ಕಾರವಾರ: ಯಲ್ಲಾಪುರದ ಉಮ್ಮಚಗಿಯ ಸುಮೇರು ಜ್ಯೋತಿರ್ವನಮ್ ವತಿಯಿಂದ ಮೈಸೂರಿನ ಭಾರತೀಯ ಜ್ಞಾನ ವಿಜ್ಞಾನ ಪರಿಷದ್, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಘಟಕ ಹಾಗೂ ಕಾಗಾರಕೊಡ್ಲುವಿನ ಸಾತ್ವಿಕ್ ಫೌಂಡೇಶನ್ ಸಹಯೋಗದಲ್ಲಿ ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ʼಭಾರತೀಯತೆಯ ಗರಿಮೆʼ ಪ್ರಬಂಧದ ವಿಷಯವಾಗಿದ್ದು, ಅಭ್ಯರ್ಥಿಗಳು ಆಗಸ್ಟ್ 30ರೊಳಗೆ ಪ್ರಬಂಧವನ್ನು (Essay Competition) ತಲುಪಿಸಬೇಕು.
ಸೂಚನೆಗಳು:
- ಪ್ರಬಂಧವು ನಮ್ಮ ನಾಡು, ನಡೆ, ನುಡಿ, ಸಂಸ್ಕೃತಿ, ಕಾವ್ಯ ಸಾಹಿತ್ಯ, ಇತಿಹಾಸ ಆಚರಣೆ ಇತ್ಯಾದಿ ವಿಷಯಗಳನ್ನು ಒಳಗೊಂಡಿರಲಿ.
- ಪ್ರಬಂಧವು ಬಿಂದು (ಪಾಯಿಂಟ್ಸ್) ರೂಪವಾಗಿರಲಿ. ಒಂದು ಬಿಂದುವಿನ ವಿವರಣೆ ನಾಲೈದು ವಾಕ್ಯಗಳನ್ನು ಮೀರದಿರಲಿ. ಭಾರತೀಯತೆಯ ಎಲ್ಲಾ ಮಜಲುಗಳನ್ನು ಮುಟ್ಟುವ ಅನೇಕ ಬಿಂದುಗಳಿಂದ ಕೂಡಿದ ಸಂಕ್ಷೇಪ ಹಾಗೂ ಸಾರಭೂತ ಪ್ರಬಂಧವಾಗಿರಲಿ. ಪುಟಗಳ ನಿರ್ಬಂಧ ಇರುವುದಿಲ್ಲ ವಯೋಮಾನ ನಿರ್ಬಂಧ ಇರುವುದಿಲ್ಲ.
- ಆಗಸ್ಟ್ 30ರೊಳಗೆ ಪ್ರಬಂಧ ತಲುಪಬೇಕು.
- ಕೈ ಬರಹದಲ್ಲಿ ಅಥವಾ ಟೈಪ್ ಮಾಡಿದ ಪ್ರಬಂಧವನ್ನು ನೇರವಾಗಿ/ಅಂಚೆ /ಇ-ಮೇಲ್ /ವಾಟ್ಸ್ಆ್ಯಪ್ ಮೂಲಕ ತಲುಪಿಸಬಹುದು.
- ಬರಹವು ಕನ್ನಡ ಭಾಷೆಯಲ್ಲಿರಲಿ.
- ನಿರ್ಣಾಯಕರ ತೀರ್ಮಾನವೇ ಅಂತಿಮ.
- ಹೆಸರು, ವಿಳಾಸ, ವಯಸ್ಸು ದೂರವಾಣಿ ಸಂಖ್ಯೆ, ಇಮೇಲ್ ಸ್ಪಷ್ಟವಾಗಿ ನಮೂದಿಸಬೇಕು. ಆಯ್ಕೆಯಾದ ಮೊದಲ ಐದು ಪ್ರಬಂಧಗಳಿಗೆ ಬಹುಮಾನ ನೀಡಲಾಗುವುದು
ಪ್ರಬಂಧವನ್ನು ಆಗಸ್ಟ್ 30ರೊಳಗೆ ಮೊಬೈಲ್ ಸಂಖ್ಯೆ- 9481184788, ಇ-ಮೇಲ್ sumerujyotirvanam@gmail.com ಗೆ ಕಳುಹಿಸಬಹುದು ಅಥವಾ ನೇರವಾಗಿ ವಿಳಾಸ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಸುಮೇರು ಜ್ಯೋತಿರ್ವನಮ್‌ಗೆ (Sumeru Jyotirvanam) ತಲುಪಿಸಬಹುದು.
ಇದನ್ನೂ ಓದಿ | Education News : ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮೊತ್ತ 25 ಸಾವಿರ ರೂ.ಗೆ ಏರಿಕೆ
ವಿಜೇತರಿಗೆ ಬಹುಮಾನ
ಪ್ರಬಂಧ ಸ್ಪರ್ಧೆಯಲ್ಲಿ (Essay Competition) ವಿಜೇತರಾದವರಿಗೆ ಬಹುಮಾನ ನೀಡಲಾಗುತ್ತದೆ. ಪ್ರಥಮ ಬಹುಮಾನ-4000 ರೂ., ದ್ವಿತೀಯ ಬಹುಮಾನ-3000, ತೃತೀಯ ಬಹುಮಾನ-2000 ರೂ. ಹಾಗೂ ಇಬ್ಬರಿಗೆ ಪ್ರೋತ್ಸಾಹಕ ಬಹುಮಾನ- ತಲಾ 500 ರೂ. ನೀಡಲಾಗುತ್ತದೆ.