Site icon Vistara News

ಕುಸಿಯುತ್ತಿದೆ ಬೆಟ್ಟ, ರಾಷ್ಟ್ರೀಯ ಹೆದ್ದಾರಿ 275 ಬಂದ್ ಆಗುವ ಸಾಧ್ಯತೆ

ರಾಷ್ಟ್ರೀಯ ಹೆದ್ದಾರಿ 275 ಬಂದ್

ಮಡಿಕೇರಿ/ಮಂಗಳೂರು : ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಮಡಿಕೇರಿ ತಾಲೂಕಿನ ಕರ್ತೋಜಿ ಬಳಿ ಬೃಹತ್ ಬೆಟ್ಟ ಕುಸಿಯುತ್ತಿದೆ. ಇದರಿಂದಾಗಿ ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 275 ಬಂದ್ ಆಗುವ ಸಾಧ್ಯತೆ ಕಂಡು ಬಂದಿದೆ. ಬೆಟ್ಟ ಕುಸಿಯುತ್ತಿರುವ ಒತ್ತಡಕ್ಕೆ ರಾಷ್ಟ್ರೀಯ ಹೆದ್ದಾರಿ 275ರ ಒಂದು ಭಾಗ ಈಗಾಗಲೇ ಸಂಪೂರ್ಣ ಹಾಳಾಗಿದೆ. ಈ ಕಾರಣದಿಂದಾಗಿ ಒಂದು ಭಾಗದಲ್ಲಿ ಮಾತ್ರ ವಾಹನಗಳು ಓಡಾಡುತ್ತಿವೆ.

ಇದನ್ನೂ ಓದಿ | ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಭಾರಿ ಮಳೆ, ಕಾವೇರಿ ನದಿ ನೀರಿನ ಮಟ್ಟ ಏರಿಕೆ

ಇನ್ನೂ ಎರಡು ತಿಂಗಳು ಭಾರಿ ಮಳೆ ಸುರಿಯುವ ಹಿನ್ನೆಲೆಯಲ್ಲಿ ಹೆದ್ದಾರಿ ಸಂಪೂರ್ಣ ಕುಸಿದು ಹೋಗುವ ಸಾಧ್ಯತೆಗಳು ನಿರ್ಮಾಣವಾಗಿದೆ. ಇದರಿಂದಾಗಿ ಮಡಿಕೇರಿ, ಮಂಗಳೂರು ಸಂಪರ್ಕ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ʻʻರಸ್ತೆಯ ಒಂದು ಭಾಗದಲ್ಲಿ ತಕ್ಷಣವೇ ಮಣ್ಣು ತೆಗೆಯಲಾಗುವುದು. ನೀರು ಸರಾಗವಾಗಿ ಹೋಗುವಂತೆ ಮಾಡಲಾಗುತ್ತದೆ. ಹೀಗಾಗಿ ಹೆದ್ದಾರಿಗೆ ಏನೂ ಸಮಸ್ಯೆ ಆಗಲಾರದುʼʼ ಎಂದು ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ ನಾಗರಾಜು ಹೇಳಿಕೆ ನೀಡಿದ್ದಾರೆ.

ಈಗಾಗಲೇ ಮೇಲ್ಭಾಗ ಹತ್ತು ಎಕರೆಯಷ್ಟು ಗುಡ್ಡ ಕೆಳಭಾಗಕ್ಕೆ ಜಾರಿ ಬಂದಿದೆ. ಇದರಿಂದ ಮಡಿಕೇರಿ ಮಂಗಳೂರು ಹೆದ್ದಾರಿ ಬಂದ್ ಆಗುವ ಆತಂಕ ನಿರ್ಮಾಣವಾಗಿದೆ.

ಇದನ್ನೂ ಓದಿ | ರಾಜ್ಯಾದ್ಯಂತ ಭಾರಿ ಮಳೆ; ಕೊಡಗಿನ ವಿವಿಧೆಡೆ ಭೂಕುಸಿತ, ರಸ್ತೆ ಸಂಪರ್ಕ ಕಡಿತ

Exit mobile version