ಶಿವಮೊಗ್ಗ: ಹೃದಯ ಸಮಸ್ಯೆಯಿಂದ (Heart Problem) ಬಳಲುತ್ತಿದ್ದ ಮೂರು ದಿನದ ಹಸುಗೂಸನ್ನು ಆಂಬ್ಯುಲೆನ್ಸ್ ಮೂಲಕ ಶಿವಮೊಗ್ಗದಿಂದ ಬೆಂಗಳೂರಿನ ನಾರಾಯಣ ಹೃದಯಾಲಯ (Narayana Hrudayalaya)ಕ್ಕೆ ಕರೆದುಕೊಂಡು ಬರಲಾಗಿದೆ. ಭಾನುವಾರ ರಾತ್ರಿ 10.10ಕ್ಕೆ ಶಿವಮೊಗ್ಗದಿಂದ ಹೊರಟ ಆಂಬ್ಯುಲೆನ್ಸ್ ರಾತ್ರಿ 1.30ರ ಹೊತ್ತಿಗೆ ಇಲ್ಲಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ನಾರಾಯಣ ಹೃದಯಾಲಯಕ್ಕೆ ತಲುಪಿದೆ. ಮಗು ಸುರಕ್ಷಿತವಾಗಿ ಬಂದಿದೆ. ಈ ಮಗುವಿಗೆ ವೈದ್ಯರು ತುರ್ತಾಗಿ ಓಪನ್ ಹಾರ್ಟ್ ಸರ್ಜರಿ (ತೆರೆದ ಹೃದಯ ಶಸ್ತ್ರಚಿಕಿತ್ಸೆ) ನಡೆಸಲಿದ್ದಾರೆ (open heart surgery newborn).
ಮಗು ಹುಟ್ಟಿ ಮೂರುದಿನಗಳಷ್ಟೇ ಆಗಿದೆ. ಆದರೆ ಅದಕ್ಕೆ ಹೃದಯ ಸಮಸ್ಯೆ ಇರುವುದು ಗೊತ್ತಾಗಿದೆ. ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಂದ ನಾರಾಯಣ ಹೃದಯಾಲಯಕ್ಕೆ ಕರೆತರಲಾಗಿದೆ. ಆಂಬ್ಯುಲೆನ್ಸ್ ಚಾಲಕ ಜಗದೀಶ್ ಮೂರೂವರೆ ತಾಸಿಗೆ ಮಗುವನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದು, ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಇನ್ನು ಆಂಬ್ಯುಲೆನ್ಸ್ನಲ್ಲಿ ಮಗುವಿನೊಂದಿಗೆ ಸ್ಟಾಫ್ ನರ್ಸ್ಗಳಾದ ವಿನಯ್ ಮತ್ತು ಹನುಮಂತ ಎಂಬುವರು ಇದ್ದರು. ಇದರಲ್ಲಿ ಹನುಮಂತ ಮಗುವನ್ನು ಶಿವಮೊಗ್ಗದಿಂದ ಇಲ್ಲಿಯವರೆಗೂ ಮಡಿಲಲ್ಲಿ ಎತ್ತಿಕೊಂಡೇ ಕುಳಿತಿದ್ದರು.
ಇದನ್ನೂ ಓದಿ: Corruption Case: ಸರ್ಕಾರಿ ಆಂಬ್ಯುಲೆನ್ಸ್ ಕಳುಹಿಸಲು ಲಂಚಕ್ಕೆ ಬೇಡಿಕೆ ಇಟ್ಟ ವೈದ್ಯ!