ಕಲಬುರಗಿ: ಲಾಡ್ಲೆಮಶಾಕ್ ದರ್ಗಾದಲ್ಲಿನ ಶಿವಲಿಂಗ ಮುಚ್ಚಿ ಹಾಕಲು ಮುಸ್ಲಿಮರು ಪ್ರಯತ್ನ ಮಾಡುತ್ತಿದ್ದಾರೆ. ಅಕ್ರಮವಾಗಿ ಗೋರಿಗಳನ್ನು ನಿರ್ಮಿಸಿ, ಚಾದರ್ ಹಾಕಿ ನಮ್ಮ ಶಿವಲಿಂಗ ಮುಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು
ಆಂದೋಲ ಶ್ರೀ ಸಿದ್ದಲಿಂಗ ಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಜಿಲ್ಲೆಯ ಆಳಂದ ಪಟ್ಟಣದಲ್ಲಿ ವಿವಾದಿತ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶುಕ್ರವಾರ ಶಿವಲಿಂಗ ಪೂಜೆ ಮಾಡಿದ ಬಳಿಕ ಮಾತನಾಡಿದ ಅವರು, ಜಿಹಾದಿಗಳ ಮಾನಸಿಕತೆ ಲ್ಯಾಂಡ್ ಜಿಹಾದ್ ಈ ದೇಶದಲ್ಲಿ ಪ್ರಾರಂಭವಾಗಿರುವುದು ದುರಂತ. ರಾಘವ ಚೈತನ್ಯ ಸಮಾಧಿ ಸ್ಥಳದಲ್ಲಿ ಲ್ಯಾಂಡ್ ಜಿಹಾದ್ ಆಗುತ್ತಿದ್ದು, ಅಕ್ರಮವಾಗಿ ಗೋರಿಗಳನ್ನು ಮಾಡಿ, ಚಾದರ್ ಹಾಕಿ ನಮ್ಮ ಶಿವಲಿಂಗ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ, ಇದು ಆಗಬಾರದು ಎಂದು ಕಿಡಿಕಾರಿದರು.
ಕಳೆದ ಬಾರಿ 15 ಜನ ಯಾವುದೇ ಸಮಸ್ಯೆಯಿಲ್ಲದೇ ಪೂಜೆ ಮಾಡಿದ್ದೇವೆ, ಈ ಬಾರಿ ಪೊಲೀಸರು ಕಂಡ ಕಂಡಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ. ಕೋರ್ಟ್ ನಮಗೆ ಪೂಜೆ ಮಾಡೋದಕ್ಕೂ ಆದೇಶ ಕೊಟ್ಟಿದ್ದರೂ, ಹೀಗೆ ಬ್ಯಾರಿಕೇಡ್ ಹಾಕಿದರೆ ಏನರ್ಥ. ಕೋರ್ಟ್ ನಮಗೆ ಪೂಜೆಗೆ ಅವಕಾಶ ಕೊಟ್ಟಿದೆ, ಪೊಲೀಸ್ ಇಲಾಖೆ ಕೂಡ ತುಷ್ಟೀಕರಣ ಮಾಡುತ್ತಿದೆ. ಅದಕ್ಕಾಗಿ ನಮಗೆ ಪೂಜೆ ಮಾಡಲು ಇಕ್ಕಟ್ಟಿನ ಪರಿಸ್ಥಿತಿ ತಂದಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ | Lok Sabha Election : ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಇಲ್ಲಿದೆ ಪೂರ್ಣ ವಿವರ
ಸ್ಥಳ ಅತಿಕ್ರಮಣ ಮಾಡಿಕೊಳ್ಳುವ ಭಾವನೆ ಅವರಲ್ಲಿದೆ. ಇನ್ನು ಆರು ಇಂಚು ಚಾದರ್ ಹಾಕಿದರೆ ಶಿವಲಿಂಗ ಮುಚ್ಚಿ ಹೋಗುತ್ತದೆ. ಅಂದರೆ ಅಲ್ಲಿಗೆ ಮುಗಿಯಿತು, ಇಲ್ಲಿ ಯಾವುದೂ ಲಿಂಗ ಇಲ್ಲಾ ನಮ್ಮ ಗೋರಿ ಇದೆ ಎಂದು ವಾದ ಮಾಡುತ್ತಾರೆ. ನಾವು ಪೂಜೆ ಮಾಡಲು ಹೋಗಬೇಕಂದರೆ ಪರವಾನಗಿ ಬೇಕು, ಅವರಿಗೆ ಚಾದರ್, ಹೂ ಹಾಕೋದಕ್ಕೆ ಯಾರು ಅನುಮತಿಕೊಟ್ಟರು. ನಮಗೆ ಹೇಗೆ ಅನುಮತಿ ಕೊಡುತ್ತೀರೋ, ಅವರಿಗೂ ಹಾಗೆ ಕೊಡಬೇಕು. ಅಲ್ಲಿ ಈಶ್ವರ ಬಿಟ್ಟರೆ ಬೇರೆ ಯಾರೂ ಇಲ್ಲಾ. ಮೊದಲಿನಿಂದಲೂ ಅವರು ಲ್ಯಾಂಡ್ ಜಿಹಾದ್ ಮಾಡುವುದಕ್ಕೆ ಮುಂದಾಗಿದ್ದಾರೆ. ಕೂಡಲೆ ಎಚ್ಚತ್ತುಕೊಡು ಚಾದರ್ ತೆಗೆಸುವಂತಹ ಕೆಲಸ ಜಿಲ್ಲಾಡಳಿತ ಮಾಡಬೇಕಿದೆ ಎಂದು ಒತ್ತಾಯಿಸಿದರು.