Site icon Vistara News

Nirman 2023 Exhibition | ಇಂದಿನಿಂದ 3 ದಿನ ಬಳ್ಳಾರಿಯಲ್ಲಿ ನಿರ್ಮಾಣ್‌-2023- ಮನೆ ನಿರ್ಮಾಣ ಸಾಮಗ್ರಿಗಳ ವಸ್ತು ಪ್ರದರ್ಶನ

Nirman 2023

ಬಳ್ಳಾರಿ: ಬಳ್ಳಾರಿಯ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಎಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಸ್ಟ್‌ ವತಿಯಿಂದ ನಿರ್ಮಾಣ್ ೨೦೨೩ ಮನೆ ನಿರ್ಮಾಣ ಸಾಮಗ್ರಿಗಳ ವಸ್ತು ಪ್ರದರ್ಶನ (Nirman 2023 Exhibition) ಶುಕ್ರವಾರ ಆರಂಭಗೊಂಡಿದೆ. ಜನವರಿ ೬ರಿಂದ ಆರಂಭಗೊಂಡಿರುವ ಈ ಪ್ರದರ್ಶನ ಜನವರಿ ೮ರವರೆಗೆ ಇರುತ್ತದೆ. ಬಳ್ಳಾರಿ ಕೋರ್ಟ್ ರಸ್ತೆಯಲ್ಲಿರುವ ಕಮ್ಮಭವನದಲ್ಲಿ ಪ್ರತಿದಿನ ಬೆಳಿಗ್ಗೆ ೧೦ ಗಂಟೆಯಿಂದ ರಾತ್ರಿ ೮ ಗಂಟೆವರೆಗೆ ಪ್ರದರ್ಶನ ಏರ್ಪಡಿಸಲಾಗಿದೆ. ವಿಸ್ತಾರ ಮೀಡಿಯಾ, ಎಸಿಸಿ ಹಾಗೂ ಕಜಾರಿಯ-ಮಹದೇವ್ ಗ್ರಾನೈಟ್ಸ್ ಈ ಜನೋಪಯೋಗಿ ಪ್ರದರ್ಶನಕ್ಕೆ ಸಹಯೋಗ ನೀಡಿವೆ.

ಎಲ್ಲಿ, ಯಾವಾಗ?: ಜ.೬,೭,೮ರಂದು ಕಮ್ಮಭವನದಲ್ಲಿ ಬೆಳಿಗ್ಗೆ ೧೦ ರಿಂದ ಸಂಜೆ ೮ ಗಂಟೆವರೆಗೆ
ಆಯೋಜನೆ: ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಆಂಡ್ ಆರ್ಕಿಟೆಕ್ಟ್ಸ್, ಬಳ್ಳಾರಿ

ಡಿಸಿಯಿಂದ ಚಾಲನೆ-ತಜ್ಞರಿಂದ ಕಾರ್ಯಾಗಾರ
ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಎಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಸ್ಟ್‌ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಸಂಜೀವ್‌ ಕುಮಾರ್‌, ಅಧ್ಯಕ್ಷ ಹೊಸೂರು ಈಶ್ವರಗೌಡ ಅವರು ವಸ್ತುಪ್ರದರ್ಶನದ ಬಗ್ಗೆ ವಿಸ್ತಾರಕ್ಕೆ ಸಮಗ್ರ ಮಾಹಿತಿ ನೀಡಿದ್ದಾರೆ. ಜ.೬ರಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಚಾಲನೆ ನೀಡಿದರು. ಬಿಡಿಸಿಸಿ ಆ್ಯಂಡ್ ಐನ ಅಧ್ಯಕ್ಷರಾದ ಶ್ರೀನಿವಾಸ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಚೆನ್ನೈ ವಿ. ಶೇಷಾದ್ರಿ ಅವರು ಫೈರ್ ಆ್ಯಂಡ್ ಕನ್‌ಸ್ಟ್ರಕ್ಷನ್‌ ಸೇಪ್ಟಿ ಬಗ್ಗೆ ಮತ್ತು ಶಶಿಧರ್ ಲಿಂಗಂ ವಾಟರ್ ಪ್ರೂಫಿಂಗ್ ಇನ್‌ ಬಿಲ್ಡಿಂಗ್ಸ್ ವಿಷಯವಾಗಿ ವಿವರ ನೀಡುವರು.

