ಯಾದಗಿರಿ: ನಗರದ ಹೊರವಲಯದಲ್ಲಿರುವ ನವನಂದಿ ಖಾಸಗಿ ಶಾಲೆಯು (School) ವಿನೂತನ ಪ್ರಯತ್ನ ಕೈಗೊಂಡಿದ್ದು, ಶಾಲಾ ಮಕ್ಕಳಿಗೆ ಕಲಿಕೆ (Learning) ಜತೆಗೆ ಕೃಷಿ (Agriculture) ಚಟುವಟಿಕೆ ಬಗ್ಗೆಯೂ ಅರಿವು ಮೂಡಿಸಲು ಶಾಲೆಯು ಮುಂದಾಗಿದೆ.
ತಾಲೂಕಿನ ಹೊಸಳ್ಳಿ ತಾಂಡಾದ ಜಮೀನಿನಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಕೃಷಿ ಮಹತ್ವ ಸಾರುವ ಬಗ್ಗೆ ಅರಿವು ಮೂಡಿಸಲಾಯಿತು.
ಶಾಲೆಯಲ್ಲಿ ಈ ಮೊದಲು ಕುಂಟೆ, ನೇಗಿಲು, ಚಕ್ಕಡಿ ಸೇರಿ ಇತರೆ ರೈತರಿಗೆ ಉಪಯುಕ್ತ ಆಗುವಂತಹ ಸಲಕರಣೆಗಳನ್ನು ತರಿಸಿ ಮಕ್ಕಳಿಗೆ ಶಿಕ್ಷಕರು ಪರಿಚಯಿಸಿದ್ದರು, ಇದರಿಂದ ಮಕ್ಕಳಿಗೆ ಒಂದು ರೀತಿ ಕೃಷಿಯ ಬಗ್ಗೆ ಅರಿವು, ಹಾಗೂ ಜ್ಞಾನ ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ. ಇಷ್ಟೇ ಅಲ್ಲದೇ ಎತ್ತುಗಳ ಮೂಲಕ ರೈತರು ವಿದ್ಯಾರ್ಥಿಗಳಿಂದ ಬಿತ್ತನೆ ಮಾಡಿಸಿ ಬಿತ್ತನೆ ಹೇಗೆ ಮಾಡಬೇಕೆಂದು ಪ್ರಾಯೋಗಿಕವಾಗಿ ತಿಳಿಸಿದರು.
ಇದನ್ನೂ ಓದಿ: Weather Report : ಬೆಂಗಳೂರಲ್ಲಿ ತುಂತುರು, ಕರಾವಳಿಯಲ್ಲಿ ವ್ಯಾಪಕ ಮಳೆ
ನವನಂದಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸುಮಾರು 650 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಎಲ್ಲ ವಿದ್ಯಾರ್ಥಿಗಳು ಆಟ, ಪಾಠದ ಜತೆಗೆ ಇದೀಗ ಕೃಷಿ ಚಟುವಟಿಕೆಗಳತ್ತ ಸಹ ಮಕ್ಕಳು ಚಿತ್ತ ಹರಿಸುತ್ತಿದ್ದಾರೆ. ಜಮೀನಿನಲ್ಲಿ ವಿದ್ಯಾರ್ಥಿಗಳು ನಾ ಮುಂದು ತಾ ಮುಂದು ಎಂದು ಭತ್ತ ನಾಟಿ ಮಾಡಿದರು.
ಭತ್ತ ನಾಟಿ ಜೊತೆ ವಿದ್ಯಾರ್ಥಿಗಳು ನೇಗಿಲು ಹಿಡಿದು ಅತ್ಯಂತ ಸಂತಸದಿಂದ ಕೃಷಿ ಚಟುವಟಿಕೆಯಲ್ಲಿ ಭಾಗಿಯಾದರು. ಎರೆಹುಳು ತಯಾರು ಮಾಡುವ ವಿಧಾನ ಅದರ ಮಹತ್ವವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಲು ಸಾಧ್ಯವಾಯಿತು.
ಈ ಕುರಿತು ಶಾಲೆಯ ಶಿಕ್ಷಕಿ ಜ್ಯೋತಿ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಿಗೆ ಜಮೀನಿಗೆ ಕರೆದುಕೊಂಡು ಬಂದು ರೈತರ ಕಷ್ಟವೇನು? ಹೇಗೆ ಕೃಷಿ ಚಟುವಟಿಕೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Kannada compulsary : CBSE, CISCE ಶಾಲೆಗಳಲ್ಲಿ ಕನ್ನಡ ಕಡ್ಡಾಯ; ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಶಾಲಾ ವಿದ್ಯಾರ್ಥಿನಿ ಸುಶ್ಮಿತಾ ಮಾತನಾಡಿ, ಯಾವ ಕಂಪನಿಯಿಂದ ಊಟ ಸಿಗುವುದಿಲ್ಲ ರೈತ ಬೆಳೆದರೆ ಮಾತ್ರ ಊಟ ಸಿಗುತ್ತದೆ, ನಾವು ಜಮೀನಿಗೆ ಬಂದು ಭತ್ತ ನಾಟಿ ಮಾಡಿ, ರೈತರ ಕಷ್ಟ ನಷ್ಟ ತಿಳಿದುಕೊಂಡಿದ್ದು ಖುಷಿ ತಂದಿದೆ ಎಂದರು.