ವಿಜಯನಗರ: ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಳ್ಳುತ್ತಿರುವ ಪ್ರಕರಣವು (Water contamination) ಮುಂದುವರಿದಿದೆ. ಇಲ್ಲಿನ ಕೂಡ್ಲಿಗಿ ತಾಲೂಕಿನ ಬಡೇಲಡಕು ಗೊಲ್ಲರಹಟ್ಟಿಯಲ್ಲಿ ಕಲುಷಿತ ನೀರು ಕುಡಿದು 10ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ತೀವ್ರ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದೊಡ್ಡಗೊಲ್ಲರಹಟ್ಟಿಯ ಯಶೋಧ (35), ಸಣ್ಣಮ್ಮ (70), ರೇಖಾ (20) ಹಾಗೂ ಲಲಿತಾ (28), ಚಿತ್ತಮ್ಮ (25), ಗೋಪಾಲಮ್ಮ (80) ಸೇರಿದಂತೆ ವೀರಮ್ಮ (27), ನಿಂಗಮ್ಮ (55), ಸಣ್ಣ ಈರಮ್ಮ (14), ಲಕ್ಷ್ಮಿ (64), ಈರಮ್ಮ (38), ಬಾಲಪ್ಪ(70) ಬಸವರಾಜ (35), ಸಣ್ಣ ನಾಗಪ್ಪ (32) ಎಂಬುವವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದೆರಡು ದಿನದಿಂದ ಬಡೇಲಡಕು ದೊಡ್ಡಗೊಲ್ಲರಹಟ್ಟಿ ಗ್ರಾಮಕ್ಕೆ ಕಲುಷಿ ನೀರು ಸರಬರಾಜು ಆಗಿದೆ. ಕುಪ್ಪಿನಕೆರೆ ಗ್ರಾಮದ ಪಕ್ಕದ ರಸ್ತೆಯ ಹಳ್ಳ ಹಾಗೂ ಕಟ್ಟೆ ಬಳಿ 3-4 ಕಡೆ ಪೈಪ್ ಡ್ಯಾಮೇಜ್ ಆಗಿದೆ. ಡ್ಯಾಮೇಜ್ ಆದ ಪೈಪ್ ಮೂಲ ಕೊಳಚೆ ನೀರು ಸೇರಿಕೊಂಡಿದೆ. ಇದು ತಿಳಿಯದೆ ಗ್ರಾಮಸ್ಥರು ಕಲ್ಮಶ ನೀರು ಸೇವಸಿ ವಾಂತಿಭೇದಿ ಆಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ಇದನ್ನೂ ಓದಿ: Weather report : ಇನ್ನೈದು ದಿನ ಭರ್ಜರಿ ಮಳೆಯಾಟ; ಇದು ಕರಾವಳಿಗೆ ಮಾತ್ರ! ಜಲಾಶಯದ ಕತೆ?
ಸದ್ಯ ಕಲುಷಿತ ನೀರಿನ ಸ್ಯಾಂಪಲ್ಸ್ ಅನ್ನು ಬಳ್ಳಾರಿ ಪರೀಕ್ಷಾ ಕೇಂದ್ರಕ್ಕೆ ರವಾನೆ ಮಾಡಲಾಗಿದೆ. ದೊಡ್ಡಗೊಲ್ಲರಹಟ್ಟಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ಒಂದು ಆಂಬ್ಯುಲೆನ್ಸ್ ಮೊಕ್ಕಾಂ ಹೊಡಿದಿದ್ದಾರೆ. ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡವರನ್ನು ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲಿಸಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