ಹಾವೇರಿ: ಜಿಲ್ಲಾಸ್ಪತ್ರೆ ಕಟ್ಟಡ ಸೋರುತ್ತಿದ್ದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ, ನೀರು ಸೋರುವಿಕೆ ತಡೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಹೀಗಾಗಿ ಆಸ್ಪತ್ರೆಯಲ್ಲಿ ಸೋರುವ ವಾರ್ಡ್‌ಗಳಲ್ಲಿದ್ದ ತಾಯಿ, ಮಕ್ಕಳನ್ನು ಬೇರೆ ವಾರ್ಡ್‌ಗಳಿಗೆ ಸ್ಥಳಾಂತರ ಮಾಡಲಾಗಿದೆ. ಇನ್ನು ಮಳೆ ನೀರು ಸೋರುವುದನ್ನು ತಡೆಯಲು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರು, ಕಟ್ಟಡದ ಮೇಲೆ ತಾತ್ಕಾಲಿಕವಾಗಿ ಟಾರ್ಪಲ್ ಹಾಕಿಸಿದ್ದಾರೆ.
ಹತ್ತು ದಿನಗಳಲ್ಲಿ ಸೋರುತ್ತಿರುವ ಹಾವೇರಿ ಜಿಲ್ಲಾಸ್ಪತ್ರೆಯನ್ನು ದುರಸ್ತಿ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ಹೀಗಾಗಿ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸಲು ಕಟ್ಟಡದ ಮೇಲೆ ಟಾರ್ಪಲ್ ಹಾಕಲಾಗಿದೆ. ಶೀಟ್ ಹಾಕಿ ಮಳೆ ನೀರು ಒಳಗೆ ಬರದಂತೆ ವ್ಯವಸ್ಥೆ ಮಾಡುತ್ತೇವೆ. ಸೋರುತ್ತಿರುವ ವಾರ್ಡ್‌ಗಳಿಂದ ತಾಯಿ, ಮಕ್ಕಳನ್ನು ಬೇರೆ ಕಡೆ ಶಿಪ್ಟ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ | Rain News : ಎಲ್ಲೆಡೆ ವಾರ್ ರೂಂ; ಜೀವಹಾನಿ ತಪ್ಪಿಸಲು ಸಿಎಂ ಸಿದ್ದರಾಮಯ್ಯ ಖಡಕ್ ವಾರ್ನಿಂಗ್
ಸೋರುತ್ತಿರುವ ವಾರ್ಡ್‌ನಿಂದ ತಕ್ಷಣ ಮಹಿಳೆಯರನ್ನು ಶಿಫ್ಟ್ ಮಾಡುವಂತೆ ಅಧಿಕಾರಿಗಳಿಗೆ ಸಿಎಂ ಹೇಳಿದ್ದರು. ಆದರೆ, ಬುಧವಾರ ಮಧ್ಯಾಹ್ನದವರೆಗೆ ಸ್ಥಳಾಂತರ ಮಾಡಿರಲಿಲ್ಲ. ನಂತರ ಡಿಸಿ ರಘುನಂದನ ಮೂರ್ತಿ ಅವರು ಆಗಮಿಸಿ, ಸೋರುತ್ತಿರುವ ವಾರ್ಡ್‌ಗಳಿಂದ ತಾಯಿ, ಮಕ್ಕಳನ್ನು ಬೇರೆ ವಾರ್ಡ್‌ಗಳಿಗೆ ಶಿಫ್ಟ್ ಮಾಡಿಸಿದರು.