ಭಾಲ್ಕಿ: ವಾಹನ ಚಾಲಕರು ಸಂಪೂರ್ಣ ಸಂಚಾರ ನಿಯಮಗಳ (Traffic rules) ಪಾಲನೆ ಮಾಡಿದ್ದಲ್ಲಿ ರಸ್ತೆ ಅಪಘಾತಗಳನ್ನು (Road accidents) ಪೂರ್ಣ ಪ್ರಮಾಣದಲ್ಲಿ ತಡೆಯಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್.ಎಲ್.ತಿಳಿಸಿದ್ದಾರೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಛಯದಲ್ಲಿ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಅಭಿಯಾನ, ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದನ್ನೂ ಓದಿ: IND vs WI: ನೂತನ ಮೈಲಿಗಲ್ಲಿನ ಸನಿಹದಲ್ಲಿ ಆರ್.ಅಶ್ವಿನ್
ಅತಿವೇಗದ, ಕುಡಿತದ ವಾಹನ ಚಾಲನೆ, ರಸ್ತೆಯಲ್ಲಿ ಸ್ಟಂಟ್ ಪ್ರದರ್ಶನ, ಅವಸರದ, ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದ ವಾಹನ ಚಾಲನೆ ಸೇರಿದಂತೆ ಸಂಚಾರ ನಿಯಮಗಳ ಪಾಲನೆಯಲ್ಲಿ ನಿರ್ಲಕ್ಷ್ಯ ತೋರುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಹೇಳಿದರು.
ರಸ್ತೆ ಅಪಘಾತದ ಗಂಟೆಯೊಳಗೆ ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ಸ್ಥಳದಲ್ಲಿದ್ದವರು ಆಂಬ್ಯುಲೆನ್ಸ್ ಗೆ ಕರೆ ಮಾಡಬೇಕು. ಇದರಿಂದ ಶೇ. 50ರಷ್ಟು ಗಾಯಗೊಂಡವರ ಜೀವ ಉಳಿಯುವ ಸಾಧ್ಯತೆ ಇರುತ್ತದೆ ಎಂದರು.
ಅಪಘಾತಕ್ಕೆ ಕಾರಣವಾಗುವ ಅಂಶಗಳನ್ನು ಮತ್ತು ಅಪಘಾತದ ದೃಶ್ಯಗಳನ್ನು ಪ್ರೊಜೆಕ್ಟರ್ ಮೂಲಕ ತೋರಿಸಿ, ಅವರು ವಿವರಿಸಿದರು.
ಇದನ್ನೂ ಓದಿ: Wimbledon 2023: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ರೋಹನ್ ಬೋಪಣ್ಣ ಜೋಡಿ
ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಡಿವೈಎಸ್ಪಿ ಪೃಥ್ವಿಕ್ ಶಂಕರ್, ಸಿಪಿಐ ಜಿಎಸ್ ಬಿರಾದರ , ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ಸೇರಿದಂತೆ ಇತರರು ಇದ್ದರು.