ಬೆಂಗಳೂರು: ನಮ್ಮ ಮೆಟ್ರೋ (Namma Metro) ಹಸಿರು ಮಾರ್ಗದ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ನಾಗಸಂದ್ರದಿಂದ ಮಾದಾವರವರೆಗಿನ ವಿಸ್ತರಿತ ಮಾರ್ಗದಲ್ಲಿ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ನಡೆಸಲಾಗಿದ್ದು, ಈ ಬಗ್ಗೆ ಬಿಎಂಆರ್‌ಸಿಎಲ್ ಮಾಹಿತಿ ಹಂಚಿಕೊಂಡಿದ್ದು, ಈ ಮಾರ್ಗವು ಶೀಘ್ರದಲ್ಲೇ ಸಾರ್ವಜನಿಕರ ಬಳಕೆಗೆ ಮುಕ್ತವಾಗುವ ಸಾಧ್ಯತೆ ಇದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನಮ್ಮ ಮೆಟ್ರೋ, ಆ.17ರಂದು ರೀಚ್-3ರ ಎತ್ತರಿಸಿದ ಮಾರ್ಗದಲ್ಲಿನ -ನಾಗಸಂದ್ರದಿಂದ ಮಾದಾವರೆಗಿನ 3.14 ಕಿ.ಮೀ ನಡುವೆ (ರೋಲ್ಲಿಂಗ್ ಸ್ಟಾಕ್) ಮೆಟ್ರೋ ರೈಲು ಮೂಲಕ ಮೊದಲ ಪರೀಕ್ಷಾರ್ಥ ಸಂಚಾರ ನಡೆದಿದೆ. ಕನಿಷ್ಠ 5 ಕಿ.ಮೀ ಮತ್ತು ಗರಿಷ್ಠ 35 ಕಿ.ಮೀ ವೇಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಲಾಯಿತು.
ರೀಚ್-3ರ ಎತ್ತರಿಸಿದ ಮಾರ್ಗದಲ್ಲಿನ -ನಾಗಸಂದ್ರದಿಂದ ಮಾದವರದ -3.14 ಕಿ.ಮೀ ನಡುವೆ (ರೋಲ್ಲಿಂಗ್ ಸ್ಟಾಕ್) ಮೆಟ್ರೋ ರೈಲು ಮೂಲಕ ಮೊದಲ ಪರೀಕ್ಷಾರ್ಥ ಸಂಚಾರ. ಕನಿಷ್ಠ 5ಕಿ.ಮೀ ಮತ್ತು ಗರಿಷ್ಠ 35 ಕಿ.ಮೀ ವೇಗದಲ್ಲಿ ದಿನಾಂಕ 17.08.2024 ರಂದು ನಡೆಸಲಾಯಿತು pic.twitter.com/gKRisrlfuC
— ನಮ್ಮ ಮೆಟ್ರೋ (@OfficialBMRCL) August 18, 2024
ನಾಗಸಂದ್ರ-ಮಾದಾವರ ನಡುವಿನ ಮೂರು ಕಿ.ಮೀ. ಮೆಟ್ರೋ ಕಾಮಗಾರಿ 2017 ರಲ್ಲಿ ಪ್ರಾರಂಭವಾಯಿತು. 2019 ರ ಮಧ್ಯದ ವೇಳೆಗೆ ಕಾಮಗಾರಿ ಮುಗಿಸುವ ಗುರಿ ಹೊಂದಿತ್ತಾದರೂ, ಭೂಸ್ವಾಧೀನದಲ್ಲಿ ವಿಳಂಬವಾದ ಕಾರಣ ಕಾಮಗಾರಿ ವಿಳಂಬವಾಗುತ್ತಲೇ ಸಾಗಿತು. ಭೂಸ್ವಾಧೀನ ಸಮಸ್ಯೆಗಳು, ವಿಶೇಷವಾಗಿ ನೈಸ್ ರಸ್ತೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿನ ವಿಳಂಬ ಮತ್ತು ಕೋವಿಡ್ ಸಾಂಕ್ರಾಮಿಕ ಮೆಟ್ರೋ ಕಾಮಗಾರಿ ವಿಳಂಬಕ್ಕೆ ಕಾರಣಗಳಾಗಿವೆ.
ಇದನ್ನೂ ಓದಿ | Road Accident: ಭೀಕರ ರಸ್ತೆ ಅಪಘಾತ; ಖಾಸಗಿ ಬಸ್-ಟೆಂಪೊ ಡಿಕ್ಕಿಯಾಗಿ 10 ಮಂದಿ ಸಾವು
ಪ್ರಾಯೋಗಿಕ ಸಂಚಾರ ಇನ್ನು ಕೆಲ ದಿನಗಳು ನಡೆಯಲಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಸಂಚಾರ ಆರಂಭವಾಗುವ ಸಾಧ್ಯತೆಗಳಿವೆ. ಅಥವಾ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು ಉದ್ಘಾಟನೆ ಮಾಡುವ ಸಾಧ್ಯತೆ ಇದೆ. ಈ ಮಾರ್ಗದಲ್ಲಿ ನಾಗಸಂದ್ರ, ಮಂಜುನಾಥ ನಗರ, ಜಿಂದಾಲ್, ಮಾದಾವರ ಮೆಟ್ರೋ ನಿಲ್ದಾಣ ಬರಲಿದೆ.
