Site icon Vistara News

ಹಂದಿಗಳಂತೆ ಹತ್ತಾರು ಮರಿಗಳನ್ನು ಹೆರಬೇಕಿಲ್ಲ, ಹರ್ಷ, ಪ್ರವೀಣರಂಥ ಒಬ್ಬೊಬ್ಬ ಮಕ್ಕಳಿದ್ದರೆ ಸಾಕು ಎಂದ ಚೈತ್ರ ಕುಂದಾಪುರ

Chaitra kundapura

ಆನೇಕಲ್‌: ಹಂದಿಗಳಂತೆ ಹತ್ತಾರು ಮರಿಗಳನ್ನು ಹೆರುವುದಕ್ಕಿಂತ ಸಮಾಜಕ್ಕೆ ಮಾದರಿಯಾಗಬಲ್ಲ ಹರ್ಷ, ಪ್ರವೀಣರಂಥ ಒಬ್ಬೊಬ್ಬ ಮಕ್ಕಳಿದ್ದರೆ ಸಾಕು: ಹೀಗೆಂದು ಹೇಳಿದ್ದಾರೆ ಹಿಂದೂ ಹೋರಾಟಗಾರ್ತಿ ಚೈತ್ರಾ ಕುಂದಾಪುರ (Chaitra Kundapura). ಅವರು ಬುಧವಾರ ರಾತ್ರಿ ಆನೇಕಲ್‌ನ ಸಮೀಪದ ಮರಸೂರಿನಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಆಯೋಜನೆಗೊಂಂಡಿದ್ದ ಬೃಹತ್‌ ಜಾಗೃತಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಹತ್ತಾರು ಮಕ್ಕಳನ್ನು ಹುಟ್ಟಿಸಿದರೆ ಅವರು ಎಲ್ಲೋ ಬಾಂಬ್‌ ಹಾಕಲು ಹೋಗಿ ಮನೆಯ ಮರ್ಯಾದೆ ಕಳೆಯುತ್ತಾರೆ. ಒಬ್ಬೊಬ್ಬ ಮಕ್ಕಳಿದ್ದರೂ ಸಮಾಜಕ್ಕಾಗಿ ದುಡಿಯುತ್ತಾರೆ ಎಂದು ಹೇಳಿದರು ಚೈತ್ರಾ ಕುಂದಾಪುರ.

ʻʻತಮಿಳುನಾಡಿನ ಒಂದು ಊರಿನಲ್ಲಿ ವಕ್ಫ್ ಬೋರ್ಡ್ ಇಡೀ ಊರನ್ನೇ ಕಬಳಿಸಿ ಬೇರೆ ಧರ್ಮದ ಜನರನ್ನು ಖಾಲಿ ಮಾಡಿಸಿದೆ. ಗ್ರಾಮದ ಸಂಪೂರ್ಣ ದಾಖಲೆಗಳನ್ನು ತಮ್ಮ ಹೆಸರಿಗೆ ಮಾಡಿಕೊಂಡು ಹಿಂದೂಗಳನ್ನು ವಕ್ಫ್ ಬೋರ್ಡ್ ಖಾಲಿ ಮಾಡಿಸಿತ್ತುʼʼ ಎಂದು ಚೈತ್ರಾ ಕುಂದಾಪುರ ಹೇಳಿದರು.

ʻʻಅಪ್ಪ, ಅಮ್ಮನ ಮಾತು ಕೇಳದೆ ಅಫ್ತಾಬ್ ಹಿಂದೆ ಹೋದ ಶ್ರದ್ಧಾ ವಾಲ್ಕರ್‌ಳನ್ನು 35 ತುಂಡು ಮಾಡಿ ಫ್ರಿಜ್‌ನಲ್ಲಿ ಇಡಲಾಗಿತ್ತು. ಪ್ರೀತಿಸಿದ್ದ ಶ್ರದ್ಧಾಳನ್ನು ಅಫ್ತಾಬ್‌ ದಾರುಣವಾಗಿ ಸಾಯಿಸಿದ್ದಾನೆʼʼ ಎಂದು ಶ್ರದ್ಧಾಳ ಕಥೆ ಹೇಳಿದರು.

