ಹಾವೇರಿ: ಒಂದು ಕಡೆ ಸರ್ಕಾರ ಮದ್ಯ ಸೇವಿಸುವವರ ವಯಸ್ಸಿನ ಮಿತಿಯನ್ನು ಕಡಿಮೆ ಮಾಡಲು ಮುಂದಾಗಿದೆ. ಇತ್ತ ತಮ್ಮ ಗ್ರಾಮವನ್ನು ಮದ್ಯ ಮುಕ್ತ ಮಾಡಬೇಕು. ಇರುವ ಎಂಎಸ್‌ಐಎಲ್ (MSIL Liquor Shop) ಮದ್ಯದ ಅಂಗಡಿಯನ್ನು ಮುಚ್ಚಬೇಕು ಎಂದು ಆಗ್ರಹಿಸಿ ಮದ್ಯದ ಅಂಗಡಿ ಮುಂದೆ ನೆಗಳೂರ ಗ್ರಾಮದ ಮಹಿಳೆಯರು, ಶಾಲಾ ಮಕ್ಕಳು ಬೃಹತ್ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿನ ಎಂಎಸ್‌ಐಎಲ್ (MSIL) ಮದ್ಯದ ಅಂಗಡಿ ಮುಚ್ಚಿ ಪ್ರತಿಭಟನೆ ನಡೆಸಿದ್ದು, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಇದೇ ವೇಳೆ ಎಂಎಸ್‌ಐಎಲ್ ಮದ್ಯದ ಅಂಗಡಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು, ಅದನ್ನು ಮುಚ್ಚುವಂತೆ ಆಗ್ರಹಿಸಿದರು. ಈ ವೇಳೆ ನೆಗಳೂರ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಪ್ರತಿಭಟನೆಗೆ ಬೆಂಬಲ ನೀಡಿದರು.
ಪ್ರತಿಭಟನಾ ಸಂದರ್ಭದಲ್ಲಿ ಮದ್ಯ ಖರೀದಿಗೆ ವೃದ್ಧನೊಬ್ಬ ಬಂದಿದ್ದು, ಪ್ರತಿಭಟನಾನಿರತ ಮಹಿಳೆಯರ ಸಿಟ್ಟು ಇನ್ನಷ್ಟು ಹೆಚ್ಚುವಂತೆ ಮಾಡಿತ್ತು. ಎಲ್ಲ ಮಹಿಳೆಯರು ಆ ವೃದ್ಧನಿಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಆತನ ಬಳಿಯಿದ್ದ ಮದ್ಯದ ಬಾಟಲಿಯನ್ನು ನೆಲಕ್ಕೆಸೆದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು, ಮಹಿಳೆಯರು, ಶಾಲಾ ಮಕ್ಕಳು ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಇದನ್ನೂ ಓದಿ | Sabarimala Temple : ಇರುಮುಡಿ ಹೊತ್ತು ಶಬರಿಮಲೆಯತ್ತ ಸಾಗಿದ ಗೃಹ ಸಚಿವ ಆರಗ ಜ್ಞಾನೇಂದ್ರ