ವಸ್ತು ಪ್ರದರ್ಶನದಲ್ಲಿ ಏನೇನಿದೆ?
ಮೂರು ದಿನಗಳ ಕಾಲ ನಡೆಯುವ ವಸ್ತು ಪ್ರದರ್ಶನದಲ್ಲಿ ಮನೆಯ ಇಂಟೀರಿಯರ್ ಮತ್ತು ಎಕ್ಟೀರಿಯರ್‌ ಸಾಮಗ್ರಿಗಳ ಸಂಬಂಧಪಟ್ಟಂತೆ ಸುಮಾರು ೫೫ ಕಂಪನಿಗಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸಲಿವೆ.

ಜ.೭ರಂದು ಬೆಳಗ್ಗೆ ೧೦ ಗಂಟೆಯ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರ ಖಾಜಾ ಮೊಹಿನುದ್ದೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜ.೮ರಂದು ಬೆಳಿಗ್ಗೆ ೫.೩೦ಕ್ಕೆ ಮ್ಯಾರಥಾನ್ ಓಟವನ್ನು ಕನಕದುರ್ಗಮ್ಮ ದೇವಸ್ಥಾನದಿಂದ ನಡೆಯಲಿದೆ. ಎಸ್ಪಿ ರಂಜಿತ್ ಕುಮಾರ್ ಬಂಡಾರು ಚಾಲನೆ ನೀಡಲಿದ್ದಾರೆ.

