Site icon Vistara News

ಬೆಳಗ್ಗೆಯೂ ಎರಡು ಬಾರಿ ಕೊಲೆ ಬೆದರಿಕೆ ಕರೆ ಬಂದಿದೆ: ಪ್ರಮೋದ್‌ ಮುತಾಲಿಕ್‌

Pramod muthalik

ಧಾರವಾಡ: ಈ ಹಿಂದೆ ನನಗೆ ಸಾಕಷ್ಟು ಬಾರಿ ಜೀವ ಬೆದರಿಕೆ ಬಂದಿದೆ, ಇಂತಹ ಬೆದರಿಕೆಗಳಿಗೆ ನಾನು ಹೆದರುವವನಲ್ಲ. ಈ ಕುತಂತ್ರಗಳ ಮೂಲಕ ಹಿಂದೂ ಸಂಘಟನೆಗಳ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಬುಧವಾರ ಬೆಳಗ್ಗೆಯೂ ಎರಡು ಬಾರಿ ಕೊಲೆ ಬೆದರಿಕೆ ಕರೆ ಬಂದಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ
ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.

ಬಿಜೆಪಿ ಮುಖಂಡ ಯಶಪಾಲ್‌ಸುವರ್ಣ ಹಾಗೂ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಬಂದಿರುವ ಬಗ್ಗೆ ನಗರದಲ್ಲಿ ಬುಧವಾರ ಮಾತನಾಡಿದರು. ಒಬ್ಬೊಬ್ಬರ ತಲೆಗೆ ₹10 ಲಕ್ಷ ಘೋಷಣೆ ಮಾಡಿದ್ದಾರೆ. ಈ ರೀತಿಯ ಕೊಲೆ, ಇನ್ನಾವುದೇ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. 2009ರಲ್ಲಿ ನಟೋರಿಯಸ್‌ ಗೂಂಡಾ ರಶೀದ್ ಮಲಬಾರಿ ಎಂಬಾತ ವರುಣ ಗಾಂಧಿ ಹಾಗೂ ನನ್ನನ್ನು ಕೊಲ್ಲಲು ಬಂದಿದ್ದ. ಬೆಳಗ್ಗೆ ಕೂಡ ಎರಡು ಅಪರಿಚಿತ ಕರೆಗಳ ಮೂಲಕ ಬೆದರಿಕೆ ಬಂದಿವೆ ಎಂದರು.

ಇದನ್ನೂ ಓದಿ | ಬಿಜೆಪಿ, ಶ್ರೀರಾಮ ಸೇನೆ ಮುಖಂಡರ ಹತ್ಯೆಗೆ ₹20 ಲಕ್ಷ ಬಹುಮಾನ, ದೂರು ದಾಖಲು

ನಾನು ಈ ಬೆದರಿಕೆ ಕಾಲ್‌ಗಳಿಗೆ ಹೆದರಿಕೆಗಳಿಗೆ ಹೆದರಲ್ಲ, ಮುಂದೆಯೂ ಪ್ರಖರ ಹಿಂದುತ್ವವಾದಿಗಳಾಗಿ ಹೋರಾಡುತ್ತೇವೆ. ಕಾನೂನು ಬಾಹಿರವಾಗಿ ಹಿಂದೂ ಸಂಘಟನೆಗಳು ಎಂದೂ ಹೋರಾಟ ಮಾಡಿಲ್ಲ. ಸಾಮಾಜಿಕ ಜಾಲತಾಣದ ಮುಸ್ಲಿಂ ಪೇಜ್‌ನಲ್ಲಿ ಈ ಕೊಲೆ ಬೆದರಿಕೆ ಬಂದಿದ್ದು, ಸರ್ಕಾರ ಇವರನ್ನು ಒದ್ದು ಒಳಗೆ ಹಾಕಬೇಕು. ದುಷ್ಕರ್ಮಿಗಳನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದ ಅವರು, ಈ ಬಗ್ಗೆ ಹುಬ್ಬಳ್ಳಿ ಪೊಲೀಸ್‌ ಕಮೀಷನರ್‌ಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ | ನಮ್ಮ ದೇವಸ್ಥಾನ ನಮಗೆ ಕೊಡಿ: ಪ್ರಮೋದ್‌ ಮುತಾಲಿಕ್

Exit mobile version