ನಮ್ಮ ಮೆಟ್ರೋದಲ್ಲಿದೆ ಉದ್ಯೋಗಾವಕಾಶ; ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ
ಬೆಂಗಳೂರು: ಬೆಂಗಳೂರಿನಲ್ಲೇ ಉದ್ಯೋಗ ನಿರ್ವಹಿಸಬೇಕು ಎಂದು ಕನಸು ಕಾಣುವವರಿಗೆ ಇಲ್ಲಿದೆ ಸುವರ್ಣಾವಕಾಶ. ನಮ್ಮ ಮೆಟ್ರೋ (Namma Metro)ದಲ್ಲಿ ಖಾಲಿ ಇರುವ 58 ಅಸಿಸ್ಟಂಟ್ ಸೆಕ್ಯೂರಿಟಿ ಆಫೀಸರ್ (Assistant Security Officer) ಹುದ್ದೆಗಳ ಭರ್ತಿಗೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (Bangalore Metro Rail Corporation Limited) ಅರ್ಜಿ ಆಹ್ವಾನಿಸಿದೆ (BMRCL Recruitment 2024). ಆಸಕ್ತರು ಆನ್‌ಲೈನ್ ಮತ್ತು ಆಫ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಸೆಪ್ಟೆಂಬರ್ 9 (Job Alert).
ಹುದ್ದೆಗಳ ವಿವರ ಮತ್ತು ಅರ್ಹತೆ
ಅಸಿಸ್ಟಂಟ್ ಸೆಕ್ಯೂರಿಟಿ ಆಫೀಸರ್ ಹುದ್ದೆ ಇದಾಗಿದ್ದು, ಜೂನಿಯರ್ ಕಮಿಷನ್ಡ್ ಶ್ರೇಣಿಯಲ್ಲಿ ಸೇವೆಯಲ್ಲಿರುವ ಅಥವಾ ನಿವೃತ್ತ ಸಿಬ್ಬಂದಿ, ಅಧಿಕಾರಿ / ಸುಬೇದಾರ್ ಮೇಜರ್ / ಸುಬೇದಾರ್ / ಮಾಸ್ಟರ್ ಚೀಫ್ ಪೆಟ್ಟಿ, ಆಫೀಸರ್ / ಮಾಸ್ಟರ್ ವಾರಂಟ್ ಆಫೀಸರ್ / ವಾರಂಟ್ ಆಫೀಸರ್ ಅಥವಾ ತತ್ಸಮಾನ, ರಕ್ಷಣಾ ಸೇವೆಯಲ್ಲಿ ಇದ್ದವರು, ಇನ್ಸ್‌ಪೆಕ್ಟರ್ / ಸಬ್ ಇನ್ಸ್‌ಪೆಕ್ಟರ್ / ಎಎಸ್ಐ ಅಥವಾ ತತ್ಸಮಾನ ಶ್ರೇಣಿಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದವರು ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ವಯೋಮಿತಿ
ಗರಿಷ್ಠ ವಯೋಮಿತಿ 62 ವರ್ಷ. ಗಮನಿಸಿ, ಇದು ಗುತ್ತಿಗೆ ಆಧಾರಿತ ಉದ್ಯೋಗವಾಗಿದ್ದು, 60 ವರ್ಷಕ್ಕಿಂತ ಕೆಳಗಿರುವವರನ್ನು 3 ವರ್ಷಕ್ಕೆ ಮತ್ತು 60 ವರ್ಷಕ್ಕಿಂತ ಮೇಲಿರುವವರನ್ನು 1 ವರ್ಷಕ್ಕೆ ನೇಮಕ ಮಾಡಿಕೊಳ್ಳಲಾಗುತ್ತದೆ. ಉದ್ಯೋಗ ನಿರ್ವಹಿಸುವ ರೀತಿಯನ್ನು ನೋಡಿಕೊಂಡು ಗುತ್ತಿಗೆ ಮುಂದಿರಿಸುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಆಯ್ಕೆ ವಿಧಾನ ಮತ್ತು ಮಾಸಿಕ ವೇತನ
ದೈಹಿಕ ಪರೀಕ್ಷೆ, ಅರ್ಹತೆ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ 60 ವರ್ಷದೊಳಗಿನವರಿಗೆ 32,950 ರೂ. ಮತ್ತು 60 ವರ್ಷ ದಾಟಿದವರಿಗೆ 30,000 ರೂ. ಮಾಸಿಕ ವೇತನ ನೀಡಲಾಗುತ್ತದೆ.