Site icon Vistara News

Uttara Kannada News: ಚಂಡಿಗಢದಲ್ಲಿ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಹಾಕಿ ಚಾಂಪಿಯನ್‌ಶಿಪ್‌: ಕರ್ನಾಟಕಕ್ಕೆ 1 ಬೆಳ್ಳಿ, 2 ಕಂಚು

National Roller Skate Hockey Championship in Chandigarh: One silver, two bronze for Karnataka

ಕಾರವಾರ: ಚಂಡಿಗಢದಲ್ಲಿ ನಡೆದ 61ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ (National Roller Skate Hockey Championship) ಕರ್ನಾಟಕ ತಂಡ ಗಮನಾರ್ಹ ಸಾಧನೆ ಮಾಡಿದ್ದು, ಪಂದ್ಯದಲ್ಲಿ 1 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಗಳಿಸುವ ಮೂಲಕ ಚಾಂಪಿಯನ್‌ಶಿಪ್‌ನಲ್ಲಿ ಹೆಮ್ಮೆಯ ತಂಡವಾಗಿ ಕರ್ನಾಟಕ (Karnataka Team) ಹೊರಹೊಮ್ಮಿದೆ.

ಕೆಡೆಟ್ ಬಾಲಕಿಯರ ವಿಭಾಗದಲ್ಲಿ (11ವರ್ಷದೊಳಗಿನವರು) ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಕರ್ನಾಟಕ ತಂಡದ ಆಟಗಾರರು ಸಂಭ್ರಮಿಸಿದ್ದಾರೆ. ಕಾರವಾರ ತಾಲೂಕಿನ ಕೈಗಾದ ಆದ್ಯಾ ನಾಯ್ಕ ನೇತೃತ್ವದ ತಂಡ ಹರ್ಯಾಣ ಎದುರು 6-0, ಆಂಧ್ರಪ್ರದೇಶ ಎದುರು 3-0 ಅಂಕದೊಂದಿಗೆ ವಿಜಯಿಯಾಗಿತ್ತು. ನಂತರ ಕೇರಳ ಜತೆಗೆ 2-0, ತಮಿಳುನಾಡು ಜತೆ 4-0 ಅಂತರದಿಂದ ಗೆಲುವು ಸಾಧಿಸಿತ್ತು. ಬಳಿಕ ಕೇರಳ ತಂಡದ ಜತೆ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ 3-1 ಅಂಕದೊಂದಿಗೆ ಕರ್ನಾಟಕ ಗೆಲುವಿನ ಕೇಕೆ ಹಾಕಿತು. ಬಳಿಕ ಪಂಜಾಬ್ ಜತೆ ನಡೆದ ಫೈನಲ್ ಪಂದ್ಯದಲ್ಲಿ 1-2 ಅಂತರಗಳಿಂದ ಪರಾಭವಗೊಂಡು ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದೆ.

ತಂಡದಲ್ಲಿದ್ದವರು: ಆದ್ಯಾ ನಾಯ್ಕ ಕೈಗಾ (ಕ್ಯಾಪ್ಟನ್), ಭವನೀತ ತುಮಕೂರು, ದೇದಿಪ್ಯ ತುಮಕೂರು, ಅಕ್ಷರಾ ಶಿರಸಿ, ಐಶ್ವರ್ಯ ತುಮಕೂರು, ಕವನ ತುಮಕೂರು, ಸನ್ನಿಧಿ ತುಮಕೂರು, ಅಹನಾ ನಾಯ್ಕ ಕಾರವಾರ, ಕುಶಾಲ ಬೆಂಗಳೂರು, ಅನಯಾ ಕಾರವಾರ‌ ಅವರು ತಂಡವನ್ನು ಪ್ರತಿನಿಧಿಸಿದ್ದರು.

ಇದನ್ನೂ ಓದಿ: Raichur News: ಲಿಂಗಸುಗೂರಿನಲ್ಲಿ ಡಿ.29, 30ರಂದು ರಾಜ್ಯಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನ: ಹುಲಿಕಲ್ ನಟರಾಜ್

