Site icon Vistara News

New Year 2023 | ಹೊಸ ವರ್ಷದಂದು ಪೋಷಕರಿಗೆ ಮಕ್ಕಳಿಂದ ಪಾದಪೂಜೆ; ದೇಶೀ ಸಂಸ್ಕೃತಿ ತೋರಿಸಿಕೊಟ್ಟ ಮಾದರಿ ಶಾಲೆ

New Year celebration padapooja to parents Ramakrishna Vidyaniketan

ಶಿವಮೊಗ್ಗ: ನಾಡಿನ ಜನತೆ ಹೊಸ ವರ್ಷವನ್ನು (New Year 2023 ) ನಾನಾ ರೀತಿಯಲ್ಲಿ ಆಚರಿಸಿಕೊಂಡರು. ಆದರೆ, ಶಿವಮೊಗ್ಗ ನಗರದ ರಾಮಕೃಷ್ಣ ವಿದ್ಯಾನಿಕೇತನದ ವಿದ್ಯಾರ್ಥಿಗಳು ಮಾತ್ರ ವಿಭಿನ್ನ ಮತ್ತು ವಿಶಿಷ್ಟವಾಗಿ ಹೊಸ ವರ್ಷವನ್ನು ಬರ ಮಾಡಿಕೊಂಡರು.

ರಾಮಕೃಷ್ಣ ವಿದ್ಯಾನೀಕೇತನ ಶಾಲೆಯ ವಿದ್ಯಾರ್ಥಿಗಳು ಕಳೆದ ಹಲವಾರು ವರ್ಷಗಳಿಂದ ಹೊಸ ವರ್ಷವನ್ನು ಆಚರಣೆ ಮಾಡುತ್ತಾರೆ. ಆದರೆ, ಇವರು ಹೊಸ ವರ್ಷವನ್ನು ಬರಮಾಡಿಕೊಳ್ಳುವುದು ಮಾತ್ರ ಸ್ವಲ್ಪ ವಿಭಿನ್ನ. ಕಳೆದ ೧೭ ವರ್ಷಗಳಿಂದ ಇಲ್ಲಿನ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ, ತಮ್ಮ ತಂದೆ, ತಾಯಿಗಳಿಗೆ ಪಾದ ಪೂಜೆ ನೆರವೇರಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಇದಕ್ಕೆ ಶಾಲೆಯ ಸಂಸ್ಥೆಯವರು ಸಹ ಸಾಥ್ ನೀಡುತ್ತಿದ್ದಾರೆ. 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ-ತಮ್ಮ ಪೋಷಕರಿಗೆ ಪಾದ ಪೂಜೆ ನೆರವೇರಿಸಿ ಗುರು-ಹಿರಿಯರ ಆಶೀರ್ವಾದ ಪಡೆದರು. ಕೇಕ್ ಕತ್ತರಿಸಿ, ಕುಣಿದು ಕುಪ್ಪಳಿಸುವ ಜನರಿಗೆ ಅದು ನಮ್ಮ ಸಂಸ್ಕೃತಿಯಲ್ಲ ಎಂದು ತೋರಿಸಿಕೊಟ್ಟರು.

ಇದನ್ನೂ ಓದಿ | David Warner | ಮಗಳ ಜತೆಗೆ ಸೂಪರ್​ ಸ್ಟೆಪ್ಸ್​ ಹಾಕಿದ ಡೇವಿಡ್​ ವಾರ್ನರ್​; ವಿಡಿಯೊ ವೈರಲ್​

ಇಲ್ಲಿ ಹೊಸ ವರ್ಷ ಆಚರಣೆ ಕೇವಲ ಪಾದ ಪೂಜೆಗೆ ಮಾತ್ರ ಸೀಮಿತವಾಗಿರಲಿಲ್ಲ. ಜತೆಗೆ ಶ್ರೀ ಶಾರದಾ ಮಾತೆಯ ಜಯಂತಿ ಮತ್ತು ಸತ್ಯನಾರಾಯಣ ಪೂಜೆ ಸಹ ನೆರವೇರಿಸಲಾಗಿತ್ತು. ಇಲ್ಲಿನ ವಿದ್ಯಾರ್ಥಿಗಳಿಗೆ ತಾವು ಹೇಗೆ ಆಚಾರ ವಿಚಾರ ಮತ್ತು ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕೆನ್ನುವುದರ ಬಗ್ಗೆ ತಿಳಿ ಹೇಳಲಾಯಿತು. ಕೇವಲ ಆಟ, ವಿಜ್ಞಾನ ಪ್ರದರ್ಶನ ಮಾತ್ರ ಸೀಮಿತವಾಗಿಸದೇ, ನಗರದ ಶ್ರೀ ರಾಮಕೃಷ್ಣ ವಿದ್ಯಾನೀಕೇತನ ಶಾಲೆ, ಸಂಸ್ಕೃತಿಯನ್ನು ಸಹ ಇಂದಿನ ಮಕ್ಕಳಲ್ಲಿ ರೂಢಿಸುವ ಮಹತ್ಕಾರ್ಯ ಮಾಡಿದೆ. ರಾಜ್ಯದ ನಾನಾ ಜಿಲ್ಲೆಗಳಿಂದ ಬಂದಂತಹ ವಿದ್ಯಾರ್ಥಿಗಳ ತಂದೆ, ತಾಯಂದಿರು ಮಕ್ಕಳ ಇಂತಹ ಸಂಸ್ಕೃತಿಯನ್ನು ನೋಡುವ ಭಾಗ್ಯ ಸಿಕ್ಕಿತ್ತಲ್ಲ ಎಂದು ಸಂತಸ ವ್ಯಕ್ತಪಡಿಸಿದರು. ಅಲ್ಲದೇ, ಭಾರತೀಯ ಆಚಾರ, ವಿಚಾರ, ಪರಂಪರೆಗಳನ್ನು, ವಿದ್ಯಾರ್ಥಿ ಜೀವನದಲ್ಲಿಯೇ ಕಲಿತರೆ ಉತ್ತಮ ಎಂಬುದು ವಿದ್ಯಾರ್ಥಿಗಳ ಮಾತಾಗಿತ್ತು.

ಹೊಸ ವರ್ಷಕ್ಕೆ ಇಲ್ಲಿನ ಮಕ್ಕಳು ಮಾಡಿದ ಪಾದ ಪೂಜೆ ತಂದೆ, ತಾಯಿಯಂದಿರ ಹೃದಯಕ್ಕೆ ತಟ್ಟಿತು. ಎಲ್ಲ ಮಕ್ಕಳ ಪೋಷಕರು ತಮ್ಮ ತಮ್ಮ ಮಕ್ಕಳಿಂದ ಪೂಜೆಗೆ ಅರ್ಹರಾಗಿ ಮಕ್ಕಳ ಶ್ರೇಯಸ್ಸಿಗೆ ಕಾರಣರಾದರು.

ಇದನ್ನೂ ಓದಿ | Justice B V Nagarathna | ಇತಿಹಾಸ ಬರೆಯಲಿದ್ದಾರೆ ಭಿನ್ನ ವ್ಯಕ್ತಿತ್ವದ ಕನ್ನಡತಿ ಜಸ್ಟೀಸ್ ಬಿ.ವಿ ನಾಗರತ್ನ!

Exit mobile version