Site icon Vistara News

MyLang Audio : ಆಡಿಯೊ ಸ್ಟೋರಿ ಚಾಲೆಂಜ್; ಗೆದ್ದರೆ 10 ಸಾವಿರ ರೂ!

MyLang audio App Story Challenge

ಬೆಂಗಳೂರು: ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ಕಳೆದು ಹೋಗಿರುವ ಯುವ ಕನ್ನಡಿಗರನ್ನು ಕನ್ನಡ ಓದಿನತ್ತ ಸೆಳೆಯುವ ಉದ್ದೇಶದಿಂದ ಮೈಲ್ಯಾಂಗ್ ಸಂಸ್ಥೆ ಕನ್ನಡದ ಮೊಟ್ಟ ಮೊದಲ ಆಡಿಯೊ ಸ್ಟೋರಿ ಚಾಲೆಂಜ್ (Audio Story Challenge) ಅನ್ನು ಜುಲೈ 16ರಿಂದ ಜುಲೈ 25ರವರೆಗೆ ಮೈಲ್ಯಾಂಗ್ ಆಡಿಯೊ ಅಪ್ಲಿಕೇಶನ್ (MyLang audio app) ಮೂಲಕ ಹಮ್ಮಿಕೊಳ್ಳಲಾಗಿದೆ.

ಇದರಡಿ ಲೇಖಕರು ತಮ್ಮ ಕತೆಯನ್ನು ಆ್ಯಪ್‍ನಲ್ಲಿ (Story App) ಪ್ರಕಟಿಸಿ, ತಾವೇ ವಾಚಿಸಬಹುದಾಗಿದೆ. ಇಲ್ಲವೇ ಗೆಳೆಯ/ಗೆಳತಿಯನ್ನೂ ಆಹ್ವಾನಿಸಬಹುದು. ಕಥಾ ವಾಚಕರು ತಮ್ಮ ಇಷ್ಟದ ಕತೆಯನ್ನು ಆಯ್ದುಕೊಂಡು ವಾಚಿಸಿ, ಪ್ರಕಟಿಸಬಹುದು. ಸ್ಪರ್ಧೆಯ ಕೊನೆಯಲ್ಲಿ ಯಾವ ಆಡಿಯೊ ಕತೆಗೆ ಅತಿ ಹೆಚ್ಚು ಪ್ಲೇ ಕೌಂಟ್ ದೊರೆಯುತ್ತದೆಯೋ ಆ ಕತೆಗೆ 10,000 ರೂಪಾಯಿ ಬಹುಮಾನ ದೊರೆಯಲಿದ್ದು, ಕನ್ನಡದ ಕತೆಗಾರರು ಮತ್ತು ಕಥಾ ವಾಚಕರು www.mylangaudio.in/kn/challenge ಕೊಂಡಿಯಲ್ಲಿ ಹೆಚ್ಚಿನ ವಿವರಗಳನ್ನು ಪಡೆಯಬಹುದಾಗಿದೆ.

ಏನಿದು “ಮೈಲ್ಯಾಂಗ್ ಆಡಿಯೊ”?

ಹೊಸ ಓದುಗರನ್ನು ಆಡಿಯೊ ಮೂಲಕ ಓದಿನತ್ತ ತರುವ ಒಂದು ಕಮ್ಯುನಿಟಿ ಪ್ರಾಡಕ್ಟ್ ಆಗಿ “ಮೈಲ್ಯಾಂಗ್ ಆಡಿಯೊ” ಅನ್ನು ಮೈಲ್ಯಾಂಗ್ ಸಂಸ್ಥೆ ಹೊರ ತಂದಿದೆ. ಇದು ಕತೆಗಾರರನ್ನು, ದನಿ ಕಲಾವಿದರನ್ನು ಬೆಸೆದು ಆಡಿಯೊ ಕತೆಗಳ ಮಾಧ್ಯಮವನ್ನು ಬಳಸಿ ಹೊಸ ಓದುಗರನ್ನು ಕೇಳುವಿಕೆಯ ಮೂಲಕ ಕನ್ನಡ ಓದಿನತ್ತ ತರುವ ಗುರಿ ಹೊಂದಿದೆ.

ಇದನ್ನೂ ಓದಿ: Weather Report : ಬಿರುಗಾಳಿ ಸಹಿತ ಭಾರಿ ಮಳೆ; ಮುಂದಿನ 48 ಗಂಟೆ ಈ ಜಿಲ್ಲೆಯವರು ಎಚ್ಚರವಾಗಿರಿ

“ಮೈಲ್ಯಾಂಗ್ ಆಡಿಯೊ” ಅಪ್ಲಿಕೇಶನ್ ಅಲ್ಲಿ ನೂರಾರು ಕತೆಗಾರರು ಮತ್ತು ಕಥಾ ವಾಚಕರು ಈಗ ದಿನವೂ ಹೊಸ ಕತೆಗಳನ್ನು ಆಡಿಯೊ ರೂಪದಲ್ಲಿ ಪ್ರಕಟಿಸುತ್ತಿದ್ದಾರೆ. ಒಂದು ಪ್ರಬಲವಾದ ಸಮುದಾಯ ಇಲ್ಲಿ ನೆಲೆಗೊಳ್ಳುತ್ತಿದೆ. ಈ ನೆಲೆಯನ್ನು ಇನ್ನಷ್ಟು ಹಿಗ್ಗಿಸುವ ಪ್ರಯತ್ನವಾಗಿ ಮೈಲ್ಯಾಂಗ್ ಸಂಸ್ಥೆ ಇದೇ ಮೊದಲ ಬಾರಿ ಆಡಿಯೊ ಸ್ಟೋರಿ ಚಾಲೆಂಜ್ ಒಂದನ್ನು ಕನ್ನಡದಲ್ಲಿ ಹಮ್ಮಿಕೊಂಡಿದ್ದು, ಕೇಳುಗರ ಅತಿ ಹೆಚ್ಚು ಮನ್ನಣೆ ಪಡೆಯುವ ಕತೆಗೆ 10,000 ರೂಪಾಯಿಗಳ ಬಹುಮಾನವನ್ನು ಘೋಷಿಸಿದೆ.

Exit mobile version