Site icon Vistara News

ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾಗಿ ಮುರಳೀಧರ ಹೆಗ್ಡೆ ಆಯ್ಕೆ

ಮುರಳೀಧರ ಹೆಗ್ಡೆ

ಬೆಂಗಳೂರು : ಬಂಟರ ಸಂಘದ ಅಧ್ಯಕ್ಷರಾಗಿ ಮುರಳೀಧರ ಹೆಗ್ಡೆ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನದ ಪೃಥ್ವಿ ರೈ ವಿರುದ್ಧ 5,121 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಉಪಾಧ್ಯಕ್ಷರಾಗಿ ಡಾ.ಜಗದೀಶ್ ವಿ.ಶೆಟ್ಟಿ ಮತ್ತು ಮಹಿಳಾ ಅಭ್ಯರ್ಥಿಯಾಗಿ ಗೀತಾಂಜಲಿ ಆಯ್ಕೆ ಆಗಿದ್ದಾರೆ.

ಗೌರವ ಕಾರ್ಯದರ್ಶಿಯಾಗಿ ಆನಂದರಾಮ ಶೆಟ್ಟಿ, ಸಹಕಾರ್ಯದರ್ಶಿಯಾಗಿ ಶ್ಯಾಮಲಾ ಶೆಟ್ಟಿ, ಖಜಾಂಚಿಯಾಗಿ ಅಮರ್‌ನಾಥ್ ಶೆಟ್ಟಿ, ಕಾರ್ಯಕಾರಿಣಿ ಸದಸ್ಯರಾಗಿ ಅರವಿಂದ ಶೆಟ್ಟಿ.ಎಂ, ಜಯಶ್ರೀ.ಸಿ ರೈ, ಕೀರ್ತನ್ ಶೆಟ್ಟಿ, ಮಾಲತಿ ಶೆಟ್ಟಿ, ನಿರಂಜನ್ ಶೆಟ್ಟಿ ಕೆ, ರಮೇಶ್ ಜಿ.ಶೆಟ್ಟಿ, ಸದಾನಂದ ಸುಲಾಯ, ಸಂದೀಪ್ ಶೆಟ್ಟಿ. ಬಿ, ಸತೀಶ್ ಕುಮಾರ್ ಶೆಟ್ಟಿ, ಶೋಭಾ ಶೇಖ, ಸುದೀಪ್ ನಾಯಕ್, ಸುಧಾಕರ್ ಶೆಟ್ಟಿ ಎಸ್, ಉಮೇಶ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ | ಕಾರ್ಯಕರ್ತರ‌ಲ್ಲಿ ವಿಶ್ವಾಸ ವೃದ್ಧಿಗೆ ಮಂಗಳೂರಿನಲ್ಲಿ ಸಂಘ ಪರಿವಾರದ ಸಮಾಲೋಚನೆ

ಬೆಂಗಳೂರು ಬಂಟ ಸಮುದಾಯದವರಿಗೆ ಹೆರಿಟೇಜ್ ಹೋಮ್, ವಿದ್ಯಾರ್ಥಿಗಳಿಗಾಗಿ ಆಯುರ್ವೇದ ಕಾಲೇಜು ಜತೆಗೆ ಸುಮುದಾಯದ ಶಿಕ್ಷಣ ಸಹಾಯನಿಧಿ ಸ್ಥಾಪಿಸಲಾಗುತ್ತದೆ ಎಂದು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಮುರಳೀಧರ ಹೆಗ್ಡೆ ತಿಳಿಸಿದ್ದಾರೆ.

Exit mobile version