Site icon Vistara News

Murder Case: ಅವಳದ್ದು ಮೋಹ, ಇವನಿಗೆ ಮಧುಮೇಹ; ಕೊಲೆಯಲ್ಲಿ ಅಂತ್ಯವಾಯ್ತು ಕಾಳಜಿ ಕಲಹ

#image_title

ಬೆಳಗಾವಿ: ಇಲ್ಲಿನ ರಾಮದುರ್ಗ ತಾಲೂಕಿನ ಸಾಲಾಪುರ ಗ್ರಾಮದಲ್ಲಿ ಮಧುಮೇಹಿಯೊಬ್ಬ ಮೋಹಿಸಿದವಳನ್ನೇ ಕೊಂದು (Murder Case) ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಜಾನವ್ವ ದ್ಯಾಮನ್ನವರ (50) ಹಾಗೂ ಬಸವಗೌಡ ಶಾಸಪ್ಪನವರ (55) ಎಂಬುವವರು ಮೃತಪಟ್ಟಿದ್ದಾರೆ.

ಇವರಿಬ್ಬರು ಕಳೆದ 28 ವರ್ಷಗಳಿಂದ ಅನೈತಿಕ ಸಂಬಂಧವನ್ನು ಹೊಂದಿದ್ದಾರೆ. ಇವರಿಗೆ ಮೂವರು ಮಕ್ಕಳಿದ್ದಾರೆ. ಇತ್ತೀಚೆಗೆ ಬಸವಗೌಡಗೆ ಮಧುಮೇಹ ಕಾಯಿಲೆ ಬಂದಿದೆ. ಇದು ವಿಪರೀತಕ್ಕೆ ಹೋಗಿ ಅನಾರೋಗ್ಯಕ್ಕೆ ತುತ್ತಾಗಿದ್ದ. ಹೀಗೆ ಅನಾರೋಗ್ಯಕ್ಕೆ ಬಿದ್ದಿದ್ದ ಬಸವಗೌಡನ ಬಳಿ ಜಾನವ್ವ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ನಿತ್ಯ ಕಿರಿಕಿರಿ ಮಾಡುತ್ತಿದ್ದಳು ಎಂದು ಹೇಳಲಾಗಿದೆ.

ಈಕೆ ಪೀಡನೆ ತಾಳಲಾರದೆ ಅನಾರೋಗ್ಯದಿಂದ ಬಳಲುತ್ತಿದ್ದ ಬಸವಗೌಡ ಸಿಟ್ಟಿಗೆದ್ದವನೇ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಜಾನವ್ವಳನ್ನು ಹತ್ಯೆ ಮಾಡಿದ್ದಾನೆ. ತೀವ್ರ ರಕ್ತಸ್ರಾವವಾಗಿ ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇತ್ತ ಹತ್ಯೆ ಮಾಡಿದ ಬಳಿಕ ಬಸವಗೌಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾಮದುರ್ಗ ತಾಲೂಕಿನ ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹಗಳನ್ನು ರಾಮದುರ್ಗ ತಾಲೂಕಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಜಾನವ್ವಳ ಪತಿ ತೀರಿ ಹೋದ ಬಳಿಕ ಈ ಬಸವಗೌಡ ಪತ್ನಿಯನ್ನು ತೊರೆದು ಈಕೆಯೊಂದಿಗೆ ಸಂಬಂಧ ಹೊಂದಿದ್ದ ಎಂದು ತಿಳಿದು ಬಂದಿದೆ.

ಸುಟ್ಟ ಸ್ಥಿತಿಯಲ್ಲಿ ಹಸಿ ಬಾಣಂತಿ ಶವ ಪತ್ತೆ

ಕೊಪ್ಪಳ: ಕೊಪ್ಪಳ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಹಸಿ ಬಾಣಂತಿಯೊಬ್ಬಳ ಶವ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, (Woman Murdered) ಇದರ ಬಗ್ಗೆ ನಾನಾ ಸಂಶಯಗಳು ವ್ಯಕ್ತವಾಗುತ್ತಿದೆ. ಇದು ಆತ್ಮಹತ್ಯೆಯಾಗಿರುವ ಸಾಧ್ಯತೆ ಇಲ್ಲ. ಬದಲಾಗಿ ನಿಧಿಗಾಗಿ ನಡೆದಿರುವ ಕೊಲೆ ಎಂದು ಸಂಶಯಿಸಲಾಗಿದೆ.

ನೇತ್ರಾವತಿ ಕುರಿ (26) ಕೊಲೆಯಾದ ಬಾಣಂತಿ. ಅವರಿಗೆ ಕೇವಲ ಒಂದೂವರೆ ತಿಂಗಳ ಪುಟ್ಟ ಮಗುವಿದ್ದು, ಅವರ ಶವ ಸಮೀಪದ ಹೊಲದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ನೇತ್ರಾವತಿಯನ್ನು ಸುಟ್ಟು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಪಾಟ್ನಾ ರೈಲ್ವೆ ಸ್ಟೇಶನ್​​ನಲ್ಲಿ ಅಶ್ಲೀಲ ವಿಡಿಯೊ ಪ್ರಸಾರ ಆಗಿದ್ದಕ್ಕೆ ಫುಲ್ ಖುಷಿಯಾದ ಪೋರ್ನ್​ ಸ್ಟಾರ್​; ಅದು ನಂದೇ ಎಂದ ಕೇಂದ್ರಾ ಲಸ್ಟ್​

ಸೋಮವಾರ ರಾತ್ರಿ ಅಮಾವಾಸ್ಯೆ ಇದ್ದು, ತಡರಾತ್ರಿ ನಿಧಿಗಾಗಿ ಕೊಲೆ‌ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಮನೆಯಿಂದ ಅನತಿ ದೂರದಲ್ಲಿ ಶವ ಸಿಕ್ಕಿದೆ. ಪರಿಸರದಲ್ಲಿ ವಾಮಾಚಾರ ಸಂಬಂಧಿತ ಕೆಲವು ವಸ್ತುಗಳು ಸಿಕ್ಕಿರುವುದು ಇದೊಂದು ನಿಧಿಗಾಗಿ ನಡೆಸಿದ ಕೊಲೆಯಾಗಿರಬಹುದು ಎಂಬ ಸಂಶಯಕ್ಕೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಕೊಪ್ಪಳ‌ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version