ಬೆಂಗಳೂರು: ನಮ್ಮ ಮೆಟ್ರೊ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲುಗಳ ಕಾಯುವಿಕೆಯ ಅವಧಿಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ಕಡಿತಗೊಳಿಸಿದೆ.
ಆ.8ರಿಂದ ನಿತ್ಯ ಬೆಳಗ್ಗೆ 5ರಿಂದ 6 ಗಂಟೆ ನಡುವೆ ಹಾಗೂ ರಾತ್ರಿ 10ರಿಂದ 11 ಗಂಟೆಯ ಅವಧಿಯಲ್ಲಿ ಕಾಯುವಿಕೆ ಅವಧಿಯನ್ನು 20 ನಿಮಿಷದಿಂದ 15 ನಿಮಿಷಗಳಿಗೆ ತಗ್ಗಿಸಲಾಗಿದೆ. ಇನ್ನು ಮುಂದೆ ಮೇಲಿನ ನಿರ್ದಿಷ್ಟ ಅವಧಿಯಲ್ಲಿ ಪ್ರತಿ 15 ನಿಮಿಷಕ್ಕೊಂದು ರೈಲು ಸಂಚಾರ ಮಾಡಲಿದೆ.
ಈ ಹಿಂದೆ ಪ್ರತಿ 20 ನಿಮಿಷಕ್ಕೊಂದು ರೈಲು ಸಂಚಾರ ಮಾಡುತ್ತಿತ್ತು. ಇದೀಗ ಕಾಯುವಿಕೆ ಅವಧಿಯನ್ನು 5 ನಿಮಿಷ ಕಡಿತ ಮಾಡಲಾಗಿದ್ದು, ಇದರ ಸದುಪಯೋಗ ಪಡೆಯಬೇಕು ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್.ಯಶವಂತ ಚವಾಣ್ ತಿಳಿಸಿದ್ದಾರೆ.
ಇದನ್ನೂ ಓದಿ | ಕೋತಿ ಇದೆ ಎಚ್ಚರಿಕೆ! ನಮ್ಮ ಮೆಟ್ರೋದಲ್ಲಿ ಕಂಡು ಬಂತು ಹೊಸ ನೋಟಿಸ್ ಬೋರ್ಡ್!