ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ನೂತನ ವೆಬ್‌ಸೈಟ್ ಆರಂಭಿಸಲಾಗಿದೆ. ಶಾಂತಿನಗರದ ಇ-ಆಡಳಿತ ಕೇಂದ್ರದ ವೆಬ್ ಪೋರ್ಟಲ್ ವಿಭಾಗದ ಯೋಜನಾ ನಿರ್ದೇಶಕರ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ನೂತನ ವೆಬ್‌ಸೈಟ್, ಅ.11ರಿಂದ ಅಧಿಕೃತವಾಗಿ ಸಾರ್ವಜನಿಕರು ಹಾಗೂ ಶಿಕ್ಷಣ ಇಲಾಖೆಯ ಅಧೀನ ಕಚೇರಿಗಳ ಬಳಕೆಗೆ ಮುಕ್ತವಾಗಿದೆ.
ಶಿಕ್ಷಣ ಆಯುಕ್ತರ ಕಚೇರಿಯ ಹಳೆಯ ವೆಬ್‌ಸೈಟ್ URL https://www.schooleducation.kar.nic.in/ ನಿಂದ ಹೊಸ ವೆಬ್‌ಸೈಟ್ URL-https://schooleducation.karnataka.gov.inಗೆ 2005ರಿಂದ ಈವರೆಗಿನ ದತ್ತಾಂಶವನ್ನು ಈಗಾಗಲೇ ಮೈಗ್ರೇಟ್ ಮಾಡಲಾಗಿದೆ. ಆದ್ದರಿಂದ ಇನ್ನು ಮುಂದೆ ನೂತನ ವೆಬ್‌ಸೈಟ್ Domain Name: https://schooleducation.karnataka.gov.in ಮೂಲಕವೇ ಮಾಹಿತಿ, ಆದೇಶ, ಸುತ್ತೋಲೆಗಳನ್ನು ಪ್ರಕಟಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳಿಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆ ಬಿ.ಬಿ.ಕಾವೇರಿ ತಿಳಿಸಿದ್ದಾರೆ.
ಇದನ್ನೂ ಓದಿ | Govt. Schools : ಉಚಿತ ಬಸ್‌ಗಿಂತಲೂ ಶಿಕ್ಷಣ ಮುಖ್ಯ; ಸರಕಾರಕ್ಕೆ ಹೈಕೋರ್ಟ್ ಚಾಟಿ
ರಾಜ್ಯ ಶಿಕ್ಷಣ ನೀತಿಯ ಕರಡು ಸಿದ್ಧಪಡಿಸಲು ಸಮಿತಿ ರಚನೆ
ಬೆಂಗಳೂರು: ಕರ್ನಾಟಕ ರಾಜ್ಯ ಶಿಕ್ಷಣ ನೀತಿಯ ಕರಡು ಸಿದ್ಧಪಡಿಸಲು ಪ್ರೊ. ಸುಖ್‌ದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಶಿಕ್ಷಣ ನೀತಿ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಸಮಿತಿಯು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕತೆ, ವೈಚಾರಿಕತೆ ಬೆಳೆಸುವ ಮತ್ತು ಅವರ ಮನೋವಿಕಾಸಕ್ಕೆ ಅಗತ್ಯವಾದ ಶಿಕ್ಷಣ ನೀಡಲು ಸೂಕ್ತ ಶಿಫಾರಸುಗಳನ್ನು ನೀಡಲಿದೆ ಎಂಬ ಭರವಸೆಯಿದೆ. ಕರ್ನಾಟಕ ರಾಜ್ಯ ಶಿಕ್ಷಣ ನೀತಿಯು ದೇಶಕ್ಕೆ ಮಾದರಿ ಶಿಕ್ಷಣ ನೀತಿಯಾಗಿ ಹೊರಹೊಮ್ಮಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.