Site icon Vistara News

No Liquor shop: ಮಸೀದಿ ಮುಂಭಾಗ ಬೇಡ ಮದ್ಯದಂಗಡಿ; ರಿಪ್ಪನ್ ಪೇಟೆಯಲ್ಲಿ ಸಾರ್ವಜನಿಕರಿಂದ ಪ್ರತಿಭಟನೆ

#image_title

ಶಿವಮೊಗ್ಗ: ಇಲ್ಲಿನ ಹೊಸನಗರ ತಾಲೂಕಿನ ರಿಪ್ಪನ್‌ ಪೇಟೆಯಲ್ಲಿ ಜುಮ್ಮಾ ಮಸೀದಿ ಮುಂಭಾಗ ಮದ್ಯದಂಗಡಿ (No Liquor shop) ಪ್ರಾರಂಭಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಬಕಾರಿ ಇಲಾಖೆಯ ನಿರ್ಧಾರಕ್ಕೆ ಆಕ್ರೋಶ ಹೊರಹಾಕಿದ್ದು, ರಿಪ್ಪನ್‌ ಪೇಟೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಪ್ರಾರ್ಥನಾ ಮಂದಿರದ ಬಳಿ ನೂತನ ಮದ್ಯದಂಗಡಿ ಪ್ರಾರಂಭಿಸುವುದನ್ನು ವಿರೋಧಿಸಿದ್ದಾರೆ. ಮೊಹಿಯುದ್ದೀನ್ ಜುಮ್ಮಾ ಮಸೀದಿ ಮುಂಭಾಗದಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗುತ್ತಿರುವುದಕ್ಕೆ ಸರ್ವ ಪಕ್ಷ ಹಾಗೂ ಮುಸ್ಲಿಂ ಸಂಘಟನೆ, ಮೊಹಿಯುದ್ದೀನ್ ಜುಮ್ಮಾ ಮಸೀದಿ ಸಮಿತಿ ಪ್ರತಿಭಟಿಸಿದೆ.

ಇದನ್ನೂ ಓದಿ: Tractor tragedy : ಟ್ರ್ಯಾಕ್ಟರ್ ಟೈರ್ ಬದಲಾಯಿಸುವಾಗ ಸ್ಲಿಪ್‌ ಆದ ಜಾಕ್ ; ಟ್ರಾಲಿ ಕೆಳಗೆ ಸಿಲುಕಿ ಇಬ್ಬರು ಮೃತ್ಯು

ಹೊಸನಗರ ರಸ್ತೆಯ ರಾಯಲ್ ಕಂಪರ್ಟ್ ಲಾರ್ಡ್‌ ಬಳಿ CL7 ಬಾರ್ ತೆರೆಯಲು ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇತ್ತ ಸಾರ್ವಜನಿಕರ ಪ್ರತಿಭಟನೆಯಲ್ಲಿ ರಿಪ್ಪನ್‌ಪೇಟೆ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಭಾಗಿಯಾಗಿದ್ದಾರೆ. ಹೊಸ ಬಾರ್ ತೆರೆಯಲು ಮುಂದಾಗಿರುವ ಕಟ್ಟಡದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

Exit mobile version