ಇನ್ನು ಕೆಲವರದ್ದು ಸ್ಲೋ ಪಾಯಿಸನ್‌ ಮತಾಂತರ

ʻʻಕತ್ತಿಯನ್ನು ಹಿಡಿದು ಬಂದು ಮತಾಂತರ ಮಾಡುವವರ ವಿರುದ್ಧವಾದರೆ ನಾವು ಎದೆಯೊಡ್ಡಿ ನಿಲ್ಲುತ್ತೇವೆ. ಇನ್ನು ಕೆಲವರಿದ್ದಾರೆ ಸ್ಲೋ ಪಾಯ್ಸನ್ ಇದ್ದಂತೆ. ಇವರು ಬಂದಿದ್ದೇ ಗೊತ್ತಾಗೋದಿಲ್ಲ. ಮನೆ ಬಾಗಿಲಿಗೆ ಅಕ್ಕಿ ಚೀಲವನ್ನು ತಂದು ಸಹಾಯ ಮಾಡ್ತೀವಿ ಅಂತಾರೆ. ನಮ್ಮ ಮನೆಯಲ್ಲಿರುವ ಭಗವದ್ಗೀತೆಯನ್ನು ತೆಗೆದು ಅವರ ಬೈಬಲ್ ಇಟ್ಟು ಕುತ್ತಿಗೆಯಲ್ಲಿದ್ದ ರುದ್ರಾಕ್ಷಿ ತೆಗೆದು ಅವರ ಮಾಲೆಯನ್ನು ಹಾಕಿ ಹೋಗ್ತಾರೆ. ಸ್ಲೋ ಪಾಯ್ಸನ್ ಗಳಷ್ಟು ಡೇಂಜರಸ್ ಬೇರೆ ಯಾರೂ ಇಲ್ಲ. ಸಹಾಯ ಮಾಡುವ ನೆಪದಲ್ಲಿ ಮತಾಂತರ ಮಾಡಲು ಬರುವವರ ವಿರುದ್ಧ ಎಚ್ಚರಿಕೆಯಿಂದ ಇರಬೇಕುʼʼ ಎಂದು ಹೇಳಿದರು ಚೈತ್ರಾ.

ಪವರ್‌ ಕಟ್‌ಗೆ ಕೆಂಡಾಮಂಡಲ

ಕಾರ್ಯಕ್ರಮ ಶುರುವಾಗುವ ವೇಳೆಗೆ ಪವರ್ ಕಟ್ ಆಗಿದ್ದನ್ನು ನೋಡಿ ಚೈತ್ರಾ ಕುಂದಾಪುರ ಕೆಂಡಾಮಂಡಲರಾದರು. ʻʻನಿನ್ನೆಯ ತನಕ ಸಮಾವೇಶ ನಡೆಸಲು ನಿರ್ಬಂಧ ಹಾಕಿದ್ದರು. ಯಾವುದೋ ದೊಣ್ಣೆನಾಯಕ ಬಂದು ಕಾರ್ಯಕ್ರಮಕ್ಕೆ ಇಷ್ಟೇ ಜನ ಸೇರ್ಬೇಕು ಅಂತ ಹೇಳ್ತಾನೆ. ಪೊಲೀಸರು ನಿರ್ಬಂಧ ಹಾಕಿದ್ದಾರೆ. ನಿಮ್ಮ ತಾಕತ್ತನ್ನು ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಬೆಂಕಿ ಹಾಕಿದವರ ವಿರುದ್ಧ ತೋರಿಸಿ. ಮರಸೂರು ಗ್ರಾಮದಲ್ಲಿ ನಿಮ್ಮ ತಾಕತ್ತು ತೋರಿಸೋದಲ್ಲʼʼ ಎಂದು ಹೇಳಿದರು.

ʻʻಸ್ಟೇಷನ್‌ಗೆ ಬೆಂಕಿ ಹಾಕಲು ಬಂದರೂ ಸಹ ಇವರು ಹೆದರಿಕೊಂಡು ಕುಳಿತುಕೊಳ್ಳುತ್ತಾರೆ. ಹಿಂದೂ ಸಮಾವೇಶ ಮಾಡುವಾಗ ಇವರ ರೆಸ್ಟ್ರಿಕ್ಷನ್ ಪೌರುಷ ಜಾಸ್ತಿಯಾಗುತ್ತೆ. ಕೆಲವರು ಕಂಬದಲ್ಲಿ ಇರುವ ಕರೆಂಟ್ ತೆಗೆಯಬಲ್ಲರು. ಆದರೆ, ಹಿಂದೂಗಳ ಹೃದಯದಲ್ಲಿರು ಹಿಂದುತ್ವದ ಕರೆಂಟ್‌ನ್ನು ಆರಿಸಲು ಇವರಿಗೆ ಸಾಧ್ಯವೇʼʼ ಎಂದು ಸವಾಲು ಹಾಕಿದರು.

ಇದನ್ನೂ ಓದಿ : Cow slaughter | ಅಕ್ರಮ ಕಸಾಯಿ ಖಾನೆಗೆ ಹಿಂದು ಜಾಗರಣ ವೇದಿಕೆ ದಾಳಿ: ಇಬ್ಬರ ಬಂಧನ, ನಾಲ್ಕು ಗೋವುಗಳು ವಶಕ್ಕೆ

Exit mobile version