ವಸ್ತುಪ್ರದರ್ಶನದಲ್ಲಿ ಭಾಗವಹಿಸುವವರು
ಸಿಂಪೋನಿ ಸುರೇಶ್, ಕಾಮಧೇನು ಸ್ಟೀಲ್, ಕರ್ನಾಟಕ ಸಾಮಿಲ್, ನಿಪ್ಪೋನ್ ಪೇಂಟ್ಸ್‌, ಆರ್ಕಿಡ್‌ ಪ್ಲೈವುಡ್‌, ಶ್ರೀ ಭವಾನಿ ಫ್ಯಾಬ್ರಿಕ್ಸ್, ವೆದರ್ ರೆಫ್ರಿಜರೇಟರ್‌, ಬ್ಲೂ ಸ್ಟಾರ್, ಪಂಕಜ್ ಪ್ಲೈವುಡ್‌, ಅಲ್ಟ್ರಾಟೆಕ್ ಸಿಮೆಂಟ್, ಇಸ್ತಿಕ್ ಹೋಮ್ಸ್ ಆ್ಯಂಡ್ ಪ್ರಾಪರ್ಟಿಸ್, ಸಾಯಿ ಓಪನಿಂಗ್ ಅಂಡ್ ಎಂಪೋರಿಯಂ ಯುಪಿವಿಸಿ ವಿಂಡೋ ಆ್ಯಂಡ್ ಡೋರ್ಸ್, ಶ್ರೀ ಮಣಿಕಂಠ ಎಂಟರ್ಪ್ರೈಸಸ್, ಯುಪಿವಿಸಿ ವಿಂಡೋ ಆ್ಯಂಡ್ ಡೋರ್ಸ್, ಸಬೂರಿ ಪ್ಲೈವುಡ್ , ಗ್ರೇ‌ಟ್‌ ವೈಟ್‌ ಎಲೆಕ್ಟ್ರಿಕಲ್ಸ್ (ಉಲ್ಲಾಸ್), ಪವನ್ ಇಂಟೀರಿಯರ್ಸ್, ಬಾಸ್ಕೋ ಮುರಹರಿ ಜನರಲ್ ಸ್ಟೋರ್, ಗೋದ್ರೇಜ್ ಮುರಹರಿ ಜನರಲ್ ಸ್ಟೋರ್, ರಾಯಲ್ ಟಚ್, ಅಂಬಿಕಾ ಹಾರ್ಡ್‌ವೇರ್‌ , ಶ್ರೀ ಲಕ್ಷ್ಮಿ ನರಸಿಂಹ ಟ್ರೇಡರ್ಸ್, ಇರೋ ಬಾಂಡ್, ಸಂತೋಷ್ ಫರ್ನಿಶಿಂಗ್, ರಾಮ್ ಫರ್ನಿಚರ್, ಶ್ರೀ ಶಿವಶಕ್ತಿ ಟಿಂಬರ್ ಡಿಪೋ, ಪರಿವಾರ್‌ ಪೈಪ್ಸ್‌ ಆ್ಯಂಡ್ ಫಿಟ್ಟಿಂಗ್ಸ್‌, ಕೆರೋವಿಟ್ ಬೈ ಕಜಾರಿಯಾ, ದಾಲ್ಮಿಯಾ ಸಿಮೆಂಟ್, ಶ್ರೇಯಸ್ ಎಂಟರ್ ಪ್ರೈಸಸ್, ಸ್ಟೈಲಿಷ್ ಲಿವಿಂಗ್ ನಕ್ಸೊನ್, ರೋಟಿಸ್‌ ಎಲವೇಟರ್‌, ವಟ್ಟಮ್ ಐರನ್ ಮಾರ್ಟ್, ಗ್ರೀಲ್‌ ಪ್ಲೇ ಅನೂಪ್, ಎಸಿಇ ಬಾಂಡ್, ಸ್ಲೀಕ್ ಕಿಚನ್, ರೂಫಿಂಗ್ ಸಿಸ್ಟಮ್, ಏಷ್ಯನ್ ಪೇಂಟ್ಸ್, ಲೀಸಾ ಸ್ವಿಚಸ್, ಅಲ್ಫಾ ಫೆಬ್ ಲಿಮಿಟೆಡ್, ಶಾರದಾ ಎಂಟರ್ಪ್ರೈಸಸ್, ಡುಲೆಕ್ಸ್ ಪೇಂಟ್, ಜುವಾರಿ ಸಿಮೆಂಟ್, ಸಿಮೆಂಟ್ ಬ್ಯಾಂಕ್, ಎವರೆಸ್ಟ್ ಪ್ಲೈವುಡ್, ಪ್ರೆಸಿಡೆಂಟ್ ಸ್ಟೀಲ್, ಸರ್‌ಫೇಸ್, ಆರ್ಕಿಡ್‌ ಡೇಕೊರ್, ಸನ್ ಲೈಟಿಂಗ್ಸ್, ಕಜಾರಿಯಾ –ಮಹದೇವ ಗ್ರಾನೈಟ್, ವರ್ಲ್ಡ್‌ ಟೆಕ್ ಬಿಲ್ಡಿಂಗ್ ಸೊಲುಷನ್ಸ್, ಔಟ್ಒನ್ ಶ್ರೀ ಬಾಲಾಜಿ ಗ್ರಾನೈಟ್, ಕ್ರಿಸ್ಮರ್ ವಸ್ತುಪ್ರದರ್ಶನದಲ್ಲಿ ಭಾಗವಹಿಸಲಿವೆ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ವೇಗವಾಗಿ ಬದಲಾಗ್ತಿದೆ ಕಾರ್ಪೊರೇಟ್ ಜಗತ್ತು: ಓಡ್ತಾ ಇದ್ರೆ ಮಾತ್ರ ಉಳಿಯೋ ಕಾಲ ಇದು!

Exit mobile version