Site icon Vistara News

Toll Hike: ನೆಲಮಂಗಲ ದೇವಿಹಳ್ಳಿ ಎಕ್ಸ್‌ಪ್ರೆಸ್ ಹೈವೇ ಟೋಲ್ ದರ ಹೆಚ್ಚಳ; ಇಂದು ಮಧ್ಯರಾತ್ರಿಯಿಂದಲೇ ಜಾರಿ

Nelamangala Devihalli Expressway Private Limited

ಬೆಂಗಳೂರು: ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿ-75ರ ನೆಲಮಂಗಲ ದೇವಿಹಳ್ಳಿ ಎಕ್ಸ್‌ಪ್ರೆಸ್‌ವೇ ಪ್ರೈವೇಟ್‌ ಲಿಮಿಟೆಡ್‌ ಕೇಂದ್ರದಲ್ಲಿ ಟೋಲ್‌ ದರ ಹೆಚ್ಚಳ ಮಾಡಲಾಗಿದ್ದು, ಪರಿಷ್ಕೃತ ದರ ಸೆಪ್ಟೆಂಬರ್‌ 1ರಿಂದಲೇ ಜಾರಿಗೆ ಬರಲಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಟೋಲ್‌ ದರದ ಹೆಚ್ಚಳದ ಬೆನ್ನಲ್ಲೇ ಎನ್‌ಎಚ್‌-75ರಲ್ಲೂ ಟೋಲ್ ದರ (Toll Hike) ಹೆಚ್ಚಿಸುವ ಮೂಲಕ ವಾಹನ ಸವಾರರಿಗೆ ಬರೆ ಎಳೆಯಲಾಗಿದೆ.

ಸೆಪ್ಟೆಂಬರ್ 1 ರಿಂದ ಜಾರಿಗೆ ಬರುವಂತೆ ಶುಲ್ಕ ಹೆಚ್ಚಳ ಮಾಡಲಾಗಿದೆ. ಕಾರು ಶುಲ್ಕ 50 ರಿಂದ 55, ಎಲ್‌ಸಿವಿ 90 ರಿಂದ 100, ಬಸ್, ಟ್ರಕ್ 185 ರಿಂದ 200,ಮಲ್ಟಿ ಆಕ್ಸೆಲ್ ವಾಹನ 295 ರಿಂದ 320 ರೂ.ಗಳಿಗೆ ಏರಿಸಲಾಗಿದೆ. ಬೆಂಗಳೂರು- ಹಾಸನ ಹೆದ್ದಾರಿಯಲ್ಲಿನ ದೊಡ್ಡಕರೇನಹಳ್ಳಿ ಹಾಗೂ ಕಾರಬೈಲು ಟೋಲ್‌ ಪ್ಲಾಜಾಗಳಲ್ಲಿ ಟೋಲ್‌ ದರ ಹೆಚ್ಚಳ ಮಾಡಲಾಗಿದೆ.

ಪರಿಷ್ಕೃತ ಟೋಲ್‌ ದರ

ಲಘು ಮೋಟಾರ್‌ ವಾಹನ (ಎಲ್‌ಎಂವಿ): ಸಿಂಗಲ್ ಸೈಡ್- 55 ರೂ. , ಮಲ್ಪಿಪಲ್‌-85 ರೂ.
ಲಘು ವಾಣಿಜ್ಯ ವಾಹನ(ಎಲ್‌ಸಿವಿ): 100-200
ಬಸ್, ಟ್ರಕ್: 200-300
ಭಾರಿ ಗಾತ್ರದ ಸರಕು ವಾಹನ: 320-485

ಇದನ್ನೂ ಓದಿ | Cauvery Dispute : ತ.ನಾಡಿಗೆ 5000 ಕ್ಯೂಸೆಕ್‌ ನೀರು ಬಿಡುಗಡೆ; 100 ಅಡಿಗೆ ಕುಸಿದ KRS ಮಟ್ಟ; ಹೀಗೇ ಆದ್ರೆ ಡ್ಯಾಂ ಫುಲ್‌ ಖಾಲಿ

ನೆಲಮಂಗಲ ಬಳಿ ಇರುವ ದೇವಿಹಳ್ಳಿ ಎಕ್ಸ್‌‌ಪ್ರೆಸ್‌ ಹೈವೇ | Toll shock for expressway passengers | Vistara News

Exit mobile version