Site icon Vistara News

New Year 2023 | ಹೊಸ ವರ್ಷಕ್ಕೂ ನೈತಿಕ ಪೊಲೀಸ್‌ಗಿರಿ ಟೆನ್ಶನ್; ಹಿಂದು ಸಂಘಟನೆಗಳ ಪ್ರಮುಖರಿಗೆ ನೋಟಿಸ್‌

new year party

ಮಂಗಳೂರು: ಮಂಗಳೂರಿನಲ್ಲಿ ಹೊಸ ವರ್ಷಕ್ಕೆ (New Year 2023) ನೈತಿಕ ಪೊಲೀಸ್ ಗಿರಿ ನಡೆಯುವ ಚಿಂತೆ ಪೊಲೀಸರನ್ನು ಕಾಡುತ್ತಿದೆ. ಈಗಾಗಲೇ ನ್ಯೂ ಇಯರ್ ಪಾರ್ಟಿಗಳ ಮೇಲೂ ಭಜರಂಗದಳ ಕೆಂಗಣ್ಣು ಬೀರಿದ್ದು, ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಮನವಿಯನ್ನೂ ಸಲ್ಲಿಸಿತ್ತು. ಈಗ ಕಾನೂನು ಸುವ್ಯವಸ್ಥೆ ಕಾಪಾಡಲು ಸಿಆರ್‌ಪಿಸಿ ಸೆಕ್ಷನ್‌ 107 ಅಸ್ತ್ರವನ್ನು ಮಂಗಳೂರು ಖಾಕಿಪಡೆ ಪ್ರಯೋಗಿಸಿದ್ದು, ಹಿಂದು ಸಂಘಟನೆಗಳ ಪ್ರಮುಖರಿಗೆ ನೋಟಿಸ್‌ ನೀಡಲಾಗಿದೆ.

ನ್ಯೂ ಇಯರ್ ಹೆಸರಲ್ಲಿ ಪಬ್, ಹೋಟೆಲ್, ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಟಿ ನಡೆಸಲಾಗುತ್ತಿದೆ. ಅಲ್ಲದೆ, ಇಲ್ಲಿ ಲವ್‌ ಜಿಹಾದ್‌ ನಡೆಯುವ ಸಾಧ್ಯತೆಯೂ ಇದೆ. ಜತೆಗೆ ಡ್ರಗ್ ಮತ್ತು ಸೆಕ್ಸ್ ಮಾಫಿಯಾಗಳಲ್ಲಿ ಕೇರಳದ ಅನ್ಯಕೋಮಿನ ಯುವಕರು ಭಾಗಿಯಾಗುತ್ತಾರೆ. ಹೀಗಾಗಿ ನ್ಯೂ ಇಯರ್ ಪಾರ್ಟಿಗಳನ್ನು ನಿಲ್ಲಿಸಲು ಬಜರಂಗದಳದವರು ಮಂಗಳೂರು ಪೊಲೀಸರಿಗೆ ಮನವಿ ಮಾಡಿದ್ದರು.

ನೈತಿಕ ಪೊಲೀಸ್‌ಗಿರಿ ಸುಳಿವು
ನ್ಯೂ ಇಯರ್‌ ಪಾರ್ಟಿಗೆ ವಿರೋಧ ವ್ಯಕ್ತಪಡಿಸಿರುವ ಹಿಂದು ಸಂಘಟನೆಗಳು, ಅಲ್ಲಿ, ಲವ್‌ ಜಿಹಾದ್‌ ಸೇರಿದಂತೆ ಅನೈತಿಕ ಚಟುವಟಿಕೆ ನಡೆಯುತ್ತವೆ, ಅನ್ಯ ಕೋಮಿನ ಯುವಕರು ಭಾಗಿಯಾಗುತ್ತಾರೆಂದೆಲ್ಲ ಮನವಿಯಲ್ಲಿ ಉಲ್ಲೇಖ ಮಾಡಿರುವುದರಿಂದ ಡಿ. ೩೧ರ ರಾತ್ರಿ ನೈತಿಕ ಪೊಲೀಸ್‌ಗಿರಿ ನಡೆಯುವ ಸಾಧ್ಯತೆ ಇದೆ ಎಂದು ಭಾವಿಸಿರುವ ಪೊಲೀಸರು, ಕಾನೂನು ಸುವ್ಯವಸ್ಥೆ ಕಾಪಾಡುವ ಸಂಬಂಧ ಸಿಆರ್‌ಪಿಸಿ ಸೆಕ್ಷನ್‌ 107 ಜಾರಿ ಮಾಡಿದೆ. ಇದರನ್ವಯ ಭಜರಂಗದಳ ಸೇರಿದಂತೆ ಹಿಂದು ಸಂಘಟನೆಗಳ ಪ್ರಮುಖರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

ಇದನ್ನೂ ಓದಿ | Karnataka Election | ನನ್ನ ಜತೆ ಯಾರು ಇರುತ್ತಾರೆ, ಯಾರು ಬರುತ್ತಾರೆಂದು ಡಿ. 25ಕ್ಕೆ ಹೇಳುತ್ತೇನೆ: ಜನಾರ್ದನ ರೆಡ್ಡಿ

Exit mobile version