Site icon Vistara News

Anti Child labour day : ಮಕ್ಕಳ ಕೈಗೆ ಪೆನ್ಸಿಲ್‌ ಕೊಡಿ, ಸುತ್ತಿಗೆಯಲ್ಲ; ನಮ್ಮ ಕರ್ನಾಟಕ ಸೇನೆ ಜಾಗೃತಿ ಜಾಥಾ

Anti child labour day

#image_title

ಬೆಂಗಳೂರು: ಪೆನ್ಸಿಲ್‌ ಹಿಡಿಯುವ ಕೈಗಳು ಸುತ್ತಿಗೆ ಹಿಡಿಯುವಂತಾಗಿದೆ, ದಯವಿಟ್ಟು ಬೆಳೆಯುವ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ (Child labours) ಮಾಡಬೇಡಿ- ಈ ರೀತಿಯ ಮನವಿಯೊಂದಿಗೆ ನಮ್ಮ ಕರ್ನಾಟಕ ಸೇನೆ (Namma Karnataka Sene) ಬೆಂಗಳೂರಿನ ಹಲವು ಕಡೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿತು.

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ (ಜೂನ್‌ 12) (Anti child labour day) ಅಂಗವಾಗಿ ನಮ್ಮ ಕರ್ನಾಟಕ ಸೇನೆಯ ನಮ್ಮ ಕರುನಾಡ ಕಟ್ಟಡ ಕಾರ್ಮಿಕರ ಸಂಘದ (Building labours association) ವತಿಯಿಂದ ಬೆಂಗಳೂರಿನ ಕ್ವೀನ್ಸ್‌ ರಸ್ತೆಯ ಬಾಳೆಕುಂದ್ರಿ ಸರ್ಕಲ್‌ನಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳನ್ನೂ ಸೇರಿಸಿಕೊಂಡು ಪ್ರತಿಭಟನೆ ನಡೆಸಲಾಯಿತು.

ಜಾಗೃತಿ ಜಾಥಾದಲ್ಲಿ ಭಾಗವಹಿಸಿದ ಸಂಘಟನೆಯ ಪ್ರಮುಖರು

ಉತ್ತರ ಕರ್ನಾಟಕ ಮತ್ತಿತರ ಭಾಗಗಳಿಂದ ಬೆಂಗಳೂರಿಗೆ ಬರುವ ಕಾರ್ಮಿಕರ ಮಕ್ಕಳು ಶಾಲೆಗೆ ಹೋಗಲು ಆಗದೆ ಬಾಲ ಕಾರ್ಮಿಕರಾಗುತ್ತಿದ್ದಾರೆ. ಮಕ್ಕಳು ಶಿಕ್ಷಣ ಮುಂದುವರಿಸಲಾಗದೆ ಇರುವುದರಿಂದ ಮುಂದೆ ಇಡೀ ಕುಟುಂಬಗಳೇ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಬೆಂಗಳೂರಿನ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖರು ಹೇಳಿದರು. ಈ ಬಗ್ಗೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರ ಗಮನಕ್ಕೂ ತರಲಾಗುವುದು ಎಂದು ವಿವರಿಸಿದರು.

ಇದನ್ನೂ ಓದಿ: Labour Day 2023: ಕಾರ್ಮಿಕರ ದಿನದ ಇತಿಹಾಸ, ಪ್ರಸ್ತುತತೆ

ಬಾಲಕಾರ್ಮಿಕತೆ ವಿರುದ್ಧ ಜಾಥಾ

ದುಡಿಮೆ ಬೇಡ, ಶಾಲೆ ಬೇಕು, ಮಕ್ಕಳನ್ನು ಶಾಲೆಗೆ ಕಳುಹಿಸಿ ದುಡಿಮೆಗಲ್ಲ, ಬಾಲ ಕಾರ್ಮಿಕ ಪದ್ಧತಿ ಭೂತದಂತೆ ಎಂಬಿತ್ಯಾದಿ ಪ್ಲಕಾರ್ಡ್‌ಗಳನ್ನು ಪ್ರದರ್ಶಿಸಲಾಯಿತು.

ಎಂ. ಗುರುರಾಜ್‌ ಪಡುಕೋಟೆ ಅವರು ನಮ್ಮ ಕರ್ನಾಟಕ ಸೇನೆಯ ರಾಜ್ಯಾದ್ಯಕ್ಷರಾಗಿದ್ದು, ಗುರು ದೊಡ್ಡಮನಿ, ಕಮಲೇಶ್‌ ಅವರ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು. ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿಸಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕೈಜೋಡಿಸೋಣ ಎಂದು ಅವರು ಮನವಿ ಮಾಡಿದ್ದಾರೆ.

Anti child labour day by Namma Karnataka sene

ಬಾಲ ಕಾರ್ಮಿಕ ನಿಷೇಧ ಕಾಯಿದೆಯ ಪ್ರಕಾರ, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ವೃತ್ತಿಗಳಲ್ಲಿ ಬಳಸಿಕೊಳ್ಳುವುದು ಅಪರಾಧವಾಗಿದೆ. ಆದರೂ ಕಡಿಮೆ ವೇತನ ಕೊಟ್ಟರೆ ಸಾಕಾಗುತ್ತದೆ ಎಂಬ ಕಾರಣಕ್ಕಾಗಿ ಕೆಲವು ಸಂಸ್ಥೆ ಮತ್ತು ಉದ್ಯಮಗಳು ಅವರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿವೆ. ಇದರ ಜತೆಗೆ ಕೆಲವು ಹೆತ್ತವರು ಕೂಡಾ ತಮ್ಮ ಬದುಕಿನ ಸಂಕಷ್ಟಕ್ಕಾಗಿ ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ತಳ್ಳುತ್ತಿದ್ದಾರೆ. ಈ ರೀತಿ ಎರಡೂ ವರ್ಗಕ್ಕೆ ಜಾಗೃತಿ ಮೂಡಿಸಿ ಮಕ್ಕಳ ಬದುಕನ್ನು ಹಸನುಗೊಳಿಸುವ ಉದ್ದೇಶದಿಂದ ಜೂನ್‌ 12ರನ್ನು ಜಾಗತಿಕ ಬಾಲ ಕಾರ್ಮಿಕ ವಿರೋಧಿ ದಿನವಾಗಿ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯೇ ಇದನ್ನು ಘೋಷಣೆ ಮಾಡಿದ್ದು, ಎಲ್ಲ ಸದಸ್ಯ ರಾಷ್ಟ್ರಗಳಲ್ಲಿ ಆಚರಣೆ ನಡೆಯುತ್ತದೆ.

Exit mobile version