಂದಿದ್ದ ಜೋಡಿಯನ್ನು ಅನ್ಯ ಕೋಮಿನವರೆಂಬ ಕಾರಣಕ್ಕೆ ತಂಡವೊಂದು ಹಿಡಿದು (Moral policing) ಪೊಲೀಸರಿಗೆ ಒಪ್ಪಿಸಿದೆ. ಧರ್ಮಸ್ಥಳ ಹೊರವಲಯದ ಕನ್ಯಾಡಿಯಲ್ಲಿ ಈ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ದಾದಾಪೀರ್ ಎಂಬ ಮುಸ್ಲಿಂ ಯುವಕ ಮತ್ತು ವಿವಾಹಿತ ಹಿಂದು ಮಹಿಳೆ ಜತೆಯಾಗಿ ಧರ್ಮಸ್ಥಳಕ್ಕೆ ಬಂದಿದ್ದರು. ಅವರು ಲಾಡ್ಜ್‌ನಲ್ಲಿ ರೂಂ ಪಡೆಯಲೆಂದು ಕನ್ಯಾಡಿಗೆ ಬಂದಿದ್ದರು. ಈ ವೇಳೆ ಅವರ ಚಲನವಲನಗಳ ಮೇಲೆ ಸಂಶಯಪಟ್ಟ ಸ್ಥಳೀಯ ಹಿಂದು ಕಾರ್ಯಕರ್ತರು ಅವರನ್ನು ವಿಚಾರಿಸಿದರು.
ವಿಚಾರಣೆಯ ವೇಳೆ ಯುವಕ ಮುಸ್ಲಿಂ, ಮಹಿಳೆಹಿಂದೂ ಎನ್ನುವುದು ಗೊತ್ತಾಯಿತು. ಕೂಡಲೇ ಅವರು ಆವರಿಬ್ಬರನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು. ಎರಡೂ ಕುಟುಂಬಗಳಿಗೆ ವಿಷಯ ತಿಳಿಸಲಾಗಿದ್ದು, ಅವರೆಲ್ಲ ಆಗಮಿಸುವ ಹಂತದಲ್ಲಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ | Moral policing | ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಿಂದು ಹುಡುಗಿ ಜತೆ ತಿರುಗಾಡುತ್ತಿದ್ದ ಮುಸ್ಲಿಂ ಯುವಕನಿಗೆ ಥಳಿತ