Site icon Vistara News

Murugha Seer | ಮಠಾಧೀಶರ ಸಮಾಗಮ; ಮುರುಘಾ ಮಠದ ಆಡಳಿತಾಧಿಕಾರಿ ನೇಮಕ ವಾಪಸ್‌ ಪಡೆಯಲು ಆಗ್ರಹ

Murugha Seer

ಚಿತ್ರದುರ್ಗ: ಮುರುಘಾಮಠಕ್ಕೆ ಸರ್ಕಾರದಿಂದ ಆಡಳಿತಾಧಿಕಾರಿ ನೇಮಕ ಹಿನ್ನೆಲೆಯಲ್ಲಿ ಮುರುಘಾಮಠದಲ್ಲಿ ಮಂಗಳವಾರ ಪೂಜಾ ಕೈಂಕರ್ಯ ಉಸ್ತುವಾರಿ ಬಸವಪ್ರಭು ಶ್ರೀ ಅವರ ನೇತೃತ್ವದಲ್ಲಿ ಮಠಾಧೀಶರ ಸಮಾಗಮವಾಗಿದ್ದು, ದೊಡ್ಡಮಟ್ಟದಲ್ಲಿ ಸಭೆ ನಡೆಸಲಾಗಿದೆ. ಮುರುಘಾಶ್ರೀಗಳ (Murugha Seer) ಬಂಧನದ ನಂತರವೂ ಮಠದಲ್ಲಿ ಯಥಾಸ್ಥಿತಿಯಲ್ಲಿ ಪೂಜಾ ಕೈಂಕರ್ಯ, ದಾಸೋಹ, ಎಸ್‌ಜೆಎಂ ವಿದ್ಯಾಸಂಸ್ಥೆಯ ಆಡಳಿತ ಸಾಗಿದೆ. ಹೀಗಾಗಿ ಸರ್ಕಾರದಿಂದ ಮಠದ ಆಡಳಿತಾಧಿಕಾರಿ ನೇಮಕ ಆದೇಶವನ್ನು ವಾಪಸ್ ಪಡೆಯಬೇಕು ಎಂಬ ಆಗ್ರಹ ಕೇಳಿಬಂದಿದೆ.

ಮಠಾಧೀಶರ ಸಭೆಯಲ್ಲಿ 40ಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಿದ್ದರು. ಇಳಕಲ್ ಗುರುಮಹಾಂತ ಶ್ರೀ, ಅಥಣಿ ವಬಸವ ಶ್ರೀ, ಹುಲಸೂರು ಶಿವಾನಂದ ಶ್ರೀ, ಗೋಕಾಕ್ ಮುರುಘಾ ರಾಜೇಂದ್ರ ಶ್ರೀ, ಸತ್ತಿ ಬಸವಲಿಂಗ ಶ್ರೀ, ಶಿಗ್ಗಾಂವಿ ಸಂಗನಬಸವ ಶ್ರೀ, ಹಾವೇರಿ ಬಸವ ಶಾಂತಲಿಂಗ ಶ್ರೀ, ಕಲಬುರಗಿ ಸಿದ್ದಬಸವ ಕಬೀರ ಶ್ರೀ ಸೇರಿ ಇತರ ಸ್ವಾಮೀಜಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ | ಬೆಳಗಾವಿ ಅಧಿವೇಶನ | ಸಭಾಪತಿಯಾಗಲು ಬಸವರಾಜ ಹೊರಟ್ಟಿ ನಾಮಪತ್ರ: ಯಡಿಯೂರಪ್ಪಗೆ ಮಾತು ಉಳಿಸಿಕೊಂಡ ಗರಿ

ಸಭೆ ಬಳಿಕ ಮುರುಘಾಮಠದ ಉಸ್ತುವಾರಿ ಬಸವಪ್ರಭು ಶ್ರೀ ಮಾತನಾಡಿ, ಮುರುಘಾಮಠದ ಆಡಳಿತಾಧಿಕಾರಿ ನೇಮಕ ಆದೇಶ ರದ್ದುಗೊಳಿಸಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೈಮುಗಿದು ಮನವಿ ಮಾಡುತ್ತೇವೆ. ಇಲ್ಲವಾದಲ್ಲಿ ಡಿ.26ರಂದು ಮಠಾಧೀಶರಿಂದ ಧರಣಿಗೆ ನಿರ್ಧಾರ ಮಾಡಲಾಗಿದೆ. ಚಿತ್ರದುರ್ಗ ಅಥವಾ ಬೆಳಗಾವಿಯಲ್ಲಿ ಮಠಾಧೀಶರಿಂದ ಧರಣಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಹೈಕೋರ್ಟ್ ನಿರ್ದೇಶನದಂತೆ ಮುರುಘಾಶ್ರೀ ಪವರ್‌ ಆಫ್‌ ಅಟಾರ್ನಿ ನೀಡಿದ್ದಾರೆ. ಹೀಗಾಗಿ ಮುರುಘಾಮಠದ ಆಡಳಿತ ಸುಸೂತ್ರವಾಗಿ ನಡೆಯುತ್ತಿದೆ. ಆದರೆ, ಆಡಳಿತಾಧಿಕಾರಿ ನೇಮಕ ಮಾಡಿರುವುದು ಸರಿಯಲ್ಲ. ಮಠಾಧೀಶರ ರಕ್ಷಣೆಗಾಗಿ ಸರ್ಕಾರ ಕಾನೂನು ರೂಪಿಸಬೇಕು. ಮುಂದೆ ಮಠಾಧೀಶರಾಗಲು ಯಾರೂ ಒಪ್ಪದ ಸ್ಥಿತಿ ಬರಲಿದೆ. ಪಿತೂರಿ ಮಾಡುವ ಜನರಿಂದ ಕಾನೂನು ದುರ್ಬಳಕೆ ಆಗುತ್ತದೆ. ಪೋಕ್ಸೊ ಕಾನೂನಿನ ದುರ್ಬಳಕೆ ಆಗುತ್ತಿದೆ. ಹೀಗಾಗಿ ಮಠದ ಆಡಳಿತಾಧಿಕಾರಿ ನೇಮಕ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ | Karnataka Election | ನನಗೂ, ರಮೇಶ್‌ ಜಾರಕಿಹೊಳಿಗೂ ಮಂತ್ರಿ ಪದವಿ ಕೊಡಲೇಬೇಕು: ಈಶ್ವರಪ್ಪ ಪಟ್ಟು

Exit mobile version