ಬೆಂಗಳೂರು: ಕರ್ನಾಟಕ ಬಂದ್ (Karnataka Bandh) ಬಿಸಿ ನಡುವೆಯೇ ಬಿಎಂಆರ್‌ಸಿಎಲ್ (Namma Metro) ಕೆಲವು ಮಾರ್ಗದಲ್ಲಿ ಸುರಕ್ಷತಾ ಪರಿಶೀಲನೆಗೆ ಮುಂದಾಗಿದೆ. ಇದರಿಂದಾಗಿ ಸೆಪ್ಟೆಂಬರ್ 29ರಂದು ಮೆಟ್ರೋ ರೈಲಿನ ಒಂದು ಮಾರ್ಗದಲ್ಲಿ ಇಡೀ ದಿನ ಸಂಚಾರ (No metro service full day on sep 29) ಇರುವುದಿಲ್ಲ.
ಸೆ.29ರಂದು ನೇರಳೆ ಮಾರ್ಗದಲ್ಲಿ ಒಟ್ಟು 8 ನಿಲ್ದಾಣಗಳಲ್ಲಿ ಮೆಟ್ರೋ ರೈಲುಗಳು ಸಂಚರಿಸುವುದಿಲ್ಲ. ಸಾಮಾನ್ಯವಾಗಿ ಮೆಟ್ರೋ ಕಾಮಗಾರಿ ಪರಿಶೀಲನೆ (Metro work examination), ಸಿಗ್ನಲಿಂಗ್ ಕೆಲಸಗಳಿಗಾಗಿ (Signalling work) ದಿನದ ಒಂದೆರಡು ಗಂಟೆ ಸಂಚಾರ ವ್ಯತ್ಯಯವಾಗುವುದು ಇದೆ. ಆದರೆ, ಈ ಬಾರಿ ಇಡೀ ದಿನ ಬಂದ್ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: Karnataka Bandh : ಶಾಲೆ, ಕಾಲೇಜು ಬಂದ್ ಇದ್ಯಾ? ರಜೆ ಕೊಡುವ ಅಧಿಕಾರ ಡಿಸಿಗಳಿಗೆ
ಯಾವ್ಯಾವ ನಿಲ್ದಾಣಗಳಿಂದ ಮೆಟ್ರೋ ಓಡಾಟವಿಲ್ಲ?
ಸೆ. 29 ರಂದು ಕೆಂಗೇರಿ ಮತ್ತು ಮೈಸೂರು ರೋಡ್ ನಿಲ್ದಾಣಗಳ ನಡುವೆ ದಿನಪೂರ್ತಿ ರೈಲು ಸೇವೆಗಳು ಲಭ್ಯವಿರುವುದಿಲ್ಲ ಎಂದು ಮೆಟ್ರೋ ಪ್ರಕಟಣೆ ತಿಳಿಸಿದೆ.
1) ಮೈಸೂರು ರೋಡ್
2) ನಾಯಂಡಹಳ್ಳಿ
3) ಆರ್.ಆರ್ ನಗರ
4) ಜ್ಞಾನಭಾರತಿ
5) ಪಟ್ಟಣಗೆರೆ
6) ಕೆಂಗೇರಿ ಬಸ್ ಟರ್ಮಿನಲ್
7) ಕೆಂಗೇರಿ ನಿಲ್ದಾಣದವರೆಗೆ ರೈಲು ಓಡುವುದಿಲ್ಲ.
ಬೈಯಪ್ಪನ ಹಳ್ಳಿಯಿಂದ ಕೆಂಗೇರಿಗೆ ಹೋಗುವ ರೈಲು ಮೈಸೂರು ರೋಡ್ ನಿಲ್ದಾಣದವರೆಗೆ ಹೋಗಿ ಮರಳುತ್ತದೆ. ಕೆಂಗೇರಿಯ ಬದಲು ಮೈಸೂರು ರೋಡ್ ನಿಲ್ದಾಣವೇ ಆರಂಭ ಮತ್ತು ಕೊನೆಯ ನಿಲ್ದಾಣವಾಗಿರುತ್ತದೆ. ಜತೆಗೆ ಕೆಂಗೇರಿಯಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆಯೂ ಸುರಕ್ಷತಾ ಪರಿಶೀಲನೆಯನ್ನು ನಡೆಸಲಾಗುತ್ತಿದೆ. ಹೀಗಾಗಿ ಕೃಷ್ಣರಾಜಪುರ ಮತ್ತು ಗರುಡಾಚಾರ್ಪಾಳ್ಯ ಮೆಟ್ರೋ ನಿಲ್ದಾಣಗಳ ನಡುವೆ ಕೂಡ ಪೂರ್ಣ ದಿನ ಮೆಟ್ರೋ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಆದರೆ ಗರುಡಾಚಾರ್ಪಾಳ್ಯಯಿಂದ ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ರೈಲು ಸೇವೆ ಪೂರ್ಣ ದಿನ ಇರಲಿದೆ.
1) ಕೆ.ಆರ್.ಪುರ
2) ಸಿಂಗಯ್ಯನಪಾಳ್ಯ
3) ಗರುಡಾಚಾರ್ಪಾಳ್ಯ ನಡುವೆ ರೈಲು ಓಡಾಟ ಇರುವುದಿಲ್ಲ.
ಮೆಟ್ರೋ ಸಂಚಾರ ಸ್ಥಗಿತಕ್ಕೆ ಕಾರಣ ಏನು?
ಕೆಂಗೇರಿಯಿಂದ – ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆ ಹೊಸದಾಗಿ ಮೆಟ್ರೋ ಮಾರ್ಗ ರಚನೆಯಾಗಿದೆ. ಈ ಮಾರ್ಗದ ಸುರಕ್ಷತಾ ಪರಿಶೀಲನೆಯನ್ನು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (ದಕ್ಷಿಣ ವೃತ್ತ) ನಡೆಸುವುದರಿಂದ ಮೆಟ್ರೋ ರೈಲು ಕಾರ್ಯಾಚರಣೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ.
ಈ ಕೆಳಗಿನ ಮಾರ್ಗಗಳಲ್ಲಿ ರೈಲು ಸೇವೆಗಳು ಲಭ್ಯವಿರುತ್ತದೆ
- ಬೈಯಪ್ಪನಹಳ್ಳಿ – ಮೈಸೂರು ರಸ್ತೆ ನಿಲ್ದಾಣಗಳ ನಡುವೆ ದಿನಪೂರ್ತಿ ಸೇವೆ ಲಭ್ಯವಿದೆ.
- ವೈಟ್ ಫೀಲ್ಡ್ (ಕಾಡುಗೋಡಿ)- ಗರುಡಾಚಾರ್ಪಾಳ್ಯವರೆಗೆ ದಿನಪೂರ್ತಿ ಸೇವೆ ಲಭ್ಯವಿದೆ.
- ಹಸಿರು ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