Site icon Vistara News

Highway Danger: ನಿಟ್ಟೂರು ಸಮೀಪದ ಕುಸಿದುಬಿದ್ದ ಕಿರು ಸೇತುವೆಯ ತಡೆಗೋಡೆ ದುರಸ್ತಿಗೆ ಆಗ್ರಹ

National Highway ranibennur- baindur

#image_title

ನಿಟ್ಟೂರು: ರಾಣಿಬೆನ್ನೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನಿಟ್ಟೂರು ಸಮೀಪದ ನರ್ಸರಿ ಬಳಿ ಕಿರು ಸೇತುವೆಯ ತಡೆಗೋಡೆ 3-4 ತಿಂಗಳ ಹಿಂದೆಯೇ ಕುಸಿದುಬಿದ್ದಿದೆ. ಈ ಭಾಗದಲ್ಲಿ ಸಂಚರಿಸುವ ವಾಹನಗಳು ಸ್ವಲ್ಪವೇ ಎಚ್ಚರ ತಪ್ಪಿದರೂ ಕಂದಕಕ್ಕೆ ಬೀಳುವುದು ನಿಶ್ಚಿತವಾಗಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದನ್ನು ಕಂಡರೂ ಕಾಣದಂತಿರುವ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಲ್ಕು ತಿಂಗಳ ಹಿಂದೆ ಪ್ರವಾಸಿ ಕಾರೊಂದು ಈ ಕಿರು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು, ಕಂದಕಕ್ಕೆ ಮಗುಚಿ ಬಿದ್ದಿತ್ತು. ಕಾರು ಗುದ್ದಿದ ರಭಸಕ್ಕೆ ಈ ತಡೆಗೋಡೆ ಬಿದ್ದು ಹೋಗಿತ್ತು. ನಂತರ ಇದೇ ಸ್ಥಳದಲ್ಲಿ 3-4 ವಾಹನಗಳ ಅಪಘಾತ ಸಂಭವಿಸಿದರೂ ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರ ಈ ಕಡೆ ಗಮನಹರಿಸದೇ ಇರುವುದು ಇಲ್ಲಿ ಸಂಚಾರ ಮಾಡುವವರಿಗೆ ಆತಂಕ ತರಿಸಿದೆ. ರಜಾ ದಿನಗಳಲ್ಲಿ ಕೊಲ್ಲೂರು, ಕೊಡಚಾದ್ರಿ ಹಾಗೂ ಸಿಗಂದೂರಿಗೆ ಬರುವ ಪ್ರವಾಸಿಗರು ಮತ್ತು ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಚಿಕ್ಕದಾದ ರಸ್ತೆಯುಳ್ಳ ಈ ಕಿರು ಸೇತುವೆಯ ಮೇಲೆ ಸಂಚಾರ ಮಾಡುವಾಗ ಸ್ವಲ್ಪವೇ ಆಯ ತಪ್ಪಿದರೂ ದೊಡ್ಡ ಅನಾಹುತವಾಗುವುದು ಖಚಿತ. ಕೂಡಲೇ ಸಂಬಂಧಪಟ್ಟ ಇಲಾಖೆಯು ಈ ತಡೆಗೋಡೆ ಸರಿಪಡಿಸಿಕೊಡಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ | Teacher Recruitment : ಆಯ್ಕೆ ಪಟ್ಟಿ ರದ್ದು; ಹೈಕೋರ್ಟ್‌ ತೀರ್ಪಿನ ವಿರುದ್ಧ ಶಿಕ್ಷಣ ಇಲಾಖೆಯಿಂದ ಮೇಲ್ಮನವಿ?

Exit mobile version