ಕೋಲಾರ: ತಮಿಳುನಾಡಿನ ಹೊಸೂರು ಅರಣ್ಯದಿಂದ ಕೋಲಾರ ಭಾಗಕ್ಕೆ 50ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಲಗ್ಗೆ ಇಡುತ್ತಿರುವುದು ಕಂಡುಬಂದಿದೆ. ಕಾಡಾನೆಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಬಂಗಾರಪೇಟೆ ತಾಲೂಕು ಕಾಮಸಮುದ್ರ ಅರಣ್ಯ ಪ್ರದೇಶ ಬಳಿಯ ಗಡಿ ಗ್ರಾಮಗಳ ಜನರಲ್ಲಿ ಆತಂಕ ಹೆಚ್ಚಾಗಿದೆ.
ಕಾಡಾನೆಗಳು ದಾಳಿ ಮಾಡುವ ಸಾಧ್ಯತೆ ಇರುವುದರಿಂದ ರಾತ್ರಿ ವೇಳೆ ಮನೆಗಳಿಂದ ಯಾರೂ ಹೊರ ಬಾರದಂತೆ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಎಚ್ಚರಿಕೆ ನೀಡುತ್ತಿದ್ದಾರೆ. ಕಾಡಾನೆ ಆತಂಕದ ಬಗ್ಗೆ ಕಾಮಸಮುದ್ರ ಪೊಲೀಸರು ಮೈಕ್ ಮೂಲಕ ಪ್ರಚಾರ ಮಾಡಿದ್ದು, ರಾತ್ರಿ ವೇಳೆ ಗಡಿ ಗ್ರಾಮಗಳ ಜನರು ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | Animals death : ಅರ್ಜುನ ಸಾವಿನ ಬೆನ್ನಿಗೇ ಒಂದು ಆನೆ ಮರಿ, ಎರಡು ಹುಲಿಗಳ ನಿಗೂಢ ಮೃತ್ಯು
ಕಾಫಿನಾಡಲ್ಲಿ ಜಲಕ್ರೀಡೆಯಲ್ಲಿ ತೊಡಗಿದ ಕಾಡಾನೆ ಹಿಂಡು
ಚಿಕ್ಕಮಗಳೂರು: ಎನ್.ಆರ್.ಪುರ ತಾಲೂಕಿನ ಕುಸುಬೂರು ಗ್ರಾಮದಲ್ಲಿ ಕೆರೆ ಬಳಿ ಬೀಡುಬಿಟ್ಟ 12 ಕಾಡಾನೆಗಳ ಹಿಂಡು ಜಲಕ್ರೀಡೆಯಲ್ಲಿ ತೊಡಗಿದ್ದ ದೃಶ್ಯ ಸೋಮವಾರ ಗಮನ ಸೆಳೆಯಿತು. ಮರಿಗಳ ಜತೆ ಕೆರೆ ನೀರಲ್ಲಿ ಈಜಾಡುತ್ತಾ ಆನೆಗಳು ಕಾಲ ಕಳೆಯುತ್ತಿವೆ.
ಕೊಪ್ಪ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಕಾಡಾನೆಗಳು ಬೀಡುಬಿಟ್ಟಿರುವುದರಿಂದ ಕುಸುಬೂರು, ಮುತ್ತಿನಕೊಪ್ಪ, ಸಾತ್ಕೋಳ, ಮುಂಡುಗೋಡು ಸೇರಿದಂತೆ ಹತ್ತಾರು ಹಳ್ಳಿಯ ಜನರಲ್ಲಿ ಆತಂಕ ಮೂಡಿದೆ. ಮಲೆನಾಡು ಭಾಗದಲ್ಲಿ
ದಿನದಿಂದ ದಿನಕ್ಕೆ ಕಾಡಾನೆಗಳ ದಾಳಿ ಭೀತಿ ಹೆಚ್ಚಾಗಿದೆ. ಅರಣ್ಯ ಪ್ರದೇಶದಿಂದ ಕಾಡಂಚಿನ ಗ್ರಾಮಗಳಿಗೆ ಕಾಡಾನೆಗಳು ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಜನರು ಭಯಭೀತರಾಗಿದ್ದಾರೆ.
ಕಾಡಾನೆಗಳ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು
ಇದನ್ನೂ ಓದಿ | Murder Case: ಆವಾಜ್ ಹಾಕಿದ್ದಕ್ಕೆ ಹೆಣವಾದ ಆಟೋ ಡ್ರೈವರ್!