Site icon Vistara News

NEET Exam 2023: ‌ಯಶಸ್ವಿಯಾಗಿ ಮುಗಿದ ನೀಟ್‌ ಪರೀಕ್ಷೆ; ಕೆಲವು ಪ್ರಶ್ನೆಗಳು ಸ್ವಲ್ಪ ಟಫ್‌ ಇತ್ತೆಂದ ವಿದ್ಯಾರ್ಥಿಗಳು

NEET Exam

#image_title

ಬೆಂಗಳೂರು: ದೇಶಾದ್ಯಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ನೀಟ್ ಯುಜಿ 2023 ಪರೀಕ್ಷೆ (NEET Exam) ಯಶಸ್ವಿಯಾಗಿ ಮುಗಿದಿದೆ. ಭಾನುವಾರ ಮಧ್ಯಾಹ್ನ 2 ಗಂಟೆಗೆ ಶುರುವಾದ ಪರೀಕ್ಷೆಯು 5.20ಕ್ಕೆ ಮುಗಿದಿದೆ. ರಾಜ್ಯದಲ್ಲಿ ಒಟ್ಟು 1,34,379 ವಿದ್ಯಾರ್ಥಿಗಳು ನೀಟ್‌ ಪರೀಕ್ಷೆಯನ್ನು ಎದುರಿಸಿದ್ದಾರೆ. ಇನ್ನು ಪರೀಕ್ಷೆ ಬರೆದು ಹೊರಬಂದ ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದ್ದು, ಪ್ರಶ್ನೆಪತ್ರಿಕೆಯು ಅಷ್ಟೇನು ಕಠಿಣವಾಗಿ ಇರಲಿಲ್ಲ. ಆದರೆ ಒಂದಷ್ಟು ಪ್ರಶ್ನೆಗಳು ಕಷ್ಟವಿತ್ತು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಮಣಿಪುರ ಹೊರತುಪಡಿಸಿ ದೇಶಾದ್ಯಂತ ಮೇ 7ರಂದು ನೀಟ್‌ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಈ ಬಾರಿ ದೇಶಾದ್ಯಂತ 499 ನಗರಗಳಲ್ಲಿರುವ ವಿವಿಧ ಕೇಂದ್ರಗಳು ಸೇರಿದಂತೆ ಭಾರತದ ಹೊರಗಿನ 14 ನಗರಗಳಲ್ಲೂ ನೀಟ್‌ ಪರೀಕ್ಷೆಯನ್ನು (NEET Exam 2023) ನಡೆಸಲಾಗಿದೆ.

ಈ ಬಾರಿ ಒಟ್ಟು 18,72,341 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ನೀಟ್‌ (NEET UG) ಅನ್ನು ಕನ್ನಡ, ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮಲಯಾಳಂ, ಸೇರಿದಂತೆ 11 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಯಿತು. ಎಂಬಿಬಿಎಸ್‌ ಸೇರಿದಂತೆ 10 ಕೋರ್ಸ್‌ಗಳಿಗೆ ಪ್ರವೇಶವನ್ನು ನೀಡಲಾಗಿದೆ. ಇನ್ನು ದೇಶದಲ್ಲೇ ತಮಿಳುನಾಡಿನಲ್ಲಿ ಹೆಚ್ಚು ವಿದ್ಯಾರ್ಥಿಗಳು ನೀಟ್‌ಗೆ ನೋಂದಣಿಯಾಗಿದ್ದರು.

ಪರೀಕ್ಷೆ ಹಿನ್ನೆಲೆಯಲ್ಲಿ ಈ ಮೇಲಿನ ಎಲ್ಲ ವಸ್ತುಗಳನ್ನು ಬ್ಯಾನ್‌ ಮಾಡಲಾಗಿತ್ತು

ಇನ್ನು ಕಳೆದ ಬಾರಿ ಕೇರಳದಲ್ಲಿ ನೀಟ್​ ಪರೀಕ್ಷೆ ವೇಳೆ ಉಂಟಾಗಿದ್ದ ಕೆಲ ಅಚಾತುರ್ಯಗಳಿಂದ ಎಚ್ಚೆತ್ತ ಪರೀಕ್ಷಾ ಮಂಡಳಿ, ಈ ಬಾರಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿತ್ತು. ಪರೀಕ್ಷೆಗೆ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್, ಬ್ಲೂಟೂತ್, ವಾಚ್‌ಗಳು, ಆಭರಣಗಳನ್ನು ತೆಗೆದುಕೊಂಡು ಹೋಗದಂತೆ ಸೂಚನೆ ನೀಡಲಾಗಿತ್ತು. ಜತೆಗೆ ಕೇಂದ್ರದೊಳಗೆ ಪ್ರವೇಶಿಸುವ ವಿದ್ಯಾರ್ಥಿಗಳ ತಪಾಸಣೆ ನಡೆಸಲಾಗಿತ್ತು. ಅಲ್ಲದೆ, ವಿದ್ಯಾರ್ಥಿಗಳಿಗೆ ಶೂ ಧರಿಸಲು ಅವಕಾಶ ನೀಡದೇ ಚಪ್ಪಲಿ ಧರಿಸಿ, ಅರ್ಧ ತೋಳಿರುವ ಬಟ್ಟೆ ಧರಿಸಿ ಮಾತ್ರ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಗಿತ್ತು.

ಇದನ್ನೂ ಓದಿ: Modi in Karnataka : ಸುಡಾನ್‌ನಿಂದ ರಕ್ಷಿಸಲ್ಪಟ್ಟ ಹಕ್ಕಿಪಿಕ್ಕಿ ಸಮುದಾಯದ ಜನರಿಂದ ಮೋದಿಗೆ THANKS

ಸಿಲಿಕಾನ್​ ಸಿಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ದಿನದ ರೋಡ್​ ಶೋ ಇದ್ದಿದ್ದರಿಂದ ನೀಟ್​ ಪರೀಕ್ಷೆಗೆ ಸಮಸ್ಯೆಯಾಗುತ್ತದೆ ಎಂಬ ವಿರೋಧಗಳು ಕೇಳಿ ಬಂದಿದ್ದವು. ಆದರೆ, ಪರೀಕ್ಷೆ ಶುರುವಾಗುವ 2 ಗಂಟೆ ಮೊದಲೇ ರೋಡ್​ ಶೋ ಮುಗಿದಿದ್ದರಿಂದ, ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಆಗಲಿಲ್ಲ.

Exit mobile version