ಕೆಡೆಟ್ ಮಿಕ್ಸಡ್ ವಿಭಾಗದಲ್ಲಿ ಕರ್ನಾಟಕ ತಂಡವು ಆರಂಭದ ಪಂದ್ಯ ತಮಿಳುನಾಡು ಜತೆ ಡ್ರಾ ಆಗಿತ್ತು, ಬಳಿಕ ಆಂಧ್ರಪ್ರದೇಶ, ಕೇರಳ ಎದುರು ಗೆದ್ದು ಸೆಮಿಫೈನಲ್‌ ತಲುಪಿತ್ತು. ಬಳಿಕ ಮತ್ತೆ ಎದುರಾದ ಕೇರಳ ಜತೆಗಿನ ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡವು ಪರಾಭವಗೊಂಡಿತು. ನಂತರ ಅಂಕಗಳ ಆಧಾರದ ಮೇಲೆ ಮೂರನೇ ಸ್ಥಾನಕ್ಕಾಗಿ ಆಂಧ್ರಪ್ರದೇಶ ತಂಡದೊಂದಿಗೆ ನಡೆದ ಪಂದ್ಯದಲ್ಲಿ 1-3 ಅಂಕಗಳಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು.

ತಂಡದಲ್ಲಿದ್ದವರು: ಆದ್ಯಾ ನಾಯ್ಕ ಕೈಗಾ (ಕ್ಯಾಪ್ಟನ್), ಭವನೀತ ತುಮಕೂರು, ದೇದಿಪ್ಯ ತುಮಕೂರು, ಅಕ್ಷರಾ ಶಿರಸಿ, ರಾಜಗುರು ಶಿರಸಿ, ಸಾಕಿಬ್ ಕೈಗಾ, ಅಯ್ಯನ್ ಕೈಗಾ, ಶ್ರೀಶ ಮೊಗೇರ ಕಾರವಾರ, ಐಶ್ವರ್ಯ ತುಮಕೂರು, ದಕ್ಷತ್ ತುಮಕೂರು ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.

ಸಬ್ ಜ್ಯೂನಿಯರ್ ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡವು ತಮಿಳುನಾಡು, ತೆಲಂಗಾಣ, ಜಮ್ಮು ಕಾಶ್ಮೀರ, ಆಂಧ್ರಪ್ರದೇಶ ತಂಡವನ್ನು ಮಣಿಸಿತ್ತು. ನಂತರ ಚಂಡಿಗಢ ಜತೆಗೆ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಸೋಲನ್ನಪ್ಪಿತು. ಬಳಿಕ ಮೂರನೇ ಸ್ಥಾನಕ್ಕಾಗಿ ಕೇರಳ ತಂಡದ ಜತೆಗೆ ನಡೆದ ಹಣಾಹಣಿಯಲ್ಲಿ 1-3 ಪಾಯಿಂಟ್‌ಗಳಿಂದ ಪರಾಭವಗೊಂಡಿದೆ.

ಇದನ್ನೂ ಓದಿ: Uttara Kannada News: ಯಲ್ಲಾಪುರದಲ್ಲಿ ಡಿ.16ರಂದು ʼವಿಶ್ವದರ್ಶನ ಸಂಭ್ರಮʼ ಕಾರ್ಯಕ್ರಮ

ತಂಡದಲ್ಲಿದ್ದವರು: ಮಾನ್ಯತಾ ಶಿರಸಿ (ಕ್ಯಾಪ್ಟನ್), ಮಾನ್ಯ ಬಿ.ಎಸ್. ಶಿರಸಿ, ಅಪೂರ್ವ ಕಾರವಾರ, ಕೀರ್ತಿ ಮುಂಡಗೋಡು, ಮಾನಸಿ ಬೆಳಗಾವಿ, ಆರಾಧ್ಯ ಮೆನನ್ ಕಾರವಾರ, ಯಶಸ್ವಿನಿ ಬೆಂಗಳೂರು, ಚಿನ್ಮಯಿ ಬೆಂಗಳೂರು, ಆರ್ಯ ಮಂಜುನಾಥ ಬೆಂಗಳೂರು.

ಟೂರ್ನಿಯಲ್ಲಿ ಕೈಗಾದ ಆದ್ಯಾ ನಾಯ್ಕ, ರಾಜಗುರು, ಭುವನೀತ, ಮಾನ್ಯತಾ, ಅಪೂರ್ವ ಕರ್ನಾಟಕ ತಂಡದ ಪರವಾಗಿ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಕರ್ನಾಟಕ ತಂಡದ ಆಟಗಾರರಿಗೆ ಕೈಗಾ ರೋಲರ್ ಸ್ಕೇಟರ್ಸ್ ಕ್ಲಬ್‌ನ ದಿಲೀಪ ಹಣಬರ ತರಬೇತಿ ನೀಡಿದ್ದರು. ಮಕ್ಕಳ ಸಾಧನೆಗೆ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಅಭಿನಂದನೆ ಸಲ್ಲಿಸಿದೆ.

Exit mobile version