Site icon Vistara News

Nandini Milk Price Hike | ಹಾಲಿನ ದರ ಹೆಚ್ಚಳಕ್ಕೆ ಎರಡು ದಿನ ಬ್ರೇಕ್‌ ಹಾಕಿದ ಸಿಎಂ; ಆದರೆ ದರ ಏರಿಕೆ ಪಕ್ಕಾ?

cm bommai

ಬೆಂಗಳೂರು: ರೈತರಿಗೆ, ಗ್ರಾಹಕರಿಗೆ ತೊಂದರೆಯಾಗದಂತೆ ನಂದಿನಿ ಹಾಲಿನ ದರ (Nandini Milk Price Hike) ಏರಿಕೆ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಹಾಲಿನ ದರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದು, ದರ ಏರಿಕೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಕರ್ನಾಟಕ ರಾಜ್ಯ ಹಾಲು ಮಹಾ ಮಂಡಳಕ್ಕೆ (ಕೆಎಂಎಫ್‌) ಎರಡು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಹಾಲಿನ ದರ ಏರಿಕೆ ಇಲ್ಲ, ದರ ಏರಿಕೆ ಬಗ್ಗೆ ಸೂಕ್ತ ನಿರ್ಧಾರ ಮಾಡಲು ಕೆಎಂಎಫ್‌ನವರು ಎರಡು ದಿನ ಸಮಯ ಕೇಳಿದ್ದಾರೆ. ಹೀಗಾಗಿ ದರ ಪರಾಮರ್ಶೆ ಮಾಡಲು 2 ದಿನ ಸಮಯ ನೀಡಲಾಗಿದೆ. ಈ ಹಿಂದೆ ನಿರ್ಧರಿಸಿದ್ದ ದರ ಬೇಡ ಎಂದು ಸೂಚಿಸಲಾಗಿದೆ. ಈ ಬಗ್ಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ದರ ಏರಿಕೆ ಬಗ್ಗೆ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ನವೆಂಬರ್‌ 14ರಂದು ಹಾಲಿನ ದರ ಏರಿಸಿ ಕೆಎಂಎಫ್‌ ಪ್ರಕಟಣೆ ಹೊರಡಿಸಿತ್ತು. ನಂದಿನಿ ಹಾಲಿನ ದರವನ್ನು ಲೀಟರ್‌ಗೆ 3 ರೂ.ನಂತೆ ಹೆಚ್ಚಿಸಲಾಗಿದೆ. ಒಂದು ಲೀಟರ್‌ ಟೋನ್ಡ್‌ ಹಾಲಿನ ದರ 37 ರೂ.ಗಳಿಂದ 40 ರೂ.ಗಳಿಗೆ ಏರಲಿದೆ. ಮೊಸರಿನ ದರವನ್ನೂ 3 ರೂಪಾಯಿ ಹೆಚ್ಚಿಸಲಾಗಿದ್ದು, ಒಂದು ಕೆ.ಜಿ ಮೊಸರಿನ ದರ 45 ರೂಪಾಯಿಯಿಂದ 48 ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿತ್ತು. ಆದರೆ, ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ತಡೆ ನೀಡಿ, ನವೆಂಬರ್‌ 20ರ ಬಳಿಕ ಹಾಲಿನ ದರ ಏರಿಕೆ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದ್ದರು. ಇದೀಗ ಮತ್ತೆ ಎರಡು ದಿನಗಳ ಕಾಲ ಹಾಲಿನ ದರ ಏರಿಕೆಗೆ ಬ್ರೇಕ್‌ ಬಿದ್ದಿದೆ.

ಇದನ್ನೂ ಓದಿ | Govt Employees | 2023ರ ಸಾರ್ವತ್ರಿಕ ರಜೆ ಪಟ್ಟಿ ಪ್ರಕಟ: ಸರ್ಕಾರಿ ನೌಕರರಿಗೆ 98 ದಿನ ರಜೆ

Exit mobile version