ಬೆಂಗಳೂರು: ಬಾಗಲೂರಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ (Navodaya Vidyalaya) ಹೈದರಾಬಾದ್ ವಲಯದ ನವೋದಯ ವಿದ್ಯಾಲಯ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ʼಪ್ರಾದೇಶಿಕ ಹಳೆಯ ವಿದ್ಯಾರ್ಥಿಗಳ ಸಭೆ-2023ʼ (Regional Alumni Meet-2023) ಅದ್ಧೂರಿಯಾಗಿ ನೆರವೇರಿತು. 5000 ಹೆಚ್ಚು ಜನರು ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು.
ಮುಖ್ಯ ಅತಿಥಿ ನವೋದಯ ಸಮಿತಿ ಆಯುಕ್ತ ವಿನಾಯಕ ಗರ್ಗ್ ಅವರು ಮಾತನಾಡಿ, ಇಷ್ಟು ದೊಡ್ಡಮಟ್ಟದ ಸಮಾರಂಭ ನೋಡಿ ಖುಷಿಯಾಯಿತು. ಯಾವ ರಾಜ್ಯದಲ್ಲೂ ಇಂತಹ ಅದ್ಧೂರಿ ಸಮಾರಂಭ ಮಾಡಿರಲಿಲ್ಲ. ನವೋದಯ ಕುಟುಂಬಕ್ಕೆ ಸೇರಿದ್ದು ನನ್ನ ಭಾಗ್ಯ. ಮುಂದೆ ಇಂತಹ ಸಮಾರಂಭಗಳು ಹೆಚ್ಚು ಹೆಚ್ಚು ನಡೆಯಲಿ ಎಂದು ಆಶಿಸಿದರು.
ಹೈದರಾಬಾದ್ ವಲಯ ಉಪ ಆಯುಕ್ತ ಗೋಪಾಲಕೃಷ್ಣ ಅವರು ಮಾತನಾಡಿ, ಭಾರತದ ನವೋದಯ ವಿದ್ಯಾಲಯಗಳಲ್ಲಿ ಹೈದರಾಬಾದ್ ವಲಯ ವಿದ್ಯಾಲಯಗಳು ಅತ್ಯುತ್ತಮ ಸಾಧನೆ ಮಾಡಿವೆ. ಕರ್ನಾಟಕದಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಹೆಚ್ಚು ಸಾಮಾಜಿಕ ಕಾರ್ಯ ಮಾಡುತ್ತಿದೆ ಎಂದರು.
ಇದನ್ನೂ ಓದಿ | Concentration tips for students : ವಿದ್ಯಾರ್ಥಿಗಳು ಸ್ಥಿತಪ್ರಜ್ಞತೆ ಬೆಳೆಸಿಕೊಳ್ಳುವುದು ಹೇಗೆ?
ವಿಜಯಪುರ ನವೋದಯ ಹಳೇ ವಿದ್ಯಾರ್ಥಿ ಹಾಗೂ ಬೆಂಗಳೂರು ಪೂರ್ವ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಮಾತನಾಡಿ, ನವೋದಯ ವಿದ್ಯಾರ್ಥಿಗಳು ಎಲ್ಲ ವಿಭಾಗದಲ್ಲಿ ಗುರುತಿಸಿಕೊಂಡಿದ್ದಾರೆ. ನವೋದಯ ವಿದ್ಯಾರ್ಥಿಯಾಗಿದ್ದು ನನ್ನ ಪುಣ್ಯ ಎಂದರು.
ಹಳೇ ವಿದ್ಯಾರ್ಥಿಗಳಾದ ಆದಾಯ ತೆರಿಗೆ ಅಧಿಕಾರಿ ಕಿರಣ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಶರಣಪ್ಪ, ರಾಜಶೇಖರ್ ಜಾಕ, ಕೇಶವ್ ವಿನಯ್, ಸುಪ್ರೀತ್, ಹರೀಶ್, ಮಂಜುನಾಥ್, ನವೀನ್, ಸೋಮೇಶ್ ನವೋದಯ, ತಾರಾನಾಥ್, ಶ್ರೀನಿವಾಸ್, ಸಮಿತಿ ಅಧಿಕಾರಿಗಳು ಹಾಗೂ ಸಾವಿರಾರು ಹಳೇ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.
ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಕ್ಷಮಿಸಿ, ನಾನೀಗ ದುಡ್ಡಿನಿಂದ ಎಲ್ಲವನ್ನೂ ಖರೀದಿಸಲಾಗದು ಎಂದು ವಾದ ಮಾಡುವುದಿಲ್ಲ!
ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಅಂಡಮಾನ್ ಮತ್ತು ನಿಕೋಬಾರ್, ಪುದುಚೇರಿಯ ಹಳೇ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಇಂಗ್ಲಿಷ್ ಶಿಕ್ಷಕರಾದ ಪ್ರಹ್ಲಾದ್ ಹಾಗೂ ಆರ್.ಜೆ. ರಶೀದ್ ನಿರೂಪಿಸಿದರು. ರಕ್ತದಾನ ಶಿಬಿರ, ಉದ್ಯೋಗ ಮೇಳ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಇದನ್ನೂ ಓದಿ | Pranayama for Students : ವಿದ್ಯಾರ್ಥಿಗಳಿಗೆ ವರದಾನ ಈ ಪ್ರಾಣಾಯಾಮ