Site icon Vistara News

Nandini Milk: ಬೆಂಗಳೂರು ಘಟಕದಲ್ಲಿ ತಾಂತ್ರಿಕ ಸಮಸ್ಯೆ; ನಂದಿನಿ ಹಾಲು ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆ

Hospital Guard Greets Ghost Patient Viral Video

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ನಂದಿನಿ ಹಾಲು (Nandini Milk) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಶುಕ್ರವಾರದಿಂದ (ಫೆ.3) ಸರಿಯಾದ ಸಮಯಕ್ಕೆ ನಂದಿನಿ ಹಾಲು ಸಿಗುವುದು ಅನುಮಾನವಾಗಿದೆ. ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್‌ನಲ್ಲಿ ಟೆಕ್ನಿಕಲ್ ಸಮಸ್ಯೆ ಎದುರಾಗಿದೆ.

ಕಳೆದೆರೆಡು ದಿನಗಳಿಂದ‌ ನಗರದ ಅನೇಕ ಕಡೆ ಸರಿಯಾದ ಸಮಯಕ್ಕೆ ನಂದಿನಿ ಹಾಲು ಲಭ್ಯವಾಗುತ್ತಿಲ್ಲ. ಬಮುಲ್‌ನ ಇಆರ್‌ಪಿ ಸರ್ವರ್ ಡೌನ್ ಆಗಿದ್ದು, ಈ ಸಮಸ್ಯೆಯಿಂದ ಹಾಲಿನ ಲಾರಿಗಳಿಗೆ ಸಿಸ್ಟಮ್‌ನ ಡೇಟಾ ಪ್ರಕಾರ ಲೋಡ್ ಮಾಡಲು ತೊಂದರೆ ಆಗುತ್ತಿದೆ. ಹೀಗಾಗಿ ಸರಿಯಾದ ಸಮಯಕ್ಕೆ ಲೋಡ್ ಆಗದ ಕಾರಣ ಹಾಲಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

ಇದನ್ನೂ ಓದಿ: Bengaluru Cylinder Blast: ಬೆಂಗಳೂರಿನಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟ; ಮಕ್ಕಳು ಸೇರಿ 10 ಜನರಿಗೆ ಗಂಭೀರ ಗಾಯ

ಇದೇ ಸಮಸ್ಯೆ ಮುಂದಿನ ಎರಡು ದಿನ ಮುಂದುವರಿಯುವ ಸಾಧ್ಯತೆ ಇದೆ. ಸಿಸ್ಟಂ ಸರಿ ಮಾಡಲು ಬಮುಲ್ ಅಧಿಕಾರಿಗಳು ಈಗಾಗಲೇ ಹೈದರಾಬಾದ್ ತಜ್ಞರ ಮೊರೆ ಹೋಗಿದ್ದಾರೆ. ಶುಕ್ರವಾರ ಹೈದ್ರಾಬಾದ್‌ ತಜ್ಞರ ತಂಡ ಆಗಮಿಸುವ ಸಾಧ್ಯತೆ ಇದೆ. ಶನಿವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಬಮೂಲ್‌ನ ಅಧ್ಯಕ್ಷ ನರಸಿಂಹ ಮೂರ್ತಿ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version