Site icon Vistara News

Muslims protest | ಎಲ್ಲಿಂದಲೋ ಬಂದವರಿಗೆ ಮೀಸಲಾತಿ: ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮುಸ್ಲಿಮರ ಪ್ರತಿಭಟನೆ

muslim protest

ವಿಜಯಪುರ: ʻಎಲ್ಲಿದಂಲೋ ಬೇರೆ ದೇಶದಿಂದ ಬಂದ ಮುಸ್ಲಿಮಗೆ ಮೀಸಲಾತಿ ಕೊಡ್ತೀರಿ… ನಮಗೆ ಕೊಡಲು ಆಗುವುದಿಲ್ಲವೇʼʼ ಎಂದು ಪ್ರಶ್ನಿಸಿದ್ದ ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಶ್ರೀಗಳ ವಿರುದ್ಧ ಮುಸ್ಲಿಮರು ಸಿಟ್ಟಿಗೆದ್ದಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ದೊಡ್ಡ ಮಟ್ಟದ ಹೋರಾಟ ನಡೆಸುತ್ತಿರುವ ಶ್ರೀಗಳು ಇತ್ತೀಚೆಗೆ ರಾಜ್ಯ ಸರಕಾರ ಕೇಂದ್ರ ಸರಕಾರ ಹೊಸ ಪ್ರವರ್ಗ ರಚಿಸಿ ಮೀಸಲಾತಿ ನೀಡಲು ಮುಂದಾಗಿದ್ದನ್ನು ಆಕ್ಷೇಪಿಸಿದ್ದಾರೆ. ಕೇಂದ್ರ ಸರಕಾರ ಮೇಲ್ವರ್ಗದ ಬಡವರಿಗಾಗಿ ನಿಗದಿಮಾಡಿದ ಮೀಸಲಾತಿಯಲ್ಲಿ ಪಂಚಮಸಾಲಿಗಳಿಗೆ ಪಾಲು ನೀಡಲು ರಾಜ್ಯ ಸರಕಾರ ಮುಂದಾಗಿದ್ದು ಕಾನೂನು ಸಮ್ಮತವಾಗುವುದಿಲ್ಲ ಎನ್ನುವುದು ಸ್ವಾಮೀಜಿ ಮತ್ತು ಅವರ ತಂಡದ ವಾದ.

ರಾಜ್ಯ ಸರಕಾರದ ನಿಲುವುಗಳನ್ನು ಟೀಕಿಸುವ ಭರದಲ್ಲಿ ಅವರು ಯಾವುದೋ ದೇಶದಿಂದ ಬಂದ ಮುಸ್ಲಿಮರಿಗೆ ಮೀಸಲಾತಿ ಕೊಡಲು ಸಾಧ್ಯವಾಗುವುದಾದರೆ ನಮಗೇಕೆ ಕೊಡಲಾಗುವುದಿಲ್ಲ ಎಂದು ಪ್ರಶ್ನಿಸಿದ್ದರು. ಇದು ಮುಸ್ಲಿಂ ಸಮುದಾಯವನ್ನು ಕೆರಳಿಸಿದೆ.

ನವನಗರದ ಜಿಲ್ಲಾಡಳಿತ ಭವನದ ಮುಂದೆ ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಮಹಾ ಒಕ್ಕೂಟ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸ್ವಾಮೀಜಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಸ್ವಾಮೀಜಿಯವರು ಮುಸ್ಲಿಂ ಸಮಾಜದ ಕ್ಷಮೆ ಕೇಳಿಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಅಲ್ಪ ಸಂಖ್ಯಾತರ ಮಹಾ ಒಕ್ಕೂಟದ ಮುಖಂಡ ರಮಜಾನ್ ಕಡಿವಾಲ್ ಅವರು, ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ವಿಜಯಪುರ ಶಾಸಕ, ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಕಿಡಿಕಾರಿದರು. ಇದೇ ಉದ್ಧಟತನ ಮುಂದುವರಿದರೆ ಉಚ್ಚ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದರು. ತಾಕತ್ತಿದ್ದರೆ ಇನ್ನು ಮುಂದೆ ಮಾತನಾಡಿ ಮನೆ ಹೊಕ್ಕು ತಕ್ಕ ಶಾಸ್ತಿ ಮಾಡ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ | Panchamasali Reservation | ಪಂಚಮಸಾಲಿ ಮೀಸಲಾತಿ ಪ್ರಮಾಣ ಪ್ರಕಟಿಸದಿದ್ದರೆ ಜ.13ಕ್ಕೆ ಸಿಎಂ ನಿವಾಸದ ಮುಂದೆ ಸತ್ಯಾಗ್ರಹ

Exit mobile version