Site icon Vistara News

Music Talent | ಲೋಟದೊಳಗೆ ಸ್ವರಲೋಕ; ಈ ಸ್ವರಮಾಂತ್ರಿಕ ಬಾಲಕನ ಅಪ್ರತಿಮ ಸಾಧನೆಗೆ ಪ್ರಶಂಸೆ

Vignesh Kurse music talent Metal wave

ಕಾರವಾರ: ಮ್ಯೂಸಿಕಲ್ ಇನ್‌ಸ್ಟ್ರುಮೆಂಟ್‌ನಿಂದ ವಿಭಿನ್ನ ಮ್ಯೂಸಿಕ್ ನುಡಿಸುವುದನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಬಾಲಕ ಅಡುಗೆ ಮನೆಯಲ್ಲಿ ಸಿಗುವ ಲೋಟವನ್ನೇ ಬಳಸಿಕೊಂಡು ವಾದ್ಯವನ್ನು ಸಿದ್ಧಪಡಿಸಿಕೊಂಡು ಇಂಪಾಗಿ ಸಂಗೀತ ನುಡಿಸುವ (Music Talent) ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

ಕುಮಟಾ ತಾಲೂಕಿನ ಗೋಕರ್ಣದ ವಿಘ್ನೇಶ್ ಕುರ್ಸೆ ಈ ಅಪರೂಪದ ಸಾಧನೆ ಮಾಡಿದ ಬಾಲಕ. ಲೋಹ ತರಂಗದ ಮೇಲೆ ಅಪಾರ ಆಸಕ್ತಿ ಇರುವ ಈತನು ಒಂದನೇ ತರಗತಿ ಇರಬೇಕಾದರೆ ಸಂಗೀತಗಾರರಾದ ಇವರ ತಂದೆ ಗಣಪತಿ ಕುರ್ಸೆ ಅವರಿಂದ ಜಲತರಂಗ ಅಭ್ಯಾಸ ಮಾಡುತ್ತಿದ್ದ. ಬಳಿಕ ವಿಘ್ನೇಶ್‌ ರಾಜು ಹೆಗಡೆ ಹೆಗ್ಗಾರ್ ಅವರು ಕಂಡು ಹಿಡಿದ ಈ ವಿಶೇಷ ಲೋಹ ತರಂಗದ ಬಗ್ಗೆ ಆಸಕ್ತಿ ಹೊಂದಿದ್ದು, ಆ ನಿಟ್ಟಿನಲ್ಲಿ ಸಾಧನೆ ಮಾಡಲು ಮುಂದಾಗಿದ್ದಾನೆ.

ವಿಘ್ನೇಶ್‌ ಇದಕ್ಕೆ ಸಾಕಷ್ಟು ಪರಿಶ್ರಮವನ್ನು ಹಾಕಿದ್ದು, ಇದಕ್ಕಾಗಿ ಗೋಕರ್ಣ ಪೇಟೆಯ ಸ್ಟೀಲ್ ಅಂಗಡಿಗಳಿಗೆ ಹೋಗಿ ಪಿಚ್ ಲ್ಯಾಬ್ ಸಾಫ್ಟ್‌ವೇರ್‌ನೊಂದಿಗೆ ಪ್ರತಿ ಲೋಟವನ್ನೂ ಪರಿಶೀಲನೆ ನಡೆಸಿದ್ದಾನೆ. ಅದರಿಂದ ಹೊರಬರುವ ಶಬ್ದ ತರಂಗವನ್ನು ಸ್ವರ ರೂಪದಲ್ಲಿ ತರಲು ಒಂದು ವರ್ಷದ ತನಕ ಎಲ್ಲ ರೀತಿಯ ಲೋಟಗಳನ್ನು ಪರೀಕ್ಷಿಸಿದ್ದಾನೆ. ಕೊನೆಗೆ ತನ್ನ ಮಾದರಿಗೆ ಒಪ್ಪುವ ಲೋಟಗಳನ್ನು ಸಂಗ್ರಹಿಸಿ ವಿಶಿಷ್ಟ ಸ್ವರ ಸಂಗೀತವನ್ನು ಸಂಗೀತಪ್ರಿಯರಿಗೆ ಉಣ ಬಡಿಸುತ್ತಿದ್ದಾನೆ. ಈಗ ಈ ಯುವ ಸಂಗೀತಗಾರನ ಕಛೇರಿಗೆ ತಲೆದೂಗದವರಿಲ್ಲ. ವಿಘ್ನೇಶ್‌ ಈಗ ಯಾವ ಹಾಡನ್ನಾದರೂ ಈ ವಾದ್ಯದಲ್ಲಿ ನುಡಿಸಬಲ್ಲ ಸಾಧಕ.

ಎಂಟು ವರ್ಷದ ತನಕ ವಿಘ್ನೇಶ್ ಕುರ್ಸೆ ಈ ವಾದ್ಯದ ಅಭ್ಯಾಸ ಮಾಡಿದ್ದಾರೆ. ಈಗ ಗೋಕರ್ಣದ ವಿಷ್ಣುಗುಪ್ತ ವಿದ್ಯಾಪೀಠದಲ್ಲಿ ಎಂಟನೇ ತರಗತಿ ಓದುತ್ತಿದ್ದಾನೆ. ತಂದೆ ಪೌರೋಹಿತ್ಯ ಮಾಡುತ್ತಿದ್ದಾರೆ. ಅದರೊಡನೆ ಈ ಪ್ರವೃತ್ತಿಯನ್ನು ಅಳವಡಿಸಿಕೊಂಡು ಇಬ್ಬರೂ ಮುಂದುವರಿಯುತ್ತಿದ್ದಾರೆ. ಈಗಾಗಲೇ ವಿಘ್ನೇಶ್‌ಗೆ ಹವ್ಯಕ ಪಲ್ಲವ, ಸ್ವರ ಶ್ರೀ ಪ್ರಶಸ್ತಿ ಸಂದಿವೆ. ವಿಶ್ವ ಶಾಂತಿ ಪ್ರತಿಷ್ಠಾನದಿಂದ ನಮ್ಮನೆ ಯುವ ಪುರಸ್ಕಾರ ಪ್ರಕಟಿಸಲಾಗಿದೆ.

ಇದನ್ನೂ ಓದಿ | AICC ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ತವರಿಗೆ ಮಲ್ಲಿಕಾರ್ಜುನ ಖರ್ಗೆ: ಕಲ್ಯಾಣ ಕ್ರಾಂತಿ ಸಮಾವೇಶದ ಮೂಲಕ ಸ್ವಾಗತ

Exit mobile version